Asianet Suvarna News Asianet Suvarna News

ಕಲಾಪದಲ್ಲಿ ಯತ್ನಾಳ್-ದೊರೆಸ್ವಾಮಿ ಗದ್ದಲ: ಇದು ಕರ್ನಾಟಕದ ಜನತೆಗೆ ಬೇಕಿಲ್ಲ

ಶಾಸಕ ಯತ್ನಾಳ್ ಹೇಳಿಕೆ ವಿಚಾರದಲ್ಲಿ ವಿಧಾನ ಮಂಡಲದಲ್ಲಿ ಗದ್ದಲವಾಗಿದೆ. ಆಡಳಿತ ಮತ್ತು ವಿಪಕ್ಷ ನಡುವಿನ ಆರೋಪ-ಪ್ರತ್ಯಾರೋಪಕ್ಕೆ ಸೋಮವಾರದ ಸದನ ಬಲಿಯಾಗಿದೆ.  ಇವರಿಬ್ಬರ ಜಗಳಕ್ಕೆ ಸದನವನ್ನ  ಬಲಿ ಕೊಡುವುದ್ಯಾಕೆ?

war of words Between BJP and Congress in Assembly Over Yatnal Doreswamy remarks
Author
Bengaluru, First Published Mar 2, 2020, 6:01 PM IST

ಬೆಂಗಳೂರು, (ಮಾ.02):  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಹಿರಿಯ ಸಾಮಾಜಿಕ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ನಡುವಿನ ಆರೋಪ-ಪ್ರತ್ಯಾರೋಪಗಳ ಪರ ವಿರೋಧಗಳು ಜೋರಾಗಿ ನಡೆಯುತ್ತಿವೆ.

"

ಅಲ್ಲದೇ  ಸೋಮವಾರ ಶುರುವಾದ ವಿಧಾನ ಮಂಡಲ ಅಧಿವೇಶನದಲ್ಲೂ ಸಹ ಇದು ಆಡಳಿತ ಮತ್ತು ವಿಪಕ್ಷ ನಡುವಿನ ಗದ್ದಲಕ್ಕೆ ಕಾರಣವಾಗಿದೆ. ಪ್ರತಿಪಕ್ಷ ನಾಯಕರು ಹಿರಿಯ ಸಾಮಾಜಿಕ ಹೋರಾಟಗಾರ ಎಚ್​.ಎಸ್​.ದೊರೆಸ್ವಾಮಿ ಅವರ ವಿಷಯ ಪ್ರಸ್ತಾಪಿಸಿ ಮಾತಿಗೆ ಅವಕಾಶ ಕೋರಿದರು. 

ಸಾವರ್ಕರ್ ಧೂಳಿಗೂ ದೊರೆಸ್ವಾಮಿ ಸಮವಲ್ಲ; ನಾಲಿಗೆ ಹರಿಬಿಟ್ಟ ಯತ್ನಾಳ್

"

ಇದೇ ವೇಳೆ, ಯಾವ ನಿಯಮದ ಅಡಿ ಎಂಬುದನ್ನು ಉಲ್ಲೇಖಿಸಿ ಚರ್ಚೆಗೆ ಅವಕಾಶ ಕೋರುವಂತೆ ಆಡಳಿತ ಪಕ್ಷದ ಸದಸ್ಯರು ವಿಪಕ್ಷ ಸದಸ್ಯರನ್ನು ಆಗ್ರಹಿಸಿದರು. ಇದು ಗದ್ದಲಕ್ಕೆ ಕಾರಣವಾಯ್ತು. 

ಪಾಕ್ ಏಜೆಂಟ್ ಮಾತು ಸಮರ್ಥಿಸಿಕೊಂಡು ಮತ್ತೆ ದೊರೆಸ್ವಾಮಿ ವಿರುದ್ಧ ಯತ್ನಾಳ್ ಕಿಡಿ

"

ರಾಜ್ಯದ ಅಭಿವೃದ್ಧಿ, ಜನರ ಕಷ್ಟ-ದುಃಖಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡೋ ಬದಲು ದೊರೆಸ್ವಾಮಿ ಹಾಗೂ ಯತ್ನಾಳ್ ವಿಷಯ ಜನರಿಗೆ ಬೇಕಿಲ್ಲ.ವಹಾಗಾದ್ರೆ ಸದನದಲ್ಲಿ ಏನೆಲ್ಲಾ ಆಯ್ತು ಎನ್ನುವುದನ್ನ ವಿಡಿಯೋಗಳಲ್ಲಿ ನೋಡಿ.

"

Follow Us:
Download App:
  • android
  • ios