Asianet Suvarna News Asianet Suvarna News

ಅಯೋಧ್ಯೆ ರಾಮಮಂದಿರಕ್ಕೆ ಹೋಗಬೇಕೆಂಬ ಆಸೆ ಇದೆ: ಎಚ್‌.ಡಿ.ದೇವೇಗೌಡ

ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹಂಗರಹಳ್ಳಿ ವಿದ್ಯಾ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಚೌಡೇಶ್ವರಿ ದೇವಿಯ ವಿಗ್ರಹಕ್ಕೆ ದೇವಾಲಯದಿಂದ ನಿರ್ಮಿಸಿದ ವಜ್ರ ಕಿರೀಟಧಾರಣಾ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ.ದೇವೇಗೌಡ ಭಾಗವಹಿಸಿ ಮಾತನಾಡಿದರು. 

Wants to go to Ram temple in Ayodhya Says HD DeveGowda gvd
Author
First Published Jan 18, 2024, 1:32 PM IST

ಕುಣಿಗಲ್ (ಜ.18): ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹಂಗರಹಳ್ಳಿ ವಿದ್ಯಾ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಚೌಡೇಶ್ವರಿ ದೇವಿಯ ವಿಗ್ರಹಕ್ಕೆ ದೇವಾಲಯದಿಂದ ನಿರ್ಮಿಸಿದ ವಜ್ರ ಕಿರೀಟಧಾರಣಾ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ.ದೇವೇಗೌಡ ಭಾಗವಹಿಸಿ ಮಾತನಾಡಿದರು. ‘ಮಠದ ಬಾಲ ಮಂಜುನಾಥ ಸ್ವಾಮೀಜಿ ದೇವಾಲಯಕ್ಕೆ ಬರುವಂತೆ ಆಹ್ವಾನ ನೀಡಿದರು. 

ಈ ಹಿನ್ನೆಲೆಯಲ್ಲಿ ನಾನು ದೇವಾಲಯಕ್ಕೆ ಬಂದಿದ್ದೇನೆ, ವಿದ್ಯಾ ಚೌಡೇಶ್ವರಿ ತಾಯಿಗೆ ಉತ್ತರಾಯಣ ಪುಣ್ಯಕಾಲದಲ್ಲಿ ವಿಶೇಷವಾದ ಪೂಜೆ ಸಲ್ಲಿಸುವ ಅಗತ್ಯತೆ ಇದೆ ಇಂತಹ ಸಂದರ್ಭದಲ್ಲಿ ನಾನು ಅಮ್ಮನವರ ಪೂಜೆಯನ್ನು ಮಾಡಿದ್ದೇನೆ. ನನಗೆ ಎರಡು ಕಾಲಿನ ಮಂಡಿಗಳನ್ನು ನೋವಿದೆ ಆದರೂ ಕೂಡ ದೀರ್ಘದಂಡ ನಮಸ್ಕಾರ ಮಾಡಿದ್ದೇನೆ, ಇಲ್ಲಿ ನಡೆದ ಹೋಮ ಕಾರ್ಯಗಳಲ್ಲಿ ನಾನು ಭಾಗವಹಿಸಿದ್ದೇನೆ. ಇಂತಹ ವಿಶೇಷ ಕಾರ್ಯಕ್ರಮ ನನಗೆ ತುಂಬಾ ಅಚ್ಚುಮೆಚ್ಚು ಆಗಿದೆ’ ಎಂದರು.

ಹೆಸರಲ್ಲೇ ಲಕ್ಷ್ಮಣ ಇರುವಾಗ ರಾಮ ಮಂದಿರಕ್ಕೆ ಹೋಗದಿರಲು ಸಾಧ್ಯವೆ: ಶಾಸಕ ಲಕ್ಷ್ಮಣ ಸವದಿ

ವಿದ್ಯಾ ಚೌಡೇಶ್ವರಿಗಾಗಿ ಮಠದ ವತಿಯಿಂದ ಮಾಡಿಸಿದ್ದ ವಜ್ರ ಖಚಿತ ಕಿರೀಟವನ್ನು ಪೂಜಿಸುವ ಮುಖಾಂತರ ದೇವಿಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ನಾನು ಕೂಡ ಅಯೋಧ್ಯೆಗೆ ಹೋಗಬೇಕೆಂಬ ಆಸೆ ಇದೆ. ನನಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಆರೋಗ್ಯ ಸುಧಾರಣೆ ಕಂಡರೆ ನಾನು ಖಂಡಿತ ಹೋಗುತ್ತೇನೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಬಾಲ ಮಂಜುನಾಥ ಸ್ವಾಮೀಜಿ, ವಿದ್ಯಾ ಚೌಡೇಶ್ವರಿ ದಯದಿಂದ ದೇವೇಗೌಡರಿಗೆ ಆರೋಗ್ಯದಲ್ಲಿ ಸುಧಾರಣೆ ಕಾಣಲಿ ಎಂದು ಆ ತಾಯಿಯಲ್ಲಿ ಪ್ರಾರ್ಥಿಸುತ್ತೇನೆ. ಅವರಿಗೆ ದೇವರ ಆಶೀರ್ವಾದ ಸದಾ ಇದೆ ಎಂದರು.

ಎಚ್‌ಡಿಕೆ ಕೇಂದ್ರ ಮಂತ್ರಿ ಆಗೋದು ಗೊತ್ತಿಲ್ಲ: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗುವ ಕುರಿತು ಗೊತ್ತಿಲ್ಲ, ನನ್ನ ಮುಂದೆ ಆ ಬಗ್ಗೆ ಚರ್ಚೆ ಆಗಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಮನಸಿನಲ್ಲಿ ಏನಿದೆಯೋ ಗೊತ್ತಿಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಯೋಚನೆಗಳು ಅವರ ಸಹೋದ್ಯೋಗಿಗಳಿಗೂ ಗೊತ್ತಾಗುವುದಿಲ್ಲ. ಹೀಗಾಗಿ ಅವರ ಮನದಲ್ಲಿ ಏನಿದೆಯೋ ಗೊತ್ತಿಲ್ಲ ಎಂದರು.

ನಕಲಿ ಸೋಪ್‌ ತಯಾರಕರ ಜತೆ ಬಿಜೆಪಿಗರ ನಂಟು: ಸಚಿವ ಪ್ರಿಯಾಂಕ್ ಖರ್ಗೆ

ಯಾವುದೇ ಕಾರಣಕ್ಕೂ ನಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ರಾಜ್ಯಸಭೆಯ ಅವಧಿ ಇನ್ನು ಎರಡೂವರೆ ವರ್ಷ ಇದೆ. ರಾಜ್ಯಸಭೆಯಲ್ಲಿಯೇ ಇರುತ್ತೇನೆ. ಚುನಾವಣೆ ವೇಳೆ ಮೈತ್ರಿಕೂಟದ ಪರವಾಗಿ ಪ್ರಚಾರ ಮಾಡುತ್ತೇನೆ. ನಮ್ಮ ಪಕ್ಷದ ಪರವಾಗಿ ಪ್ರವಾಸ ಮಾಡುತ್ತೇನೆ. ಬಿಜೆಪಿಯವರು ಎಲ್ಲಿಗೆ ಕರೆದರೂ ಹೋಗುತ್ತೇನೆ. ಮಾತನಾಡುವ ಶಕ್ತಿ ಇದೆ ಎಂದು ಹೇಳಿದರು. ಪ್ರಜ್ವಲ್ ರೇವಣ್ಣ ಅವರು ಹಾಸನದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ. ಇದರಲ್ಲಿ ಅನುಮಾನ ಏಕೆ? ಪ್ರಜ್ವಲ್‌ಗೆ ಮೋದಿ ಅವರು ಆಶೀರ್ವಾದ ಮಾಡುತ್ತಾರೆ. ಅಲ್ಲದೇ, ಕುಮಾರಸ್ವಾಮಿ ಮತ್ತು ನಾನು ಸಹ ಆಶೀರ್ವಾದ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios