ಬಿಜೆಪಿಗೆ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ: ಕಮಲಕ್ಕೆ ವಿಜಯಪತಾಕೆ

ಬಿಜೆಪಿ 200 ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಧಿಕಾರ ಹಿಡಿಯುವುದು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ. 

West Bengal Election BJP Will win in More than 200 Seats Says Amit Shah snr

ನವದೆಹಲಿ (ಫೆ.20): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಹುಮತ ಪಡೆಯಲಿದೆ ಎಂಬ ಚುನಾವಣಾ ಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ, ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ವಿಜಯ ಪತಾಕೆ ಮೆರೆದು, ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪ್ರತಿಪಾದಿಸಿದ್ದಾರೆ. ತನ್ಮೂಲಕ ದುರಾಡಳಿತ ನಡೆಸುತ್ತಿರುವ ಮಮತಾ ಸರ್ಕಾರವನ್ನು ರಾಜ್ಯದ ಜನತೆ ಕಿತ್ತೆಸೆಯಲಿದ್ದಾರೆ ಎಂದರು.

ಝೀ ಸುದ್ದಿ ವಾಹಿನಿಗೆ ಶುಕ್ರವಾರ ವಿಶೇಷ ಸಂದರ್ಶನ ಶಾ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ, ರಾಜ್ಯದ ಕಾನೂನು-ಸುವ್ಯವಸ್ಥೆ ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಇನ್ನು ಸಿಎಎ ಬಗ್ಗೆ ಪ್ರತಿಕ್ರಿಯಿಸಿ ನಿರಾಶ್ರಿತರಿಗೆ ಪೌರತ್ವ ಕಲ್ಪಿಸುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅನ್ನು ಸಂಸತ್ತಲ್ಲಿ ಮಂಡಿಸಲಾಗಿದ್ದು, ಅದನ್ನು ರಾಷ್ಟಾ್ರದ್ಯಂತ ಜಾರಿ ಮಾಡಲಾಗುತ್ತದೆ. ತನ್ಮೂಲಕ ಕಾಂಗ್ರೆಸ್‌ ನೀಡಿದ್ದ ಭರವಸೆಯನ್ನು ಬಿಜೆಪಿ ಪಾಲಿಸುತ್ತಿದೆ ಎಂದು ಕಾಂಗ್ರೆಸ್‌ ಅನ್ನು ಸಹ ಪರೋಕ್ಷವಾಗಿ ತಿವಿದಿದ್ದಾರೆ.

ಮತ್ತೆ ಮೂವರು ಕಾಂಗ್ರೆಸ್‌ ಶಾಸಕರು ರಾಜೀನಾಮೆ: ಖಚಿತಪಡಿಸಿದ ಬಿಜೆಪಿ ನಾಯಕ

ಮಮತಾ ಬ್ಯಾನರ್ಜಿ ಅವರು ದೊಡ್ಡ ನಾಯಕಿಯೇ, ಆದರೆ ಅವರ ಸರ್ಕಾರ ಬಂಗಾಳ ಸಂಸ್ಕೃತಿ ಮೇಲೆ ಹೆಚ್ಚಿನ ಹಾನಿ ಮಾಡಿದೆ. ಹೀಗಾಗಿ ಮಮತಾ ಸರ್ಕಾರವನ್ನು ಜನ ತಿರಸ್ಕರಿಸಲಿದ್ದಾರೆ ಎಂದರು.

Latest Videos
Follow Us:
Download App:
  • android
  • ios