ಸಾವರ್ಕರ್ ರಕ್ತ ಹಂಚಿಕೊಂಡು ಹುಟ್ಟಿದ್ದೇವೆ: ಈಶ್ವರಪ್ಪ
- ಪ್ರತಿ ದೇಶಭಕ್ತ ಸಾವರ್ಕರ್ ರಕ್ತ ಹಂಚಿಕೊಂಡು ಹುಟ್ಟಿದ್ದೇವೆ: ಈಶ್ವರಪ್ಪ
- ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ‘ಸಾವರ್ಕರ್ ಸಾಮ್ರಾಜ್ಯ’ ಕಾರ್ಯಕ್ರಮ
- ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್‌ಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ
ಶಿವಮೊಗ್ಗ (ಅ.23) :ಭಾರತದಲ್ಲಿರುವ ಪ್ರತಿಯೊಬ್ಬ ದೇಶಭಕ್ತನೂ ವೀರ ಸಾವರ್ಕರ್ ರಕ್ತವನ್ನು ಹಂಚಿಕೊಂಡು ಹುಟ್ಟಿದ್ದೇವೆ. ಸಾವರ್ಕರ್ ಜೀವನ ಓದಿಕೊಂಡು ಶತ್ರುಗಳು ಯಾರು ದೇಶಭಕ್ತರಿದ್ದಾರೆ ಅವರ ತಂಟೆಗೆ ನಾವು ಹೋಗಲ್ಲ. ಆದರೆ, ನಮ್ಮ ತಂಟೆಗೆ ಬಂದರೆ ನಿಮ್ಮನ್ನ ಎಂದೂ ಬಿಡಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಅಯೋಧ್ಯೆ ಸ್ಫೋಟಿಸಲು ಪಿಎಫ್ಐ ಯೋಜನೆ, ಈಶ್ವರಪ್ಪ ಖಂಡನೆ
ಶ್ರೀಗಂಧ ಸಂಸ್ಥೆ, ಸಾಮಗಾನ ಸಹಯೋಗದಲ್ಲಿ ಶನಿವಾರ ಸೈನ್ಸ್ ಮೈದಾನದಲ್ಲಿ ಆಯೋಜಿಸಿದ್ದ ‘ಸಾವರ್ಕರ್ ಸಾಮ್ರಾಜ್ಯ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವರ್ಕರ್ ಇಡೀ ಜೀವನದಲ್ಲಿ ಎಷ್ಟುಕಷ್ಟಪಟ್ಟಿದ್ದಾರೆ ಎಂಬುದನ್ನು ನೋಡಿ, ಕೇಳಿ, ಓದಿ ತಿಳಿದುಕೊಂಡಿದ್ದೇವೆ. ಅವರು ಅಂಡಮಾನ್ ಜೈಲಿನಲ್ಲಿದ್ದ ಕೊಠಡಿಯನ್ನೂ ನಾವು ನೋಡಿಕೊಂಡು ಬಂದಿದ್ದೇವೆ. ಅಂದು ಬ್ರಿಟಿಷರ ಕೈಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಒದೆ ತಿನ್ನುತ್ತಿದ್ದರೆ ಯುವಕರು ಏನೂ ಮಾಡಲು ಸಾಧ್ಯವಾಗದೆ ಕೈ, ಕೈ, ಇಚುಕಿಕೊಳ್ಳುತ್ತಿದ್ದರು. ಆ ಕಾಲ ಮುಗಿದಿದೆ. ಈಗ ಸಾವರ್ಕರ್ ಫೆಕ್ಸ್ ಅನ್ನು ಯಾರಾದರೂ ಹರಿದುಹಾಕಿದರæ, ಅಂತ ಸಂಘಟನೆಯನ್ನು ಬ್ಯಾನ್ ಮಾಡುವ ಪರಿಸ್ಥಿತಿ ಬಂದಿದೆ. ಇಂದು ಯುವಕರು ಸಿಳ್ಳೆ, ಚಪ್ಪಾಳೆ ಹೊಡೆದು ಭಾರತಾಂಬೆಗೆ ಜೈಕಾರ ಕೂಗುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಯಾವ ಭಾಗದಲ್ಲೂ ಸಾವರ್ಕರ್ ಪೋಟೋವನ್ನು ಹರಿದುಹಾಕುವ ಧೈರ್ಯ ಮಾಡಲ್ಲ ಎಂದರು.
ಕರ್ನಾಟಕ ದೇವಸ್ಥಾನ ಸಂವರ್ಧನ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ಮಾತನಾಡಿ, ಸ್ವಾತಂತ್ರ್ಯದ 1857ರಲ್ಲಿ ನಡೆದ ಸಿಪಾಯಿ ದಂಗೆಗೆ ನಿಜವಾದ ಅರ್ಥ ಕೊಟ್ಟವೀರ ಸಾವರ್ಕರ್ ಇದು ಭಾರತೀಯರ ಸ್ವಾಭಿಮಾನದ ಪ್ರತೀಕ. ಸ್ವಾತಂತ್ರ್ಯ, ಸ್ವಾಭಿಮಾನಕ್ಕೆ ಧಕ್ಕೆಯಾದರೆ ನಾವು ಸಹಿಸಲ್ಲ ಎಂದು ಸಂದೇಶ ಸಾರಿದ್ದರು. ಅಂದು ಸಾವರ್ಕರ್ ಬರೆದ ಪುಸ್ತಕವನ್ನು ಬ್ರಿಟಿಷ್ ಸರ್ಕಾರ ಎರಡು ಬಾರಿ ಬ್ಯಾನ್ ಮಾಡಿತು. ಸಾವರ್ಕರ್ ಓದಿಗಾಗಿ ವಿದೇಶಕ್ಕೆ ಹೋದರು. ಇಲ್ಲಿಗೆ ಅವರು ಹೋಗಿದ್ದು, ಅವರ ಸ್ವಾರ್ಥಕ್ಕೆ ಅಲ್ಲ. ಓದನ್ನು ನೆಪವನ್ನಾಗಿಟ್ಟುಕೊಂಡು ವಿದೇಶದಲ್ಲಿದ್ದ ಕಾಂತ್ರಿಕಾರ ಸಂಪರ್ಕ ಹೊಂದಿ ವಿದೇಶದಲ್ಲೂ ಬ್ರಿಟಿಷ್ ವಿರುದ್ಧ ಹೋರಾಟದ ಕಿಚ್ಚನ್ನು ಹಚ್ಚಿದರು. ಅವರ ಹೋರಾಟಕ್ಕೆ ಉತ್ತರವಾಗಿ ಅವರನ್ನು ಬಂಧನ ಮಾಡಲಾಯಿತು ಎಂದು ತಿಳಿಸಿದರು.
ವೀರ ಸಾವರ್ಕರ ಅವರು ವಿದೇಶದಲ್ಲಿದ ದೇಶಭಕ್ತರಿಗೆ, ಕಾಂತ್ರಿಕಾರರಿಗೆ ಹೋರಾಟ ದಿಕ್ಕನ್ನು ತೋರಿಸಿದರು. 1920ರಲ್ಲಿ ಸಾವರ್ಕರ್‌ಗೆ ಕಾಂಗ್ರೆಸ್‌ನ ಪ್ರಮುಖರು ಕಾಂಗ್ರೆಸ್‌ನ ಸದಸ್ಯನಾಗುವಂತೆ ಕೋರಿದ್ದರು. ಆ ಸಂದರ್ಭದಲ್ಲಿ ಸಾವರ್ಕರ್ ಅವರು ಕಾಂಗ್ರೆಸ್‌ಗೆ ಸೇರದೇ ನಯವಾಗಿ ತಿರಸ್ಕಾರ ಮಾಡುತ್ತಾರೆ. 1965ರಲ್ಲಿ ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಾನೇದರೂ 1920ರಲ್ಲಿ ಕಾಂಗ್ರೆಸ್‌ಗೆ ಸೇರಿದ್ದರೆ ನಾನು ಧರ್ಮ, ದೇಶ ದ್ರೋಹಿ ಆಗುತ್ತಿದೆ. ಅಖಂಡ ಭಾರತ ಮಾತೆಯನ್ನು ತುಂಡು ಮಾಡಿದ ಕಾಂಗ್ರೆಸ್‌ಗೆ ಸೇರಲಿಲ್ಲ ಎಂಬ ಸಮಾಧಾನ ಇದೆ ಎಂದು ಹೇಳಿದ್ದರು ಎಂದು ವಿವರಿಸಿದರು.
ರಾಷ್ಟ್ರವಾದಿ ಚಿಂತಕಿ ಶ್ರೀಲಕ್ಷಿ ್ಮೕ ರಾಜಕುಮಾರ್ ಮಾತನಾಡಿ, ಶಿವಮೊಗ್ಗದಲ್ಲಿ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮದಲ್ಲಿ ಹೊತ್ತಿದ ಪಟಾಕಿ ಇಡೀ ದೇಶಕ್ಕೆ ಸಾವರ್ಕರ್ ಕುರಿತಾದ ಸಿಡಿಲು, ಗುಡುಗಾಗಿ ಪರಿಣಮಿಸಲಿದೆ. ಇದು ಇಲ್ಲಿಗೇ ನಿಲ್ಲೋದಿಲ್ಲ. ಒಬ್ಬ ಮಹಾ ರಾಷ್ಟ್ರಭಕ್ತನನ್ನು ಹೇಗೆ ಗೌರವಿಸಬೇಕು ಎಂಬುದಕ್ಕೆ ಇಡೀ ದೇಶಕ್ಕೆ ಶಿವಮೊಗ್ಗ ಮಾದರಿಯಾಗಿದೆ. ಜನರ ಹೃದಯದಲ್ಲಿ ಕೇಳುತ್ತಿರುವ ಸಾವರ್ಕರ್ ಸಿಂಹ ಘರ್ಜನೆ ಅವರ ಫ್ಲೆಕ್ಸ್ ಹರಿದವರಿಗೆ ಗೊತ್ತಾಗಬೇಕು. ಸಾವರ್ಕರ್ ಕುರಿತು ಯಾರು ತುಚ್ಚವಾಗಿ ಮಾತನಾಡುತ್ತಾರೋ ಅವರಿಗೆ ಮುಟ್ಟಬೇಕು ಎಂದರು.
ಕೆಲವರು ಜಾತಿ ಸಮಾವೇಶ ಮಾಡುತ್ತಾರೆ, ಹುಟ್ಟುಹಬ್ಬಕ್ಕೆ ಸಮಾವೇಶ ಮಾಡುತ್ತಾರೆ. ಆದರೆ, ಶಿವಮೊಗ್ಗದಲ್ಲಿ ಜನರನ್ನು ಸಾವರ್ಕರ್ ಹೆಸರಿನಲ್ಲಿ ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ. ಯಾವ ನೆಲದಲ್ಲಿ ಸಾವರ್ಕರ್‌ಗೆ ಅವಮಾನ ಆಯಿತು. ಆದರೆ, ಅದರ ವಿರುದ್ಧ ಯಾವ ಯುವ ನಾಯಕರು ಗಟ್ಟಿಯಾಗಿ ಧ್ವನಿ ಎತ್ತುವ ಕೆಲಸ ಮಾಡಲಿಲ್ಲ. ದೇಶಭಕ್ತಿ ಕೆಲಸವನ್ನು ಯಾರೇ ಮಾಡಿದರೂ ನಾನು ಅಭಿನಂದಿಸುತ್ತೇನೆ. ಮೂರು ಕಾಸಿನ ಕುರ್ಚಿನ ಆಸೆಗೆ ಸಾವರ್ಕರ್ ಅವರ ಮೌಲ್ಯವನ್ನು ಏನೂ ಅರ್ಥ ಮಾಡಿಕೊಂಡಿದ್ದಾರೆ. ನಿಮಗೆ ಬಿಜೆಪಿಯರ ಬಗ್ಗೆ ಟೀಕೆ ಮಾಡಬೇಕು ಎಂದರೆ ಬಿಜೆಪಿಯನ್ನು ಮಾತ್ರ ಟೀಕೆ ಮಾಡಿ. ಇದರಲ್ಲಿ ಸಾವರ್ಕರ್ ಅವರನ್ನು ಏಕೆ ಎಳೆದು ತರುತ್ತೀರಿ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತು ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಾಮಗಾನ ಸಂಸ್ಥೆ ಅಧ್ಯಕ್ಷ ಪ್ರಸನ್ನ ಮಹಿಷಿ, ಮಧುಕರ್, ಪಟ್ಟಾಭಿರಾಮ…, ಸುರೇಶ್ ಕುಮಾರ್, ಹಿಂದೂ ಮಹಾಸಭಾದ ಡಿ.ಎಸ್.ಅರುಣ್, ಕೆ.ಈ. ಕಾಂತೇಶ್, ಎಸ್.ದತ್ತಾತ್ರಿ, ಮೇಯರ್ ಸುನೀತಾ ಅಣ್ಣಪ್ಪ, ಪಾಲಿಕೆ ಸದಸ್ಯ ಚನ್ನಬಸಪ್ಪ ಮತ್ತಿತರರು ಇದ್ದರು.
ತೆರೆದ ಜೀಪಿನಲ್ಲಿ ಸಾತ್ಯಕಿ ಸಾವರ್ಕರ್ ಭವ್ಯ ಮೆರವಣಿಗೆ
ಶ್ರೀಗಂಧ ಸಂಸ್ಥೆ ಮತ್ತು ಸಾಮಗಾನ ಸಂಸ್ಥೆ ವತಿಯಿಂದ ಕಾರ್ಯಕ್ರಮ ಆಯೋಜನೆಗೊಂಡಿದ್ದ ಕಾರ್ಯಕ್ರಮದ ರಾರಯಲಿ ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿತು. ತೆರæದ ಜೀಪ್‌ನಲ್ಲಿ ವೀರ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರನ್ನು ಜಯಘೋಷಗಳೊಂದಿಗೆ ಸೈನ್ಸ್ ಮೈದಾನಕ್ಕೆ ಕರೆತರಲಾಯಿತು.
ಇನ್ನೂ ಇದಕ್ಕೂ ಮೊದಲು ವಿವಿಧ ಕಡೆಗಳಿಂದ ಅಮೀರ್ ಅಹಮದ್ ಸರ್ಕಲ್‌ಗೆ ಮೆರವಣಿಗಳು ಬಂದು ತಲುಪಿದವು. ಅಲ್ಲಿ ವೀರ ಸಾವರ್ಕರ್ ಅವರ ಘೋಷಣೆಗಳು ಮೊಳಗಿದವು. ಇನ್ನು ವೀರ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರನ್ನು ಕರæತರುತ್ತಿದ್ದ ಜೀಷ್ ಮುಂದೆ ಹಿಂದೂ ಹರ್ಷನ ಫೋಟೋವನ್ನು ಹಾಕಲಾಗಿತ್ತು. ಇದು ವಿಶೇಷವಾಗಿ ಗಮನ ಸೆಳೆಯಿತು.
ಸೀಗೆಹಟ್ಟಿಯುವಕರ ಬೈಕ್ ರಾರಯಲಿ ಜೊತೆಯಲ್ಲಿ ಬಂದಿದ್ದ ಹರ್ಷನ ಸಹೋದರಿ ಅಶ್ವಿನಿ ಅಮೀರ್ ಅಹಮದ್ ಸರ್ಕಲ…ನಲ್ಲಿ ‘ಅಮರ್ ರಹೇ.. ಅಮರ್ ರಹೇ..’ ಎಂಬ ಘೋಷಣೆಯನ್ನು ಕೂಗಿದರು. ಆನಂತರ ಕೇಸರಿ ಧ್ವಜವನ್ನು ಹಾರಿಸುತ್ತ ಗಮನ ಸೆಳೆದರು. ಅಮೀರ್ ಅಹಮದ್ ಸರ್ಕಲ್‌ನಲ್ಲಿ ನಿಲ್ಲಿಸಲಾಗಿದ್ದ ಕಟೌಚ್‌ಗೆ ಕೇಸರಿ ಶಾಲಿನೊಂದಿಗೆ ಮೆರವಣಿಗೆಯಲ್ಲಿ ಬಂದು ಹೂವಿನ ಹಾರ ಹಾಕಲಾಯಿತು. ಸಾವರ್ಕರ್ ಅವರ ಪ್ರತಿಮೆಯ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿ ಕಂಡುಬಂತು.
ಇಷ್ಟೆಅಲ್ಲದæೕ, ಸುಮಾರು 150 ಆಟೋಗಳ ಫ್ರಂಟ್ ಗ್ಲಾಸ್‌ಗೆ ಸ್ಕ್ರೀನಿಂಗ್ ಮಾಡಿಸಿ ಸಾವರ್ಕರ್ ಫೋಟೋ ಅಂಟಿಸಲಾಗಿತ್ತು. ಒನ್ ಸೈಡ್ ವೀವ್ ಇದ್ದ ಈ ಸ್ಕ್ರೀನಿಂಗ್ ಪೋಸ್ಟ್ ಸಾಕಷ್ಟುಕುತೂಹಲ ಮೂಡಿಸಿತ್ತು.
ಆಗಸ್ಟ್ 14ರಂದು ಶಿವಮೊಗ್ಗ ನಗರದಲ್ಲಿ ಸಾವರ್ಕರ್ ಅವರಿಗೆ ಬಹುದೊಡ್ಡ ಅವಮಾನವಾಯಿತು. ಅವಮಾನ ಮಾಡಿದವರಿಗೆ ಶಿವಮೊಗ್ಗ ಶಕ್ತಿಕೇಂದ್ರ ಎಂಬುದು ತಿಳಿದಿರಲಿಲ್ಲ. ಅದನ್ನು ವಿರೋಧಿಸಿ ಈ ನಗರದಿಂದ ಪ್ರಾರಂಭವಾದ ಜ್ಯೋತಿ, ಈಗ ನಾಡಿನೆಲ್ಲೆಡೆ ಹರಡಿದೆ. ಆ ಜ್ಯೋತಿ ಬೇರೆ ಯಾವುದು ಅಲ್ಲ, ಅದು ಸಾವರ್ಕರ್ ಅವರ ವಿಚಾರಧಾರೆ. ಅದು ಮುಂದುವರಿದು ಇಡೀ ದೇಶವನ್ನೇ ವ್ಯಾಪಿಸಲಿದೆ ಎಂದು ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದರು.
ಶ್ರೀಗಂಧ ಸಂಸ್ಥೆ, ಸಾಮಗಾನ ಇವರ ಸಹಯೋಗದಲ್ಲಿ ಶನಿವಾರ ಸೈನ್ಸ್ ಮೈದಾನದಲ್ಲಿ ಆಯೋಜಿಸಿದ್ದ ‘ಸಾವರ್ಕರ್ ಸಾಮ್ರಾಜ್ಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಂದು ರಾಷ್ಟ್ರವಿರೋಧಿ ಶಕ್ತಿಗಳು ಬೇರೆ ರೂಪದಲ್ಲಿ ನಮ್ಮ ಮಧ್ಯೆ ಇವೆ. ನಾವು ಅವುಗಳೊಂದಿಗೆ ಹೋರಾಡಬೇಕಾದರೆ, ಸಾವರ್ಕರ್ ಅವರ ಹಿಂದುತ್ವದ ಮಂತ್ರವನ್ನು ಮತ್ತೆ ಜಾಗೃತಗೊಳಿಸಬೇಕಿದೆ. ಸಿಂಧೂ ನದಿಯಿಂದ ನಮ್ಮ ಸಂಸ್ಕೃತಿ ವಿಸ್ತಾರವಾಗುತ್ತಾ ಸಾಗಿತು ಎಂದು ತಿಳಿಸಿದರು.
ಸಾವರ್ಕರ್ ಕುರಿತು ಟೀಕೆ, ರಾಹುಲ್ ಗಾಂಧಿ ಚಿತ್ರಕ್ಕೆ ಚಪ್ಪಲಿ ಬಡಿದು ಬಿಜೆಪಿ ಕಾರ್ಯಕರ್ತರ ಆಕ್ರೋಶ!
ಭಾರತದ ಮೇಲೆ ಅನೇಕ ವಿದೇಶಿಯರು ದಾಳಿ ಮಾಡಿದ್ದಾರೆ. ಹಿಂದೂ ಸಂಸ್ಕೃತಿ ಅಪಾರ ವೀರರಿಗೆ ಜನ್ಮ ನೀಡಿದೆ. ರಾಣಾ ಪ್ರತಾಪ್, ಗುರು ಗೋವಿಂದ್ ಸಿಂಗ್, ಛತ್ರಪತಿ ಶಿವಾಜಿ ಮಹಾರಾಜರಂಥ ವೀರರು ಅವುಗಳನ್ನು ತಡೆದು ಹಿಂದೂ ರಾಷ್ಟ್ರಕ್ಕೆ ಬಲಿದಾನ ನೀಡಿದ್ದಾರೆ. ನಮ್ಮ ಪೂರ್ವಜರು ರಾಷ್ಟ್ರಭಕ್ತರು, ರಾಷ್ಟ್ರನಿಷ್ಠರು. ಹಿಂದುಗಳನ್ನು ಒಂದು ಮಾಡಲು ಇದೊಂದು ಭಾವನೆ ಇದೊಂದು ಸಾಕು ಎಂದರು. ಸಾವರ್ಕರ್ ವಿಚಾರಧಾರೆ ಜಾತಿಯನ್ನು ಅಂತ್ಯಗೊಳಿಸುವಂತೆ ಹೇಳುತ್ತದೆ. ಆದ್ದರಿಂದ ಜಾತಿ ಅಂತ್ಯಕ್ಕೆ ಮತ್ತೆ ನಾವು ಹೋರಡಬೇಕು. ಸಾವರ್ಕರ್ ವಿಚಾರಧಾರೆಯನ್ನು ಸೋಲಿಸುವ ಶತ್ರು ಇನ್ನು ಹುಟ್ಟಿಲ್ಲ. ಮುಂದೆ ಹುಟ್ಟಿಲ್ಲ. ಹಿಂದುತ್ವದ ಧ್ವಜ ಹಿಡಿದು ನಿಂತಿರುವ ನೀವೆಲ್ಲಾ ಹಿಂದುತ್ವದ ಅಗ್ನಿಯನ್ನು ಮುಂದುವರಿಸಿ ಎಂದು ಕರೆ ನೀಡಿದರು. ‘ಸಾವರ್ಕರ್ ಸಾಮ್ರಾಜ್ಯ’ ಕಾರ್ಯಕ್ರಮದಲ್ಲಿ ನಗರದ ವಿವಿಧ ಭಜನ ಮಂಡಳಿಯ ಮಾತೆಯರು ಸಹಸ್ರ ಕಂಠದಲ್ಲಿ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.