ನಾವು ಹೊರಗಿನವರಲ್ಲ ರಾಮನಗರದವರೇ: ಮನೆ ಮಗನಿಗೆ ವಿಷ ಕೊಡಬೇಡಿ!
ರಾಮನಗರ ನನಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರವಾಗಿದೆ. ನಾವು ಹೊರಗಿನವರಲ್ಲ, ಬಿಡದಿಯಲ್ಲಿ ವಾಸಿಸುವ ಮೂಲಕ ಇದೇ ಜಿಲ್ಲೆಯವರಾಗಿದ್ದೇವೆ. ಕ್ಷೇತ್ರದ ಜನರು ವಿಷ ಕೊಡೊದಿಲ್ಲ ಎಂಬ ನಂಬಿಕೆಯಿದೆ.
ರಾಮನಗರ (ಮೇ 08): ರಾಮನಗರದಲ್ಲಿ ಜೆಡಿಎಸ್ ನ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧೆ ಮಾಡಿದ್ದು, ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ರಾಮನಗರ ನನಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರವಾಗಿದೆ. ನಾವು ಹೊರಗಿನವರಲ್ಲ, ಬಿಡದಿಯಲ್ಲಿ ವಾಸಿಸುವ ಮೂಲಕ ಇದೇ ಜಿಲ್ಲೆಯವರಾಗಿದ್ದೇವೆ. ಕ್ಷೇತ್ರದ ಜನರು ವಿಷ ಕೊಡೊದಿಲ್ಲ ಎಂಬ ನಂಬಿಕೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ನ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧೆ ಮಾಡಿದ್ದಾರೆ. ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ರಾಮನಗರ ನನಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರವಾಗಿದೆ. ದೇವೆಗೌಡರು ಮುಖ್ಯಮಂತ್ರಿ ಆಗಲು ಇದೇ ಕ್ಷೇತ್ರದ ಜನತೆ ಕಾರಣ. ಜಾತಿ ಭೇದ ಮರೆತು ಕ್ಷೇತ್ರದಲ್ಲಿ ದೇವೆಗೌಡರ ಕುಟುಂಬವನ್ನು ಬೆಂಬಲಿಸಿದ್ದೀರಿ. ನನ್ನ ಬಗ್ಗೆ ಕೆಲವೊಂದು ಬೇಸರ ನಿಮಗೆ ಇದೆ. ಎಲ್ಲಾ ವಿಚಾರಗಳನ್ನು ನಿಮ್ಮ ಮುಂದೆ ಇಡಲಿದ್ದೇನೆ. ರಾಮನಗರದಲ್ಲಿ ದೇವೆಗೌಡರು ಸ್ಪರ್ದೇ ಮಾಡದಿದ್ದರೆ, ಕುಮಾರಸ್ವಾಮಿ ಯಾರು ಅಂತಾ ಯಾರಿಗೂ ಗೊತ್ತಾಗುತ್ತಿರಲಿಲ್ಲ. ನನ್ನ ಬೆಳೆಸಿದ್ದು, ರಾಮನಗರ ಕ್ಷೇತ್ರದ ನನ್ನ ಜನರು ಎಂದು ಹೇಳಿದರು.
ಬೇಳೆ ಬೇಯಿಸಿಕೊಳ್ಳುವ ಜೆಡಿಎಸ್‌ಗೆ ಮತ ಹಾಕಬೇಡಿ: ಕ್ಷೇತ್ರದ ಅಭಿವೃದ್ಧಿ ಆಗೊಲ್ಲ!
ಕ್ಷೇತ್ರದ ಜನರು ಮಗನಿಗೆ ವಿಷ ಕೊಡೊಲ್ಲ: ಕಳೆದ ಬಾರಿ ಆಕಸ್ಮಿಕವಾಗಿ ಎರಡು ಕಡೆ ಸ್ಪರ್ಧೆ ಮಾಡಬೇಕಾಯಿತು. ಅಲ್ಲಿನ ಕಾರ್ಯಕರ್ತರ ಹೋರಾಟಕ್ಕೆ ಶಕ್ತಿ ತುಂಬಲು ಎರಡು ಕಡೆ ಸ್ಪರ್ಧೆ ಮಾಡಿದ್ದೆ. ಅವತ್ತು ಕೂಡ ನನ್ನನ್ನು ಈ ಕ್ಷೇತ್ರದ ಜನರು ನನ್ನನ್ನು ಕೈಬಿಡಲಿಲ್ಲ. ಸಾತನೂರಿನಲ್ಲಿ ನಾನು ಸೋತ ಸಂದರ್ಭದಲ್ಲಿ ನಾನು ರಾಜಕೀಯದಿಂದ ದೂರ ಉಳಿದಿದ್ದೆನು. ಆದ್ರೆ ಕ್ಷೇತ್ರದ ಜನರು ವಾಪಸ್ ಕರೆದುಕೊಂಡು ಬಂದರು. ಈಗ ನಿಖಿಲ್ ಕುಮಾರಸ್ವಾಮಿ ಇಲ್ಲಿ ಸ್ಪರ್ಧೆ ಮಾಡಿದದು, ರಾಮನಗರ ಬಿಟ್ಟು ಹೊರಗಡೆ ಬರಲೇ ಇಲ್ಲ. ನಿಖಿಲ್ ಅವರಿಗೆ ಒಂದು ರೀತಿ ಭಯ ಇತ್ತು ಅನ್ನಿಸುತ್ತೆ. ಬೇರೆ ಕಡೆ ಹೋದರೆ ಇಲ್ಲಿ ವ್ಯತ್ಯಾಸ ಆಗುತ್ತೆ ಅಂತಾ ನಿಖಿಲ್ ಗೊಂದಲದಲ್ಲಿದ್ದರು. ಆದರೆ ನನಗೆ ಗೊತ್ತಿತ್ತು, ಕ್ಷೇತ್ರದ ಜನರು ಕೈಬಿಡೊಲ್ಲ ಎಂಬ ನಂಬಿಕೆ ಇತ್ತು. ಕ್ಷೇತ್ರದ ಜನರು ವಿಷ ಕೊಡೊದಿಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ದೊಡ್ಡ ಅವಳಿ ನಗರ ನಿರ್ಮಾಣ: ರಾಮನಗರ ಮತ್ತು ಚನ್ನಪಟ್ಟಣ ಎರಡು ನಗರವನ್ನು ಅವಳಿ ನಗರವನ್ನಾಗಿ ಮಾಡಲಾಗುತ್ತದೆ. ದೊಡ್ಡ ಮಟ್ಟದಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿ ಈ ಎರಡು ನಗರಗಳು ಇರಲಿವೆ. ಕೊಟ್ಟ ಮಾತು ಉಳಿಸಿಕೊಳ್ಲಲಿಲ್ಲ ಎಂದರೆ ಮುಂದೆ ನಾನು ಮತಗಳನ್ನು ಕೇಳೊಕೆ ಬರೊಲ್ಲ. ನಿಮ್ಮ ಮನೆ ಮಗ ಮೂರನೇ ಬಾರಿ ಸಿಎಂ ಆಗೊದನ್ನ ಕಾಂಗ್ರೆಸ್ ಅವರ ಕೈಯಲ್ಲಿ ತಪ್ಪಿಸೋಕೆ ಆಗೊಲ್ಲ. ನಾನು ಸುಳ್ಳು ಹೇಳಿ ಮತ ಕೇಳುವ ಅವಶ್ಯಕತೆ ಇಲ್ಲ. ಪಂಚರತ್ನ ಯೋಜನೆ ಮೂಲಕ ರಾಜ್ಯದ ಜನರ ಮನಸ್ಸು ಗೆದ್ದಿದ್ದೇನೆ ಎಂದರು.
ಹಾರ್ಟ್ ಸರ್ಜರಿ ಆದ್ರೂ ರಾಜ್ಯಾದ್ಯಂತ ಪ್ರವಾಸ: ನನಗೆ ಎರಡು ಬಾರಿ ಹೃದಯದ ಸರ್ಜರಿ ಆಗಿದ್ರೂ ಕೂಡ, ಕಳೆದ ನಾಲ್ಕು ತಿಂಗಳಿಂದ ರಾಜ್ಯ ಪ್ರವಾಸ ಮಾಡಿದ್ದೇನೆ. ನಾನು ಹೋರಾಟ ಮಾಡ್ತಾ ಇರೋದು ನಾಡಿನ ಜನತೆಗೋಸ್ಕರ. ಪ್ರತಿ ಕುಟುಂಬ ನೆಮ್ಮದಿಯಿಂದ ಬದುಕಬೇಕು ಎಂದು ಪಂಚರತ್ನ ಯೋಜನೆ ರೂಪಿಸಿದ್ದೇನೆ. ನಿಖಿಲ್ ಕುಮಾರಸ್ವಾಮಿ ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವನನ್ನು ಗೆಲ್ಲಿಸಿ ಬೆಳೆಸುವ ಕೆಲಸ ನಿಮ್ಮದು. ನಿಮ್ಮ ಕೈ ಮುಗಿದು ಕೇಳಿಕೊಳ್ಳುತ್ತೇನೆ ನಿಖಿಲ್ ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದರು.
ಸಿದ್ದರಾಮಯ್ಯನ ಬ್ರಹ್ಮಾಂಡ ಭ್ರಷ್ಟಾಚಾರ ಬಿಚ್ಚಿಟ್ಟ ಬಿಜೆಪಿ! ಮುಡಾದಲ್ಲಿ ಭಾರಿ ಅವ್ಯವಹಾರ!
ನನ್ನ ಮೇಲೆ ನೀವು ಬೇಸರ ಮಾಡಕೊಳ್ಳಬೇಡಿ. ನನ್ನ ಜೀವನದ ಕೊನೆ ಉಸಿರ ಇರೋವರೆಗೂ ನಿಮ್ಮ ಕೈ ಬಿಡೊದಿಲ್ಲ. ನಿಖಿಲ್ ಕುಮಾರಸ್ವಾಮಿಗೆ ನಿಮ್ಮ ಆಶಿರ್ವಾದ ಇರಬೇಕು. ನಮ್ಮನ್ನು ಹೊರಗಿನವರು ಎಂದರೆ ನಂಬಬೇಡಿ, ನಾವು ಇದೇ ಜಿಲ್ಲೆಗೆ ಸೇರಿದವರು. ಬಿಡದಿಯಲ್ಲೇ ನಾನು ಇರೋದು. ನಾನು ಶಾಸಕನಾದ ಮೇಲೆ ಯಾವುದೇ ಆಸ್ತಿ ಮಾಡಿಲ್ಲ. ಆಗಾಗಿ ನೀವು ಇದೆಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.