ಕಲ್ಯಾಣ ಕರ್ನಾಟಕವನ್ನು ಬಿಜೆಪಿ ಮುಕ್ತ ಮಾಡಿದ್ದೇವೆ: ಕಾಂಗ್ರೆಸ್ ಎಂಎಲ್‌ಸಿ ವಸಂತಕುಮಾರ್
ಕಲ್ಯಾಣ ಕರ್ನಾಟಕದಲ್ಲಿ ನಡೆದ ವಿವಿಧ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಲೋಕಸಭೆಯಲ್ಲಿ ಐದು ಸ್ಥಾನ ಗಳಿಸಿದೆ. ಸುರಪುರ ಬೈ ಎಲೆಕ್ಷನ್ ನಲ್ಲಿಯೂ ಕಾಂಗ್ರೆಸ್ ಗೆದ್ದಿದೆ. ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿ. ಬಿಜೆಪಿಯನ್ನು ಮೂಲೆಗುಂಪು ಮಾಡಿದ್ದೇವೆ: ಕೆಪಿಸಿಸಿ ಕಾರ್ಯದರ್ಶಿ ಹಾಗೂ ನೂತನ ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ್
ರಾಯಚೂರು(ಜೂ.11): ಕಲ್ಯಾಣ ಕರ್ನಾಟಕವನ್ನು ಬಿಜೆಪಿ ಮುಕ್ತ ಮಾಡಿದ್ದೇವೆ. ಎನ್‌ಡಿಎ ಸರಕಾರ ಹೆಚ್ಚಿನ ದಿನ ಇರುವುದಿಲ್ಲ. ಇವರು ಸೈದ್ಧಾಂತಿಕವಾಗಿ ಒಂದಾಗಲು ಸಾಧ್ಯವಿಲ್ಲ. ಒಂದಾಗಿದ್ದಾರೆ ಅಂದ್ರೆ ಅಧಿಕಾರದ ಆಸೆಗೆ ಒಂದಾಗಿದ್ದಾರೆ. ದೇಶದ ಅಭಿವೃದ್ಧಿಗೆ ಅಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ನೂತನ ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ್ ಹೇಳಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಜನರಿಂದ ಸಿಕ್ಕಿರೋದು ಅತಂತ್ರ ಫಲಿತಾಂಶ. ಬಿಜೆಪಿ ಓಟಕ್ಕೆ ಕಡಿವಾಣ ಹಾಕಿದ್ದೇವೆ. ಮುಂದಿನ ದಿನದಲ್ಲಿ ರಾಹುಲ್ ಗಾಂಧಿ ಅಧಿಕಾರ ಹಿಡಿಯುವಲ್ಲಿ ಸಂದೇಹವಿಲ್ಲ ಎಂದು ತಿಳಿಸಿದ್ದಾರೆ.
10 ವರ್ಷವಾದರೂ 100 ಸ್ಥಾನ ಗೆಲ್ಲಲಾಗಲಿಲ್ಲ: ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!
ಕಲ್ಯಾಣ ಕರ್ನಾಟಕದಲ್ಲಿ ನಡೆದ ವಿವಿಧ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಲೋಕಸಭೆಯಲ್ಲಿ ಐದು ಸ್ಥಾನ ಗಳಿಸಿದೆ. ಸುರಪುರ ಬೈ ಎಲೆಕ್ಷನ್ ನಲ್ಲಿಯೂ ಕಾಂಗ್ರೆಸ್ ಗೆದ್ದಿದೆ. ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿ. ಬಿಜೆಪಿಯನ್ನು ಮೂಲೆಗುಂಪು ಮಾಡಿದ್ದೇವೆ ಎಂದು ವಾಗ್ದಾಳಿಯನ್ನ ನಡೆಸಿದ್ದಾರೆ.
ಈ ಭಾಗದಲ್ಲಿ ಕಾಂಗ್ರೆಸ್ ಸಧೃಢವಾಗಿದೆ ಎಂದು ತೋರಿಸಿಕೊಟ್ಟಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಜನ ಬೆಂಬಲ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಗ್ಯಾರೆಂಟಿ ಯೋಜನೆಗಳು ಕೈ ಹಿಡಿದಿವೆ ಎಂದು ತಿಳಿಸಿದ್ದಾರೆ.