ವಿಜಯೇಂದ್ರಗೆ ಸಣ್ಣಪುಟ್ಟ ಸಮಸ್ಯೆಯಾದಾಗ ಜಗದ್ಗುರುಗಳು ನೊಂದುಕೊಳ್ಳುತ್ತಾರೆ. ನದಿ ಹರಿಯುವಾಗ ಕಲ್ಲು ಮಣ್ಣು, ಕಸ ಅಡ್ಡ ಬಂದರೂ ಅದನ್ನು ನಿವಾರಿಸಿಕೊಂಡು ತನ್ನ ಜಾಗವನ್ನು ಸೇರುತ್ತದೆ.

ನರಸಿಂಹರಾಜಪುರ (ಮಾ.12): ವಿಜಯೇಂದ್ರಗೆ ಸಣ್ಣಪುಟ್ಟ ಸಮಸ್ಯೆಯಾದಾಗ ಜಗದ್ಗುರುಗಳು ನೊಂದುಕೊಳ್ಳುತ್ತಾರೆ. ನದಿ ಹರಿಯುವಾಗ ಕಲ್ಲು ಮಣ್ಣು, ಕಸ ಅಡ್ಡ ಬಂದರೂ ಅದನ್ನು ನಿವಾರಿಸಿಕೊಂಡು ತನ್ನ ಜಾಗವನ್ನು ಸೇರುತ್ತದೆ. ಅದೇ ರೀತಿ ನನಗೆ ಯಾವುದೇ ಸಮಸ್ಯೆ ಬಂದರೂ ಗುರುಗಳ ಆಶೀರ್ವಾದದಿಂದ ಅದನ್ನು ಮೆಟ್ಟಿನಿಂತು, ಸಂಘಟನೆ ಮಾಡಿ ನನ್ನ ಗುರಿ ತಲುಪುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರ್ಮಿಕವಾಗಿ ನುಡಿದರು. ಮಂಗಳವಾರ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು. 

ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಇಚ್ಛೆ ನನ್ನದು. ಈಗ ವಿಧಾನಮಂಡಲದ ಅಧಿವೇಶನ ನಡೆಯುತ್ತಿದೆ. ಅಧಿವೇಶನದ ನಂತರ ಎಲ್ಲರೊಂದಿಗೆ ಕೂತು ಚರ್ಚೆ ನಡೆಸುತ್ತೇನೆ ಎಂದರು. 'ನಾನು ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಯಡಿಯೂರಪ್ಪ ಅವರಿಗೆ ಸಮಸ್ಯೆ ಬಂದಾಗ ಅವರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿದವರು ರಂಭಾಪುರಿ ಜಗದ್ಗುರುಗಳು. ಈಗ ನಾನು ಅವರ ಆಶೀರ್ವಾದ ಪಡೆಯಲು ಹೋದಾಗಲೂ ಅವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. 

ಅದರಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಿ, ಪಕ್ಷ ಬಲಪಡಿಸುವುದು ನನ್ನ ಉದ್ದೇಶ. ಎಲ್ಲದಕ್ಕೂ ಒಂದು ತಾರ್ಕಿಕ ಅಂತ್ಯ ಎಂಬುದಿದೆ' ಎಂದರು. ವೀರಶೈವ-ಲಿಂಗಾಯತ ಸಮಾವೇಶಕ್ಕೆ ಪರೋಕ್ಷ ಬೇಸರ ವ್ಯಕ್ತಪಡಿಸಿದ ವಿಜಯೇಂದ್ರ, 'ಯಾರೇ ಆಗ ಜಾತಿ ಸಮಾವೇಶ, ಒಂದು ಸಮಾಜದ ಸಭೆ ನಡೆಸುವುದು ಬಿಜೆಪಿಗೆ ಲಾಭ ತರುವುದಿಲ್ಲ. ಈ ಹಿಂದೆಯೇ ಜಾತಿ ಸಮ್ಮೇಳನ ಮಾಡಬಾರದು ಎಂದುನಾನುಸೂಚಿಸಿದ್ದೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ ಬಿಜೆಪಿ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ' ಎಂದು ಹೇಳಿದರು.

ಬಿ.ವೈ.ವಿಜಯೇಂದ್ರ ಕೆಳಗಿಳಿಸಲು ಮಹಾರಾಷ್ಟ್ರ ಸಿಎಂ ದೇವೇಂದ್ರಗೆ ಭಿನ್ನರ ಮೊರೆ

ಚಿನ್ನ ಸ್ಮಗ್ಲಿಂಗ್ ಹಿಂದಿರುವ ಸಚಿವರ ಹೆಸರು ಬಹಿರಂಗಪಡಿಸಿ: ರನ್ಯಾ ರಾವ್ ಚಿನ್ನ ಸ್ಮಗ್ಲಿಂಗ್ ಹಿಂದೆ ಕೆಲವು ಸಚಿವರು ಇರುವ ಮಾಹಿತಿ ಇದ್ದು, ಅಂಥ ಸಚಿವರ ಹೆಸರನ್ನು ಬಹಿರಂಗಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಚಿನ್ನ ಕಳ್ಳಸಾಗಣೆ ಹಿನ್ನೆಲೆಯಲ್ಲಿ ಬಂಧಿತರಾದ ರನ್ಯಾ ರಾವ್ ಹಿಂದೆ ಅನೇಕ ಘಟಾನುಘಟಿಗಳಿದ್ದಾರೆ ಎಂಬ ಅಂಶ ಹೊರಕ್ಕೆ ಬರುತ್ತಿದೆ. ರನ್ಯಾ ರಾವ್ ಅವರು ಕಳೆದ ಕೆಲವು ತಿಂಗಳುಗಳಲ್ಲಿ 30ಕ್ಕೂ ಹೆಚ್ಚು ಬಾರಿ ವಿದೇಶಕ್ಕೆ ಹೋಗಿ ಬಂದ ಮಾಹಿತಿ ಹೊರ ಬಿದ್ದಿದೆ. ಪ್ರತಿ ಬಾರಿಯೂ ಬೆಂಗಳೂರಿಗೆ ಮರಳಿ ಬಂದಾಗ ಅವರಿಗೆ ಸಂಪೂರ್ಣವಾದ ಪ್ರೊಟೋಕಾಲ್ ವ್ಯವಸ್ಥೆ ನೀಡಲಾಗುತ್ತಿತ್ತು ಎಂದು ಆರೋಪಿಸಿದರು.