ಸಂಸತ್‌ನಲ್ಲಿ ಅಡ್ಡ ಮತ ಪಡೆದು ವಕ್ಫ್ ಮಸೂದೆಗೆ ಅಂಗೀಕಾರ ಪಡೆದುಕೊಂಡಿದ್ದಾರೆ. ಇದು ಮುಸ್ಲಿಮರ ವಿರೋಧಿ ಕಾಯ್ದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು. 

ಕೋಲಾರ (ಏ.06): ಸಂಸತ್‌ನಲ್ಲಿ ಅಡ್ಡ ಮತ ಪಡೆದು ವಕ್ಫ್ ಮಸೂದೆಗೆ ಅಂಗೀಕಾರ ಪಡೆದುಕೊಂಡಿದ್ದಾರೆ. ಇದು ಮುಸ್ಲಿಮರ ವಿರೋಧಿ ಕಾಯ್ದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು. ನಗರದಲ್ಲಿ ಬಾಬು ಜಗಜೀವನ್ ರಾಮ್ ಜಯಂತಿಯ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಮಸೂದೆ ಅಂಗೀಕಾರದ ಮೇಲೆ ಚರ್ಚೆಗೆ ವಿರೋಧ ಪಕ್ಷದವರಿಗೆ ಅವಕಾಶ ನೀಡಿಲ್ಲ, ಜತೆಗೆ ಮಹುಮತ ಸಹ ದೊರೆತಿಲ್ಲ ಎಂದರು.

ಚರ್ಚಿಸಿದೆ ಮಸೂದೆ ಅಂಗೀಕಾರ: ಸಂಸತ್ನಲ್ಲಿ ರಾತ್ರಿ 3 ಗಂಟೆ ತನಕ ಚರ್ಚೆ ನಡೆಯುತ್ತಿದ್ದಾಗ ರಾಹುಲ್ ಗಾಂಧಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ವಿರುದ್ಧ ಧ್ವನಿ ಎತ್ತಲು ಪ್ರಯತ್ನಿಸಿದರು ಸಹ ಚರ್ಚೆಗೆ ಅವಕಾಶವೇ ನೀಡಿಲ್ಲ. ಬಿಜೆಪಿಯವರಿಗೆ ನೈತಿಕತೆ, ಸಮಾಜದ ಬಗ್ಗೆ ಕಳಕಳಿಯಿದ್ದರೆ ಕೇಂದ್ರದ ವಿರುದ್ಧ ಹೋರಾಟ ಮಾಡಲಿ. ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆ ಪಾಲು, ಅನುದಾನವನ್ನು ಕೇಳಲಿ ಎಂದು ಒತ್ತಾಯಿಸಿದರು. 

ವಿನಯ್‌ ಸಾವಿನಲ್ಲೂ ರಾಜಕೀಯ ಮಾಡೋದು ಸರಿಯಲ್ಲ: ಸಚಿವ ಕೆ.ಜೆ.ಜಾರ್ಜ್‌

ಹಾಲಿನ ದರ ಏರಿಕೆಗೆ ಕುರಿತು ಉತ್ತರಿಸಿ, ರೈತರಿಗೆ ಅನುಕೂಲವಾಗುವ ತೀರ್ಮಾನ ಸರ್ಕಾರ ಕೈಗೊಂಡಿದೆ. ಪ್ರತಿ ಲೀಟರ್ ಹಾಲಿ ದರ 4 ರೂ. ಏರಿಕೆಯಿಂದ ಸರ್ಕಾರಕ್ಕೇನು ಲಾಭವಿಲ್ಲ. ಅದು ರೈತರಿಗೆ, ರೈತ ದೇಶದ ಬೆನ್ನೆಲಬು, ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಆಬೇಕು. ರೈತರನ್ನು ಬಿಜೆಪಿ ಅವರು ವಿರೋಧ ಮಾಡುತ್ತಿದ್ದಾರೆ ಎಂದು ಛೇಡಿಸಿದರು. ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಲು ಸಚಿವರು ನಿರಾಕರಿಸಿದರು.

ಯೋಜನೆಗಳ ಅನುಷ್ಠಾನದಲ್ಲಿ ನೌಕರರ ಪಾತ್ರ ಮುಖ್ಯ: ಸರ್ಕಾರಿ ನೌಕರರು ಹಾಗೂ ರಾಜಕಾರಣಿಗಳು ಕೈಜೋಡಿಸಿದರೆ ಮಾತ್ರ ಸರ್ಕಾರದ ಯಾವುದೇ ಯೋಜನೆ ಯಶಸ್ವಿ ಕಾಣಲು ಸಾಧ್ಯ. ನಾವು ಸೂಚಿಸಿದ್ದನ್ನು ಅನುಷ್ಠಾನಗೊಳಿಸಿ ಜನರಿಗೆ ಮುಟ್ಟಿಸುವ ಸರ್ಕಾರಿ ನೌಕರರ ಸೇವೆಗೆ ಅಭಿನಂದನೆ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು. ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಎರಡು ದಿನಗಳ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಟೀಕೆಗಳಿಗೆ ಹೆದರುವ ಅಗತ್ಯವಿಲ್ಲ: ಸಚಿವ ಎನ್.ಚಲುವರಾಯಸ್ವಾಮಿ

ಕರ್ನಾಟಕವನ್ನು ಹೊರತುಪಡಿಸಿದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಸರ್ಕಾರದ ಕಾರ್ಯಕ್ರಮದ ವೇದಿಕೆಗಳಲ್ಲಿ ಜನಪ್ರತಿನಿಧಿಗಳು ಮಾತ್ರ ಇರುತ್ತಾರೆ. ಯಾವುದೇ ಸರ್ಕಾರಿ ಅಧಿಕಾರಿಗಳನ್ನು ಜೊತೆಯಲ್ಲಿ ಕೂರಿಸಿಕೊಳ್ಳುವುದಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಎಲ್ಲರೂ ಜೊತೆಯಲ್ಲೇ ಇರುತ್ತೇವೆ. ನಮ್ಮಲ್ಲಿ ಸೌಹಾರ್ದಭಾವ ಇದೆ. ಸರ್ಕಾರವು ಅಷ್ಟೇ ಎಲ್ಲರನ್ನೂ ಸಮಾನತೆಯಿಂದ ನೋಡಿಕೊಳ್ಳುತ್ತದೆ ಎಂದರು.