Vijay Sankalp Abhiyan: ಬೂತ್ ಮಟ್ಟದಿಂದ ಗೆದ್ದು ದೇಶ ಆಳುತ್ತೇವೆ; ದಂಡೇಲಿಯಲ್ಲಿ ಗುಡುಗಿದ ಪೂಜಾರಿ

ರಾಜ್ಯದಲ್ಲಿ 58 ಸಾವಿರಕ್ಕೂ ಹೆಚ್ಚು ಮತಗಟ್ಟೆಬೂತ್‌ಗಳಿವೆ. ಪ್ರತಿಯೊಂದು ಬೂತ್‌ನಲ್ಲೂ ಕಾರ್ಯಕರ್ತರು ಹೆಚ್ಚಿನ ಪ್ರಮಾಣದ ಮತಗಳನ್ನು ಸೆಳೆಯಬೇಕು. ಇದರಿಂದ ರಾಜ್ಯ, ದೇಶವನ್ನು ಪಕ್ಷ ಆಳ್ವಿಕೆ ಮಾಡಬಹುದಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

We will rule the country by winning from the booth level says srinivas pujari  at dandeli rav

ದಾಂಡೇಲಿ (ಜ.3) : ರಾಜ್ಯದಲ್ಲಿ 58 ಸಾವಿರಕ್ಕೂ ಹೆಚ್ಚು ಮತಗಟ್ಟೆಬೂತ್‌ಗಳಿವೆ. ಪ್ರತಿಯೊಂದು ಬೂತ್‌ನಲ್ಲೂ ಕಾರ್ಯಕರ್ತರು ಹೆಚ್ಚಿನ ಪ್ರಮಾಣದ ಮತಗಳನ್ನು ಸೆಳೆಯಬೇಕು. ಇದರಿಂದ ರಾಜ್ಯ, ದೇಶವನ್ನು ಪಕ್ಷ ಆಳ್ವಿಕೆ ಮಾಡಬಹುದಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ದಾಂಡೇಲಿ(Dandeli) ತಾಲೂಕಿನ ಮಂಡಳದ ಅಂಬಿಕಾನಗರ ಗ್ರಾಪಂನ ಜಮಗಾ ಗ್ರಾಮದಲ್ಲಿ ಉ.ಕ. ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ನಡೆದ ‘ಬೂತ್‌ ವಿಜಯ ಸಂಕಲ್ಪ(Vijaya sankalpa) ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

Assembly electioin: ಬಿಜೆಪಿಗೆ 150 ಸ್ಥಾನ ಖಚಿತ: ಕೋಟಾ ಶ್ರೀನಿವಾಸ ಪೂಜಾರಿ

ಯಾರು ಬೂತ್‌ ಮಟ್ಟದಲ್ಲಿ ಗೆಲ್ಲುತ್ತಾನೋ ಆ ವ್ಯಕ್ತಿ ಚುನಾವಣೆ ಮೂಲಕ ರಾಜ್ಯ ಮತ್ತು ಕೇಂದ್ರದ ಅಧಿಕಾರದ ಸೂತ್ರವನ್ನು ಹಿಡಿಯಲು ಸಾಧ್ಯವಿದೆ. ಬೂತ್‌ ಮೂಲಕ ನಾವು ಕ್ಷೇತ್ರ ಗೆಲ್ಲುತ್ತೇವೆ. ಕ್ಷೇತ್ರದ ಮೂಲಕ ಜಿಲ್ಲೆ ಗೆಲ್ಲುತ್ತೇವೆ. ಜಿಲ್ಲೆಯ ಮೂಲಕ ರಾಜ್ಯವನ್ನು ಗೆದ್ದು, ಉತ್ತಮ ಆಡಳಿತ ನೀಡಿ ಕೇಂದ್ರವನ್ನು ಗೆಲ್ಲುವ ಮೂಲಕ ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ ಅಧಿಕಾರಕ್ಕೆ ಬರುವಂತೆ ಬೂತ್‌ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇನ್ನು ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai) ಸರ್ಕಾರ ರೈತರ(Farmers), ನೇಕಾರರ, ಮೀನುಗಾರರ, ಟೇಲರ್‌ ಮಕ್ಕಳಿಗೆ ವಿದ್ಯಾನಿಧಿಯಾಗಿ ಕೊಡುವ ವ್ಯವಸ್ಥೆಯನ್ನು ಮಾಡಿದ್ದಾರೆ. 10 ತರಗತಿಯಿಂದ ಉನ್ನತ ಶಿಕ್ಷಣಗಳಾದ ಇಂಜಿನಿಯರಿಂಗ್‌, ಮೆಡಿಕಲ್‌ ಓದಲು ಹೋಗು ಪ್ರತಿಯೊಬ್ಬ ಅರ್ಹ ವಿದ್ಯಾರ್ಥಿಗಳಿಗೆ ಆಯಾ ವರ್ಗಗಳಿಗೆ ತಕ್ಕಂತೆ ವಿದ್ಯಾನಿಧಿಯನ್ನು ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ಕೊರೋನಾ(Covid-19) ಕಾಲದಲ್ಲಿ ಆಯುಷ್‌ಮಾನ್‌ ಭಾರತ ಯೋಜನೆ(Ayushman bharat yojana) ಕೊಟ್ಟೆವು. ಅದರಿಂದ ಕುಟುಂಬಗಳು ಬೀದಿ ಪಾಲಾಗುವುದನ್ನು ತಪ್ಪಿಸಿದ ಸರ್ಕಾರ ನಮ್ಮದು. ಮೋದಿ ನೇತೃತ್ವದಲ್ಲಿ ಶಕ್ತಿಶಾಲಿ, ಸಮರ್ಥ, ಸ್ವಾಭಿಮಾನ ಭಾರತ ನಿರ್ಮಾಣ ಮಾಡುತ್ತೇವೆ. ಇಡೀ ಜಗತ್ತು ತಿರುಗಿ ನೋಡುವಂತೆ ಭಾರತ ಅಭಿವೃದ್ಧಿಗೊಳ್ಳುತ್ತಿದೆ. ಅನೇಕ ರಾಷ್ಟ್ರಗಳು ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿದ್ದರೂ ಭಾರತ ಮಾತ್ರ ಅದರಿಂದ ಹೊರತಾಗಿದೆ ಎಂದರು. ಮಾಜಿ ಶಾಸಕ, ಭಾಜಪ ರಾಜ್ಯ ಕಾರ್ಯಕಾರಿ ಸದಸ್ಯ ಸುನಿಲ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ಕಾರ್ಯದರ್ಶಿ ಬಸವರಾಜ ಕಲಶೆಟ್ಟಿ, ಹಳಿಯಾಳ ತಾಲೂಕು ಘಟಕ ಅಧ್ಯಕ್ಷ ಗಣಪತಿ ಕರಂಜಿಕರ, ಭಾಜಪ ದಾಂಡೇಲಿ ತಾಲೂಕು ಘಟಕಾಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ, ಪ್ರಮುಕರಾದ ನಂದು ಗಾಂವಕರ, ಟಿ.ಎಸ್‌. ಬಾಲಮಣಿ, ಶಾರದಾ ಪರಶುರಾಮ, ಬಾಗುಬಾಯಿ ತಾಟೆ, ಶಿವಾಜಿ ನರಸೆ, ವಿಠ್ಠಲ ಜಾನು ಮಿಸಾಳೆ, ದೇವು ಪಾವೆಸ್‌, ಬಾಬು ಇಂಗಳೆ, ಧೊಂಡು ಪಾಟೀಲ, ಬಸವರಾಜ ಹುಂಡೆಕರ, ವಿಠ್ಠ ಕೆವು ವಡಗೆ ಮುಂತಾದವರು ವೇದಿಕೆಯಲ್ಲಿದ್ದರು.

ಎಸ್ಸಿ, ಎಸ್ಟಿಗೆ ₹ 18649 ಕೋಟಿ ಬಿಡುಗಡೆ: ಕೋಟ ಶ್ರೀನಿವಾಸ ಪೂಜಾರಿ

ಭಾಜಪ ದಾಂಡೇಲಿ ತಾಲೂಕು ಘಟಕಾಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ ಪ್ರಾಸ್ತಾವಿಕ ನುಡಿದರು. ಭಾಜಪ ದಾಂಡೇಲಿ ತಾಲೂಕು ಘಟಕ ಪ್ರಧಾನ ಕಾರ್ಯದರ್ಶಿ ಗುರು ಮಠಪತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Latest Videos
Follow Us:
Download App:
  • android
  • ios