ಸದನ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್ ಓಂ ಬಿರ್ಲಾ ಅವರು ಮಧ್ಯಾಹ್ನ 12ಕ್ಕೆ ಕಾಂಗ್ರೆಸ್‌ನ ಗೌರವ್ ಗೊಗೋಯ್ ಅವರನ್ನು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಆರಂಭಿಸುವಂತೆ ಸೂಚಿಸಿದರು. ಆಗ ಎದ್ದು ನಿಂತ ಜೋಶಿ, ‘11.55ಕ್ಕಷ್ಟೇ ರಾಹುಲ್ ಮಾತನಾಡಲಿದ್ದಾರೆ ಎಂದು ಸ್ಪೀಕರ್ ಕಚೇರಿಗೆ ನೋಟಿಸ್ ಹೋಗಿತ್ತು. ಆದರೆ 5 ನಿಮಿಷದಲ್ಲಿ ಏನು ಬದಲಾಯಿತೋ ಗೊತ್ತಿಲ್ಲ. ಯಾಕೆ ರಾಹುಲ್ ಸ್ಥಾನಕ್ಕೆ ಗೊಗೋಯ್ ಬಂದಿದ್ದಾರೆ?’ ಎಂದು ಪ್ರಶ್ನಿಸಿದ ಪ್ರಹ್ಲಾದ ಜೋಶಿ
ನವದೆಹಲಿ(ಆ.09): ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರಂಭಿಸದ ಬಗ್ಗೆ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ. ‘ಇಡೀ ಆಡಳಿತ ಪಕ್ಷದ ಸಂಸದರೇ ರಾಹುಲ್ ಗಾಂಧಿ ಅವರ ಭಾಷಣಕ್ಕೆ ಕಾತರರಾಗಿದ್ದಾರೆ. ಆದರೆ ರಾಹುಲ್ ಏಕೆ ಮೊದಲು ಮಾತನಾಡಲಿಲ್ಲ?’ ಎಂದು ಸದನದಲ್ಲಿ ಜೋಶಿ ಪ್ರಶ್ನಿಸಿದ್ದಾರೆ.
ಸದನ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್ ಓಂ ಬಿರ್ಲಾ ಅವರು ಮಧ್ಯಾಹ್ನ 12ಕ್ಕೆ ಕಾಂಗ್ರೆಸ್‌ನ ಗೌರವ್ ಗೊಗೋಯ್ ಅವರನ್ನು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಆರಂಭಿಸುವಂತೆ ಸೂಚಿಸಿದರು. ಆಗ ಎದ್ದು ನಿಂತ ಜೋಶಿ, ‘11.55ಕ್ಕಷ್ಟೇ ರಾಹುಲ್ ಮಾತನಾಡಲಿದ್ದಾರೆ ಎಂದು ಸ್ಪೀಕರ್ ಕಚೇರಿಗೆ ನೋಟಿಸ್ ಹೋಗಿತ್ತು. ಆದರೆ 5 ನಿಮಿಷದಲ್ಲಿ ಏನು ಬದಲಾಯಿತೋ ಗೊತ್ತಿಲ್ಲ. ಯಾಕೆ ರಾಹುಲ್ ಸ್ಥಾನಕ್ಕೆ ಗೊಗೋಯ್ ಬಂದಿದ್ದಾರೆ?’ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ರೈತರ ಕಷ್ಟ ಆಲಿಸುತ್ತಿಲ್ಲ, ರಾಹುಲ್ ಗಾಂಧಿ ತರಕಾರಿ ಮಂಡಿಗೆ ಭೇಟಿ ನೀಡಿದ ವಿಡಿಯೋ ಬಿಡುಗಡೆ
ಇದಕ್ಕೆ ತಿರುಗೇಟು ನೀಡಿದ ಗೊಗೋಯ್, ‘ಸ್ಪೀಕರ್ ಕಚೇರಿಯಲ್ಲಿ ನಡೆದಿದ್ದನ್ನು ಸದನದಲ್ಲಿ ಪ್ರಸ್ತಾಪಿಸುವಂತಿಲ್ಲ. ಹಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಕೂಡ ಸ್ಪೀಕರ್ ಕಚೇರಿಯಲ್ಲಿ ಏನು ಹೇಳಿದ್ದಾರೆ ಎಂಬುದನ್ನು ನಾವು ಬಹಿರಂಗ ಮಾಡಬೇಕಾಗುತ್ತದೆ’ ಎಂದರು. ಆಗ ಪ್ರಧಾನಿ ಹೆಸರು ಪ್ರಸ್ತಾಪಿಸಿದ್ದಕ್ಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದರು.
