Asianet Suvarna News Asianet Suvarna News

ಬಿಜೆಪಿಗೆ ಬಂದವರು ಮರಳಿ ಕೈ ಪಾಳಯಕ್ಕೆ : ಸಚಿವ ಎಸ್‌ಟಿಎಸ್‌ ಸ್ಪಷ್ಟನೆ

  • ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದವರು ಸೇರಿದಂತೆ ಇತರೆ ಬಿಜೆಪಿಗರು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂಬ ಹೇಳಿಕೆ
  • ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ
we never back To Congress says minister ST somashekar snr
Author
Bengaluru, First Published Oct 5, 2021, 11:26 AM IST
  • Facebook
  • Twitter
  • Whatsapp

ಬೆಂಗಳೂರು (ಅ.05): ಕಾಂಗ್ರೆಸ್‌ (Congress) ಬಿಟ್ಟು ಬಿಜೆಪಿಗೆ ಬಂದವರು ಸೇರಿದಂತೆ ಇತರೆ  ಬಿಜೆಪಿಗರು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂದು ಹೇಳಿಕೊಳ್ಳುವ ಮೂಲಕ ಕಾಂಗ್ರೆಸ್‌ ಬಂಡವಾಳ ಮಾಡಿಕೊಳ್ಳುತ್ತಿದೆ. ನಾವು ಯಾರೂ ಮರಳಿ ಕಾಂಗ್ರೆಸ್‌ಗೆ ಹೋಗುತ್ತಿಲ್ಲ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ (ST Somashekar) ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

 ಕಾಂಗ್ರೆಸ್‌ನ ಹಲವು ಶಾಸಕರು ನಮ್ಮನ್ನು ಸಂಪರ್ಕ ಮಾಡುತ್ತಿದ್ದಾರೆ. ನಾವು ಅವರಿಗೆ ಬಿಜೆಪಿ (BJP) ರಾಜ್ಯಾಧ್ಯಕ್ಷರನ್ನು ಸಂಪರ್ಕಿಸಲು ತಿಳಿಸಿದ್ದೇವೆ. ಪಕ್ಷಕ್ಕೆ ಸೇರ್ಪಡೆ ಮಾಡುವವರು ರಾಜ್ಯಾಧ್ಯಕ್ಷರು. ಅವರೇ ಭರವಸೆ ನೀಡಬೇಕು.

40 ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರ್ಪಡೆ : ಸತೀಶ ಜಾರಕಿಹೊಳಿ ಹೊಸ ಬಾಂಬ್‌

 ಅವರಿಗೆ ಸಮಗ್ರ ಮಾಹಿತಿ ಇರುತ್ತದೆ ಎಂದು ಹೇಳಿದರು. ಪಕ್ಷದ ರಾಜ್ಯಾಧ್ಯಕ್ಷರ ಆದೇಶದಂತೆ ತಿಂಗಳಿಗೆ ಎರಡು ಬಾರಿ ಪಕ್ಷದ ರಾಜ್ಯ ಕಚೇರಿಗೆ ಭೇಟಿ ನೀಡಬೇಕಾಗಿದೆ. ಅಲ್ಲಿ ಸಾರ್ವಜನಿಕರು ಮತ್ತು ಕಾರ್ಯಕರ್ತರ ಅಹವಾಲು ಆಲಿಸಿ ಪರಿಹರಿಸಲು ಸೂಚಿಸಿದ್ದಾರೆ.

 ಕೆಲವರು ಸಹಕಾರ ಇಲಾಖೆಗೆ ಸಂಬಂಧಿಸಿದ ಮಾಹಿತಿ ಕೇಳಿದ್ದು, ಸ್ಥಳದಲ್ಲಿಯೇ ನೀಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು (Siddaraju) ಭಾಗವಹಿಸಿದ್ದರು.

ಕಾಂಗ್ರೆಸ್‌ನಿಂದ ಬರಿ ಕಟ್ಟು ಕಥೆ: ಹಾಲಪ್ಪ ಆಚಾರ್‌

ಸೋಲಿನ ಭೀತಿ ಮತ್ತು ಅಧಿಕಾರದಿಂದ ದೂರವಾಗಿರುವುದರಿಂದ ಹತಾಶೆಗೊಂಡಿರುವ ಕಾಂಗ್ರೆಸ್‌ ನಾಯಕರು ಬರಿ ಕಥೆಗಳನ್ನು ಹೇಳುತ್ತಿದ್ದು, ಈಗ ಬಿಜೆಪಿಯ 40 ಶಾಸಕರು ಕಾಂಗ್ರೆಸ್‌ ಸೇರುತ್ತಾರೆ ಎಂಬ ಹೇಳಿಕೆಯೂ ಕಟ್ಟುಕಥೆಯಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ (Halappa Achar) ಹೇಳಿದರು.

ಕೊಪ್ಪಳ (Koppal) ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವೊಬ್ಬ ಬಿಜೆಪಿ ಶಾಸಕರು ಕಾಂಗ್ರೆಸ್‌ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಇನ್ನು ಉಪ ಚುನಾವಣೆಯಲ್ಲಿಯೂ ಗೆಲ್ಲುತ್ತೇವೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿ, ಮತ್ತೆ ಅಧಿಕಾರಕ್ಕೆ ಬರುತ್ತವೆ ಎಂದರು.

ರಾಜ್ಯದಲ್ಲಿ ಮರಳಿನ ಸಮಸ್ಯೆ ಇರುವುದು ಗೊತ್ತಿರುವ ಸಂಗತಿಯಾಗಿದೆ. ಬೇಡಿಕೆಯಷ್ಟುದೊರೆಯದೇ ಇರುವುದರಿಂದ ಅದು ಸಮಸ್ಯೆಯಾಗುತ್ತಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಹೊಸ ಮರಳು ನೀತಿಯನ್ನು ಜಾರಿ ಮಾಡಲಾಗುತ್ತಿದ್ದು, ಇದಕ್ಕೆ ಪರಿಹಾರ ದೊರೆಯಲಿದೆ. ಈಗಾಗಲೇ ಹಟ್ಟಿಗೋಲ್ಟ್‌ಮೈನ್‌ಗೆ ಮರಳು ಟೆಂಡರ್‌ ನೀಡಲಾಗಿದೆ ಎಂದರು.

ಮಾಜಿ ಸಚಿವ ಶಿವರಾಜ ತಂಗಡಗಿ (Shivarj Tangadagi) ಅವರದು ಬರಿ ಹಿಟ್‌ ಆ್ಯಂಡ್‌ ರನ್‌ ಕೇಸ್‌ ಆಗಿದೆ. ಅವರು ಯಾವುದನ್ನು ದಾಖಲೆ ಸಮೇತ ಹೇಳುವುದಿಲ್ಲ. ಸುಮ್ಮನೇ ಆರೋಪ ಮಾಡುತ್ತಾರೆ. ಈಗ ಕಾಂಗ್ರೆಸ್‌ ಕಾರ್ಯಕರ್ತನ ಕೊಲೆ ಯತ್ನ ಆರೋಪ, ಪೊಲೀಸ್‌ ಠಾಣೆಗಳು ಬಿಜೆಪಿ ಕಾರ್ಯಾಲಯಗಳಾಗಿವೆ ಎಂದು ಆರೋಪ ಮಾಡುವುದು ಅರ್ಥವಿಲ್ಲದ್ದು. ಹಾಗೊಂದು ವೇಳೆ ಅವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

Follow Us:
Download App:
  • android
  • ios