Asianet Suvarna News Asianet Suvarna News

ಬಳ್ಳಾರಿ: ಜನಾರ್ದನ ರೆಡ್ಡಿ ವರ್ಸಸ್ ಭರತ್ ರೆಡ್ಡಿ ಆಯ್ತು, ಇದೀಗ ಬೆಂಬಲಿಗರ ಮಧ್ಯೆ ವಾರ್..!

ಬೈದಾಡೋದು ಮುಗಿದ ಬಳಿಕ ಇದೀಗ ಕೊಲೆ ಯತ್ನ ಸೇರಿದಂತೆ ಜಾತಿ ನಿಂದನೆ ಮಾಡಿದ್ದಾರೆಂದು ಜನಾರ್ದನ ರೆಡ್ಡಿ ಅಪ್ತ ಅಲಿಖಾನ್ ವಿರುದ್ಧ ಶಾಸಕ ಭರತ್ ರೆಡ್ಡಿ ಮತ್ತು ಸಚಿವ ನಾಗೇಂದ್ರ ಆಪ್ತ ಬಿಎಲ್ಅರ್ ಸೀನಾ ದೂರು ನೀಡಿದ್ದಾರೆ. 

War Between Supporters of Janardhana Reddy and Bharat Reddy in Ballari grg
Author
First Published Sep 7, 2023, 2:00 AM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ(ಸೆ.07):  ಮಳೆ ನಿಂತರೂ ಅದರ ಹನಿ ನಿಲ್ಲದು ಎನ್ನುವ ಮಾತಿನಂತೆ. ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮತ್ತು ಶಾಸಕ ಭರತ್ ರೆಡ್ಡಿ ಪರಸ್ಪರ ವಾಗ್ದಾಳಿ ಬಳಿಕ ಇದೀಗ ಅವರ ಬೆಂಬಲಿಗರ ಮಧ್ಯೆ ಜಟಾಪಟಿ ಜೋರಾಗಿದೆ. ಬೈದಾಡೋದು ಮುಗಿದ ಬಳಿಕ ಇದೀಗ ಕೊಲೆ ಯತ್ನ ಸೇರಿದಂತೆ ಜಾತಿ ನಿಂದನೆ ಮಾಡಿದ್ದಾರೆಂದು ಜನಾರ್ದನ ರೆಡ್ಡಿ ಅಪ್ತ ಅಲಿಖಾನ್ ವಿರುದ್ಧ ಶಾಸಕ ಭರತ್ ರೆಡ್ಡಿ ಮತ್ತು ಸಚಿವ ನಾಗೇಂದ್ರ ಆಪ್ತ ಬಿಎಲ್ಅರ್ ಸೀನಾ ದೂರು ನೀಡಿದ್ದಾರೆ. 

ಆಂಧ್ರ ಶೈಲಿ ರಾಜಕೀಯಕ್ಕೆ ನಾಂದಿ ಹಾಡಿದ ನಾಯಕರು

ಶಾಸಕರಾದ ಜನಾರ್ದನ ರೆಡ್ಡಿ ಮತ್ತು  ಭರತ್ ರೆಡ್ಡಿ  ನಡುವಿನ ವಾಗ್ದಾಳಿ ಇದೀಗ ಅವರ ಬೆಂಬಲಿಗರ ಜಟಾಪಟಿಗೆ ಇದೀಗ ಕಾರಣವಾಗಿದೆ. ಕಳೆದ ವಾರ ಜನಾರ್ದನ ರೆಡ್ಡಿ ಕಾರ್ಯಕ್ರಮವೊಂದರಲ್ಲಿ ಬಳ್ಳಾರಿ ಶಾಸಕ ಭರತ್ ರೆಡ್ಡಿ ಬಳ್ಳಾರಿ ಅಭಿವೃದ್ಧಿ ಬಿಟ್ಟು ಕೆಅರ್ಪಿಪಿ ಕಾರ್ಯಕರ್ತರ ಟಾರ್ಗೆಟ್ ಮಾಡ್ತಿದ್ದಾರೆ. ಅಭಿವೃದ್ಧಿ ಮಾಡಲಿ‌ ಇಲ್ಲದೇ ಇದ್ರೇ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ರು. ಇದಾದ ಬಳಿಕ ಭರತ್ ರೆಡ್ಡಿ ಕೂಡ ಎಂತಹವರಿಗೋ ಹೆದರಿಲ್ಲ ಇವನಿಗೆ ನಾವು ಹೇದರುತ್ತೇವೆಯೇ ಅನ್ನೋದ್ರ ಜೊತೆಗೆ ಅವರೊಬ್ಬ ಟೋಪನ್ ರಾಜ ಎಂದು ವಾಗ್ದಾಳಿ ನಡೆಸಿದ್ರು. 

ಲೋಕಸಭೆಗೆ ಶ್ರೀರಾಮುಲು ಸ್ಪರ್ಧಿಸುವುದು ಸೂಕ್ತ: ಸೋಮಶೇಖರ ರೆಡ್ಡಿ

ಇಬ್ಬರು ನಾಯಕರ ಪರಸ್ಪರ ವಾಗ್ದಾಳಿ ಬಳಿಕ ಬೆಂಬಲಿಗರು ಕೂಡ  ಬೈದಾಡಿಕೊಂಡಿದ್ದರು.  ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಮಾತಿನ ಭರಾಟೆಯಲ್ಲಿ ಶಾಸಕ ಭರತ್ ರೆಡ್ಡಿ ಗಾಂಜಾ ಗಿರಾಕಿ ನಾಗೇಂದ್ರ ಜೈಲಿಗೆ ಹೋಗಿಲ್ವಾ ಎಂದು ಅಲಿಖಾನ್ ಆರೋಪಿಸಿದ್ದರು. ಇದಕ್ಕೆ ಉತ್ತರವಾಗಿ ಅಲಿಖಾನ್, ಜನಾರ್ದನ ರೆಡ್ಡಿ ಯಾರೇ ಆಗಲಿ ನಾಗೇಂದ್ರ ಅಥವಾ ಭರತ್ ತಂಟೆಗೆ ಬಂದ್ರೇ ನಾಲಿಗೆ ಕತ್ತರಿಸೋದಾಗಿ ಬಿಅರ್ಎಲ್ ಸೀನಾ ಹೇಳಿದ್ದನು.

ಪೊಲೀಸ್ ಠಾಣೆ ಮೆಟ್ಟಿಲೇರಿದ ಸಚಿವ ನಾಗೇಂದ್ರ ಬೆಂಬಲಿಗ ಸೀನಾ ಇನ್ನೂ ಪರಸ್ಪರ ವಾಗ್ದಾಳಿ ಬಳಿಕ ನಿನ್ನೆ ರಾತ್ರಿ ಅಲಿಖಾನ್ ತಮ್ಮ ಬೆಂಬಲಿಗರನ್ನು  ಮಾರಕಾಸ್ತ್ರಗಳಿಂದ ಸೀನಾ ಮನೆಗೆ ಕಳುಹಿಸಿದ್ರಂತೆ. ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ ಎನ್ನುವದು ಸೀನಾ ವಾದವಾದವಾಗಿದೆ. ಈ ಬಗ್ಗೆ ಬ್ರೂಸ್ ಪೇಟೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇನ್ನೂ ಅಲಿಖಾನ್ ಮಾತ್ರ  ಈ ಎಲ್ಲಾ ಜಗಳಕ್ಕೂ ಮುನ್ನ ಸೀನಾ ಜೊತೆಗೆ ಹಣ ಕಾಸಿನ ವ್ಯವಹಾರವಿತ್ತು. ಅದನ್ನು ಕೇಳಲು ಹೋದಾಗ ಕೇಸ್ ನೀಡಿದ್ದಾರೆ ಎನ್ನುತ್ತಿದ್ದಾರೆ. 

ಸದ್ಯ ಬ್ರೂಸ್‍ಪೇಟೆ ಠಾಣೆಯಲ್ಲಿ ಅಲಿಖಾನ್ ಮತ್ತು ಖದೀರ್ ವಿರುದ್ಧ ಪ್ರಕರಣ ದಾಖಲು ಮಾಡಿರೋ ಪೊಲೀಸರು ಖದೀರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 

Follow Us:
Download App:
  • android
  • ios