ನಮ್ಮದು ಮೋದಿ ಸಂಸ್ಕೃತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಯಾರಾರಯರದ್ದು ಯಾವ ಸಂಸ್ಕೃತಿ ಎಂಬುದು ಜನರಿಗೆ ಗೊತ್ತಿದೆ. ನನ್ನ ಪ್ರಕಾರ ನಮ್ಮದು ನರೇಂದ್ರ ಮೋದಿ ಸಂಸ್ಕೃತಿಯಾಗಿದೆ. ಅವರು ಸ್ವಾತಂತ್ರ್ಯ ನಂತರ ಭಾರತವನ್ನು ಅತ್ಯಂತ ಸಶಕ್ತವಾಗಿ, ಶ್ರೀಮಂತವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ (ಫೆ.11) : ಯಾರಾರಯರದ್ದು ಯಾವ ಸಂಸ್ಕೃತಿ ಎಂಬುದು ಜನರಿಗೆ ಗೊತ್ತಿದೆ. ನನ್ನ ಪ್ರಕಾರ ನಮ್ಮದು ನರೇಂದ್ರ ಮೋದಿ ಸಂಸ್ಕೃತಿಯಾಗಿದೆ. ಅವರು ಸ್ವಾತಂತ್ರ್ಯ ನಂತರ ಭಾರತವನ್ನು ಅತ್ಯಂತ ಸಶಕ್ತವಾಗಿ, ಶ್ರೀಮಂತವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ದು ಟಿಪ್ಪು ಸುಲ್ತಾನ್ ವಂಶಸ್ಥರ ಸಂಸ್ಕೃತಿ, ನಮ್ಮದು ನಾಲ್ವಡಿ ಕೃಷ್ಣರಾಜರ ಸಂಸ್ಕೃತಿ ಎಂಬ ಸಿ.ಟಿ. ರವಿ ಹೇಳಿಕೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಪ್ರಧಾನ ಮಂತ್ರಿ ಅಮೃತ ಕಾಲವನ್ನು ಕರ್ತವ್ಯ ಕಾಲ ಎಂದು ಹೇಳಿದ್ದಾರೆ. ಕರ್ತವ್ಯದ ಮೂಲಕ ದೇಶವನ್ನು ಇಡೀ ಜಗತ್ತಿಗೆ ಸರ್ವ ಶ್ರೇಷ್ಠವನ್ನಾಗಿಸಲು ಹೊರಟಿದ್ದಾರೆ. ಆ ಧ್ಯೇಯ ಇಟ್ಟುಕೊಂಡು ನಾವು ಆಡಳಿತ ಮಾಡುತ್ತಿದ್ದೇವೆ ಎಂದರು.
ಶಿವಮೊಗ್ಗ(Shivamogga) ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಬೇಡವೆಂಬ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ, ಈ ಮೊದಲಿನಿಂದಲೂ ಯಡಿಯೂರಪ್ಪ(BS Yadiyurappa)ನವರು ಅದನ್ನೇ ಹೇಳುತ್ತಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ(Shivamogga airport)ಕ್ಕೆ ನನ್ನ ಹೆಸರು ನಾಮಕರಣ ಬೇಡ ಎಂದು ಹೇಳಿದ್ದಾರೆ. ಆದರೆ ಶಿವಮೊಗ್ಗದ ಜನ ಒತ್ತಡ ತಂದಿದ್ದಾರೆ. ಈ ಕುರಿತು ಬಿಎಸ್ ವೈ ಜೊತೆ ಮಾತನಾಡುತ್ತೇನೆ. ಜತೆಗೆ ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಕುರಿತು ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ಎರಡು ವರ್ಷ ಗದಗ ಜಿಲ್ಲೆಯ ಲಕ್ಕುಂಡಿ ಉತ್ಸವ ಮಾಡಿರಲಿಲ್ಲ. ಲಕ್ಕುಂಡಿ ಜಗತ್ ಪ್ರಸಿದ್ಧವಾದ ಕ್ಷೇತ್ರ, ಉತ್ಸವ ಮಾಡುವ ಮೂಲಕ ಮತ್ತೆ ಅಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಮಂಡ್ಯ ಉಸ್ತುವಾರಿಯಿಂದ ಅಶೋಕ್ ಬಿಡುಗಡೆ, ಸಚಿವರ ಮನವಿ ಮೇರೆಗೆ ತೀರ್ಮಾನ: ಸಿಎಂ ಬೊಮ್ಮಾಯಿ