ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡಿ ನಾವು ಅಧಿಕಾರಕ್ಕೆ ಬಂದಿದ್ದೇವೆ: ಸಲೀಂ ಅಹಮ್ಮದ್

ಜನ ಕಾಂಗ್ರೆಸ್‌ಗೆ ಅಶೀರ್ವಾದ ಮಾಡಿದ್ದಾರೆ. ನಾವು ಗೆದ್ದಿದ್ದೇವೆ ಎಂದು ಬೀಗಲ್ಲ, ನುಡಿದಂತೆ ನಡೆಯುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ತಿಳಿಸಿದರು. 

We came to power by fighting against corruption Says Saleem Ahmed gvd

ಹುಬ್ಬಳ್ಳಿ (ಜೂ.24): ಜನ ಕಾಂಗ್ರೆಸ್‌ಗೆ ಅಶೀರ್ವಾದ ಮಾಡಿದ್ದಾರೆ. ನಾವು ಗೆದ್ದಿದ್ದೇವೆ ಎಂದು ಬೀಗಲ್ಲ, ನುಡಿದಂತೆ ನಡೆಯುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ತಿಳಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಜನ‌ ನಮಗೆ ಆಶೀರ್ವಾದ ಮಾಡಿದ್ದಾರೆ. ಭ್ರಷ್ಟಾಚಾರದ ವಿರುದ್ದ ನಾವು ಹೋರಾಟ ಮಾಡಿ ಅಧಿಕಾರಕ್ಕೆ ಬಂದಿದ್ದೇವೆ. ಭ್ರಷ್ಟಾಚಾರ ರಹಿತ ಆಡಳಿತ ಕೊಡಬೇಕು ಅನ್ನುವುದು ನಮ್ಮ ಉದ್ದೇಶ. ಈ ಮೂಲಕ‌ ಅಧಿಕಾರಿಗಳಿಗೆ ನಾವು ಎಚ್ಚರಿಕೆ ಕೊಡ್ತಿದ್ದೇವೆ ಎಂದರು. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡ್ತೀವಿ ಅಂತಾ ನಾವು ಹೇಳಿದ್ವಿ. 

ಅದೇ ರೀತಿ ನಮ್ಮ ಸರ್ಕಾರ ಕೆಲಸ ಮಾಡುತ್ತೆ. ಐದು ಗ್ಯಾರಂಟಿ ನಾವು ಘೋಷಣೆ ಮಾಡಿದ್ವಿ. ಮಹಿಳೆಯರಿಗೆ ಈಗಾಗಲೇ ಫ್ರೀ ಬಸ್ ಪಾಸ್ ಮಾಡಿದ್ದೇವೆ. ಇದು ದೇಶದ ಇತಿಹಾಸ ಎಂದರು. ಅನ್ನಭಾಗ್ಯ ಯೋಜನೆ ನಾವು ಜಾರಿ ಮಾಡೋಕೆ ಹೊರಟಿದ್ವಿ. ಅದು ತಡ ಆದರೆ ಅದಕ್ಕೆ ಕೇಂದ್ರ ಸರ್ಕಾರ ನೇರ ಹೊಣೆ. ಅಕ್ಕಿಯಲ್ಲಿ ರಾಜಕಾರಣ ಮಾಡಬೇಡಿ. ಇದು ಬಡವರ ಯೋಜನೆ,ಇದರಲ್ಲಿ ರಾಜಕಾರಣ ಮಾಡಬೇಡಿ. ಮುನಿಯಪ್ಪರನ್ನು ಮೂರು ದಿನ ಕಾಯಿಸಿದ್ದಾರೆ. ಇದು ರಾಜಕಾರಣ ಅಲ್ಲದೆ ಮತ್ತೇನು. ರಾಜ್ಯದಲ್ಲಿ 25 ಜನ ಸಂಸದರಿದ್ದಾರೆ. ಅವರು ನಮ್ಮ ರಕ್ಷಣೆಗೆ ಬರಬೇಕು. ಇದು ಬಡವರ ಕಾರ್ಯಕ್ರಮ, ಯಾಕೆ ಕೇಳಿ ಘೋಷಣೆ ‌ಮಾಡಬೇಕು. 

ಎಂಎಲ್‌ಸಿಯಾಗಿ ಆಯ್ಕೆಯಾಗಿದ್ದು ನನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ: ಜಗದೀಶ್‌ ಶೆಟ್ಟರ್‌

ಅಕ್ಕಿ ಇದ್ದರೂ ಕೊಡ್ತಿಲ್ಲ, ಇದಕ್ಕೆ ಕಾರಣ ಲೋಕಸಭೆ ಚುನಾವಣೆ. ಇವತ್ತು ಬಸ್ ಫ್ರೀ ಇದೆ, ಇದರಲ್ಲಿ ಕೇವಲ ಕಾಂಗ್ರೆಸ್ ಮಹಿಳೆಯರು ಓಡಾಡುತೀದಾರಾ ಎಂದು ಸಲೀಂ ಅಹಮ್ಮದ್ ಪ್ರಶ್ನಿಸಿದರು. ಅವರು ಅಕ್ಕಿ ಕೊಡಲಿ ಬಿಡಲಿ ನಾವ ಅಕ್ಕಿ ಕೊಡ್ತೀವಿ. ನಾವು ಬಿಜೆಪಿಯವರ ತರಹ ಅಲ್ಲ, ಕೊಟ್ಟ ಮಾತಿನಂತೆ ನಡೆದುಕೊಳ್ತೀವಿ. ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗ್ತಾರೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಬಿಜೆಪಿ ಅಧಿಕಾರಕ್ಕೆ ಬಂದು 9 ವರ್ಷ ಆಯ್ತು ,ಅವರ ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ, ಬೆಲೆ ಏರಿಕೆಯಾಗಿದೆ ಇದಕ್ಕೆ ಉತ್ತರ ಇದೆಯಾ. ಎಲ್ಲಿದೆ ಉದ್ಯೋಗ, ಎಲ್ಲಿದೆ 15 ಲಕ್ಷ. ಇದಕ್ಕೆ ಬಿಜೆಪಿ ಉತ್ತರ ಕೊಡಬೇಕು ಎಂದರು.

ಅಕ್ಕಿಯಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಅಕ್ಕಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ರಾಜಕೀಯ ಮಾಡುತ್ತಿದೆ, ಬಡವರ ಹಸಿವು ನೀಗಿಸುವ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ವಿಪ ಸದಸ್ಯ ಸಲೀಂ ಅಹ್ಮದ್‌ ಹೇಳಿದರು. ಅವರು ಶುಕ್ರವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ದುಡ್ಡು ಕೊಡುತ್ತೇವೆ ಅಕ್ಕಿ ಕೊಡಿ ಎಂದರೆ ಕೇಂದ್ರ ನಿರಾಕರಣೆ ಮಾಡುತ್ತಿದೆ. ಅನ್ನಭಾಗ್ಯ ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರ ಬೆಂಬಲ ನೀಡುತ್ತಿಲ್ಲ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ರಾಜ್ಯದ ಜನರಿಗೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ, ಅಕ್ಕಿ ಕೊಡಬಹುದು. ಆದರೆ ಅಕ್ಕಿಗಾಗಿ ರಾಜಕಾರಣ ಮಾಡೋದು ದುರ್ದೈವ ಸಂಗತಿಯಾಗಿದೆ.

ಶಕ್ತಿ ಯೋಜನೆ: ಚಿಕ್ಕಮಗಳೂರಿನ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಮುಖ!

ದೆಹಲಿಗೆ ತೆರಳಿದ ನಮ್ಮ ಸಚಿವ ಕೆ. ಎಚ್‌. ಮುನಿಯಪ್ಪ ಅವರನ್ನು ಮೂರು ದಿನ ಕಾಯಿಸಿದ್ದಾರೆ. ಇವಾಗ ಅಕ್ಕಿ ನೀಡಲು ನಿರಾಕರಣೆ ಮಾಡಿದ್ದಾರಂತೆ ಎಂದು ಬೇಸರ ವ್ಯಕ್ತಪಡಿಸಿದರು. ಈಗಾಗಲೇ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಮಹಿಳೆಯರು ರಾಜ್ಯಾದ್ಯಂತ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಅಕ್ಕಿ ನೀಡಿದರೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನ ವೋಟ್‌ ಹಾಕೋದಿಲ್ಲ ಅಂತಾ ನಿರಾಕರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೈ ಮುಗಿದು ಕೇಳುತ್ತೇವೆ, ಅಕ್ಕಿಯಲ್ಲಿ ರಾಜಕೀಯ ಮಾಡಬೇಡಿ, ಕೇಂದ್ರದಲ್ಲಿ ರಾಜ್ಯದ ನಿರ್ಮಲಾ ಸೀತಾರಾಮ, ಪ್ರಹ್ಲಾದ್‌ ಜೋಶಿ ಸಚಿವರಾಗಿದ್ದಾರೆ. ಅವರಾದರೂ ಹೇಳಿ ರಾಜಕೀಯ ಬಿಟ್ಟು ರಾಜ್ಯಕ್ಕೆ ಸಹಾಯ ಮಾಡಬೇಕೆಂದು ಒತ್ತಾಯಿಸಿದರು.

Latest Videos
Follow Us:
Download App:
  • android
  • ios