Asianet Suvarna News Asianet Suvarna News

ಜೆಡಿಎಸ್‌ ಮುಗಿಸುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

  • ಜೆಡಿಎಸ್‌ ಮುಗಿಸುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದ ಸಂಘಟನೆ ಮಾತ್ರ ನಾವು ಮಾಡುತ್ತಿದ್ದೇವೆ
  • ಪ್ರಾದೇಶಿಕ ಪಕ್ಷವನ್ನು ಬಿಜೆಪಿ, ಕಾಂಗ್ರೆಸ್‌ ಮುಗಿಸುತ್ತವೆ ಎಂಬ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಹೇಳಿಕೆ ಕುರಿತು ಪ್ರತಿಕ್ರಿಯೆ
we never touch JDS Says CM Basavaraja bommai snr
Author
Bengaluru, First Published Oct 26, 2021, 6:43 AM IST

ವಿಜಯಪುರ (ಅ.26): ಜೆಡಿಎಸ್‌ (JDS) ಮುಗಿಸುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದ ಸಂಘಟನೆ ಮಾತ್ರ ನಾವು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ತಿಳಿಸಿದ್ದಾರೆ. 

ಪ್ರಾದೇಶಿಕ ಪಕ್ಷವನ್ನು ಬಿಜೆಪಿ (BJP), ಕಾಂಗ್ರೆಸ್‌ (Congress) ಮುಗಿಸುತ್ತವೆ ಎಂಬ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ (HD Devegowda) ಹೇಳಿಕೆ ಕುರಿತು ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವ​ರು, ಇನ್ನೊಂದು ಪಕ್ಷದ ಕಡೆಗೆ ನಾವು ತಿರುಗಿಯೂ ನೋಡುವುದಿಲ್ಲ. ಹೀಗಿರುವಾಗ ಜೆಡಿಎಸ್‌ ಮುಗಿಸುವ ಪ್ರಶ್ನೆ ಎಲ್ಲಿಂದ ಬರುತ್ತದೆ ಎಂದು ಮರು ಪ್ರಶ್ನೆ ಮಾಡಿದರು.

ವಿಧಾನಸೌಧಕ್ಕೆ ಬೀಗ ಎನ್ನುವ ಡಿಕೆಶಿ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

ಉಪ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೂ ಸೋಲು

ಸಿಂದಗಿ(Sindhagi), ಹಾನಗಲ್‌(Hangal) ಉಪ ಚುನಾವಣೆಯಲ್ಲಿ ಬಿಜೆಪಿ ಸುನಾಮಿ ಶುರುವಾಗಿದೆ. ಈ ಸುನಾಮಿಯಲ್ಲಿ ಕಾಂಗ್ರೆಸ್‌(Congress), ಜೆಡಿಎಸ್‌(JDS) ಎರಡೂ ಪಕ್ಷಗಳು ಧೂಳೀಪಟವಾಗಲಿವೆ. ಈ ಉಪ ಚುನಾವಣೆ ಮಾತ್ರವಲ್ಲ ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಗೆಲುವು ಪಕ್ಕಾ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ಸಿಂದಗಿ ಮತಕ್ಷೇತ್ರದಲ್ಲಿ ದಿನವಿಡೀ ಪ್ರಚಾರ ನಡೆಸಿದ ಅವರು ಪ್ರತಿಪಕ್ಷಗಳನ್ನು, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ ಮುಖಂಡರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ(Siddaramaiah) ಹಾಗೂ ಕಾಂಗ್ರೆಸ್‌ನ(Congress) ಇತರೆ ನಾಯಕರು ಬಿಜೆಪಿ ವಿರುದ್ಧ ಹತಾಶೆಯಿಂದ ಟೀಕೆ ಮಾಡುತ್ತಿದ್ದಾರೆ. ಈ ಮೊದಲು ಕಾಂಗ್ರೆಸ್‌ ಸೋತ ನಂತರ ಇಂಥ ಟೀಕೆ ಮಾಡುತ್ತಿತ್ತು. ಈಗ ಸೋಲುವ ಮೊದಲೇ ಈ ರೀತಿಯ ಟೀಕೆಗೆ ಮುಂದಾಗಿದೆ. ಈ ಮೂಲಕ ಚುನಾವಣೆಗೂ ಮೊದಲೇ ಕಾಂಗ್ರೆಸ್‌ ಸೋಲೊಪ್ಪಿಕೊಂಡಂತಾಗಿದೆ ಎಂದರು.

ಸಿಂದಗಿ ಸಮರ ಗೆಲ್ಲಲು ಸಿಎಂ ಬೊಮ್ಮಾಯಿ ರಣತಂತ್ರ..!

ಡಿಕೆಶಿ, ಸಿದ್ದು ಕಾಂಗ್ರೆಸ್‌ ಬೇರೆ ಬೇರೆ:

ದೇಶದಲ್ಲಿ ಮಹಾತ್ಮ ಗಾಂಧಿ ಕಾಂಗ್ರೆಸ್‌, ರಾಹುಲ್‌ ಗಾಂಧಿ(Rahul Gandhi) ಕಾಂಗ್ರೆಸ್‌ ಹೇಗೆ ಬೇರೆ ಬೇರೆಯೋ, ಅದೇ ರೀತಿ ಕರ್ನಾಟಕದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಕಾಂಗ್ರೆಸ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ ಬೇರೆ ಬೇರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಎತ್ತಿನಗಾಡಿ ಹಗ್ಗ ಸಿದ್ದರಾಮಯ್ಯ ಕೈಯಲ್ಲಿದ್ದರೆ, ಬಾರುಕೋಲು ಡಿ.ಕೆ.ಶಿವಕುಮಾರ್‌ ಕೈಯಲ್ಲಿದೆ. ಎತ್ತಿನಗಾಡಿಗೆ ಒಬ್ಬರು ಹೊಡೆಯುತ್ತಾರೆ, ಇನ್ನೊಬ್ಬರು ಎಳೆಯುತ್ತಾರೆ. ಹೀಗಾಗಿ, ಎತ್ತಿನಗಾಡಿ ಮುರಿದು ಬಿತ್ತು. ಇದೇ ರೀತಿ ಉಪ ಚುನಾವಣೆಯಲ್ಲೂ ಕಾಂಗ್ರೆಸ್‌ ಪತನವಾಗಲಿದೆ ಹೇಳಿದರು.

Follow Us:
Download App:
  • android
  • ios