Asianet Suvarna News Asianet Suvarna News

Karnataka Politics: ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗೆ ಬೇಸತ್ತ ಮತದಾರರು: ಸಲೀಂ ಅಹ್ಮದ್‌

*  ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ
*  ಸುಭದ್ರ ರಾಷ್ಟ್ರ, ಜಾತ್ಯತೀತ ದೇಶ ನಿರ್ಮಾಣವಾಗಬೇಕಿದೆ 
*  ಸಂವಿಧಾನ ವಿರುದ್ಧ ನಡೆದುಕೊಳ್ಳುತ್ತಿರುವ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ
 

Voters Tired of Anti People Policies of BJP government Says Saleem Ahmed grg
Author
Bengaluru, First Published Dec 18, 2021, 10:39 AM IST

ರೋಣ(ಡಿ.18): ಕಾಂಗ್ರೆಸ್‌(Congress) ಪಕ್ಷದ ತತ್ವ, ಸಿದ್ಧಾಂತ ಮತ್ತು ವಿಚಾರಧಾರೆಗಳೇ ನನ್ನ ಗೆಲುವಿಗೆ ಪ್ರಮುಖ ಕಾರಣಗಳಾಗಿವೆ ಎಂದು ಧಾರವಾಡ ವಿಧಾನ ಪರಿಷತ್‌ ನೂತನ ಸದಸ್ಯ ಸಲೀಂ ಅಹ್ಮದ್‌(Saleem Ahmed) ಹೇಳಿದರು.

ಶುಕ್ರವಾರ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣಮಂಟಪದಲ್ಲಿ ಅಭಿನಂದನಾ ಸಮರ್ಪಣಾ ಸಭೆಯಲ್ಲಿ ಮಾತನಾಡಿ, ಆಡಳಿತರೂಢ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಗೆ ಮತದಾರರು ಬೇಸತ್ತಿದ್ದಾರೆ. ಈ ಹಿಂದೆ ಆಡಳಿತದಲ್ಲಿದ್ದಾಗ ಕಾಂಗ್ರೆಸ್‌ ಕೈಗೊಂಡ ಅಭಿವೃದ್ಧಿ, ಜಾರಿಗೆ ತಂದಿರುವ ಮಹತ್ವಪೂರ್ಣ ಯೋಜನೆಗಳು ಇಂದಿಗೂ ಜನಮನದಲ್ಲಿದ್ದು, ಪಕ್ಷದ ತತ್ವ, ಚಿಂತನೆಗಳನ್ನು ಜನ ಮೆಚ್ಚಿದ್ದಾರೆ. ಮತದಾರ ಋುಣ ತೀರಿಸುತ್ತೇನೆ. ರಾಜ್ಯ, ಕೇಂದ್ರ ಸರ್ಕಾರದ ದುಷ್ಟಬುದ್ಧಿ ವಿರುದ್ಧ ಬೀದಿಗಿಳಿದು ಹೋರಾಡಬೇಕಿದೆ. ಸುಭದ್ರ ರಾಷ್ಟ್ರ, ಜಾತ್ಯತೀತ ದೇಶ(Secular Country) ನಿರ್ಮಾಣವಾಗಬೇಕಿದೆ ಎಂದರು.

Gadag: ಕಾಂಗ್ರೆಸ್‌ನಿಂದ ಪ್ರತಿಭಟನೆಯ ನಾಟಕ: ತಾಕತ್ತಿದ್ದರೆ ಚರ್ಚೆಯಲ್ಲಿ ಪಾಲ್ಗೊಳ್ಳಲಿ: ರಾಮುಲು

ಎಲ್ಲ ಸಮಾಜಕ್ಕೆ ಶಕ್ತಿ ನೀಡುವ ಪಕ್ಷ ಕಾಂಗ್ರೆಸ್‌ ಆಗಿದೆ. ಸಂವಿಧಾನ(Constitution) ವಿರುದ್ಧ ನಡೆದುಕೊಳ್ಳುತ್ತಿರುವ ಬಿಜೆಪಿಗೆ(BJP) ಜನ ತಕ್ಕ ಪಾಠ ಕಲಿಸಲಿದ್ದಾರೆ. ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ(BJP Government) ಹದಗೆಡಿಸಿದೆ. ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ್ದ ಮನಮೋಹನ್‌ ಸಿಂಗ್‌(Manmohan Singh) ನೇತೃತ್ವದ ಸರ್ಕಾರ ಪಂಚಾಯತ್‌ ವ್ಯವಸ್ಥೆಯನ್ನು ಗಟ್ಟಿಗೊಳಿಸಿದ್ದರು. ಆದರೆ ಬಿಜೆಪಿ ಇದೆಲ್ಲವನ್ನು ಹಾಳು ಮಾಡಿದೆ. ಮತ್ತೆ ಪಂಚಾಯತ್‌ ರಾಜ್‌(Panchayat Raj) ವ್ಯವಸ್ಥೆಗೆ ಗಟ್ಟಿಗೊಳಿಸುವ ದಿಶೆಯಲ್ಲಿ ಹೋರಾಡಬೇಕಿದೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಜಿ.ಎಸ್‌. ಪಾಟೀಲ(GS Patil) ಮಾತನಾಡಿ, ಮುಂಬರುವ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಬಲವರ್ಧನೆಗೊಳ್ಳಲಿದೆ ಎಂಬುದನ್ನು ವಿಧಾನ ಪರಿಷತ್‌ ಚುನಾವಣೆ ತೋರಿಸಿಕೊಟ್ಟಿದೆ. ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಇದೇ ಗಟ್ಟಿತನದಿಂದ, ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ. ಕಾಂಗ್ರೆಸ್‌ನಿಂದ ದೇಶದಲ್ಲಿ ಸರ್ವಜನಾಂಗದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಮಾಜಿ ಸಚಿವ ಬಿ.ಆರ್‌. ಯಾವಗಲ್ಲ, ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ವೀರಣ್ಣ ಶೆಟ್ಟರ, ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ, ವಿ.ಆರ್‌. ಗುಡಿಸಾಗರ ಮಾತನಾಡಿದರು. ಕೆಪಿಸಿಸಿ ಅಲ್ಪಸಂಖ್ಯಾತರ ಘಟಕ ರಾಜ್ಯ ಉಪಾಧ್ಯಕ್ಷ ಮಕಾನದಾರ, ಎಸ್‌.ಎಂ. ಡಂಗಣ್ಣನವರ, ಪರಶುರಾಮ ಅಳಗವಾಡಿ, ದಶರಥ ಗಾಣಿಗೇರ, ವಿದ್ಯಾ ದೊಡ್ಡಮನಿ, ನರೇಗಲ್ಲ ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ಮಹಿಳಾ ಘಟಕ ಅಧ್ಯಕ್ಷೆ ಮಂಜುಳಾ ರೆವಡಿ, ರೂಪಾ ಅಂಗಡಿ, ಮಂಜುಳಾ ಹುಲ್ಲಣ್ಣವರ, ನಾಜಬೇಗಂ ಯಲಿಗಾರ, ಅಶೋಕ ಮಾಗಮರ, ಪ್ರಭು ಮೇಟಿ, ಬಸವರಾಜ ನವಲಗುಂದ, ಅಂದಪ್ಪ ಬಿಚ್ಚೂರ, ಮಲ್ಲನಗೌಡ ಪಾಟೀಲ, ಬಿ.ಎಸ್‌. ಕರಿಗೌಡ್ರ, ಉಪಸ್ಥಿತರಿದ್ದರು. ವಿ.ಬಿ. ಸೋಮನಕಟ್ಟಿಮಠ ನಿರೂಪಿಸಿದರು. ಯೂಸೂಫ ಇಟಗಿ ಸ್ವಾಗತಿಸಿದರು.

Karnataka Politics: ಜನತೆಯ ಆಶೋತ್ತರಗಳಿಗೆ ಕಾಂಗ್ರೆಸ್‌ ಸ್ಪಂದನೆ: ತಿಮ್ಮಾಪೂರ

'ಜನವಿರೋಧಿ ಬಿಜೆಪಿ ಸರ್ಕಾರದ ಕೌಂಟ್‌ಡೌನ್‌ ಶುರು'

ಹಾವೇರಿ: ಹಾನಗಲ್ಲ ಉಪಚುನಾವಣೆ(Hanagal Byelection) ಹಾಗೂ ವಿಧಾನ ಪರಿಷತ್‌ ಚುನಾವಣೆಯ(Vidhan Parishat Election) ಗೆಲುವಿನ ಸಂದೇಶ ಹೊತ್ತು ಭ್ರಷ್ಟ, ಜನವಿರೋಧಿ ಸರ್ಕಾರದ ವಿರುದ್ಧ ಪಕ್ಷ ರಾಜ್ಯಾದ್ಯಂತ ಹೋರಾಟ ನಡೆಸಲಿದೆ. ಬಿಜೆಪಿ ಸರ್ಕಾರದ(BJP Government) ಕೌಂಟ್‌ಡೌನ್‌ ಹಾನಗಲ್ಲ ಉಪಚುನಾವಣೆಯಿಂದಲೇ ಶುರುವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಪರಿಷತ್‌ ಚುನಾವಣೆಯ ವಿಜೇತ ಅಭ್ಯರ್ಥಿ ಸಲೀಂ ಅಹ್ಮದ್‌(Saleem Ahmed) ಹೇಳಿದ್ದರು. 

ನಗರದ ಕೃಷ್ಣ ಕಲ್ಯಾಣಮಂಟಪದಲ್ಲಿ ಡಿ.16ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗಳಲ್ಲಿ ಜನರು ಕೊಟ್ಟಿರುವ ಈ ತೀರ್ಪು ಮುಂದಿನ ವಿಧಾನಸಭೆ ಚುನಾವಣೆಯ(Assembly Election) ದಿಕ್ಸೂಚಿಯೂ ಆಗಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವವರೆಗೆ ವಿರಮಿಸುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬರೀ ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಇದು ಜನರಿಗೂ ಗೊತ್ತಾಗಿ ಚುನಾವಣೆಗಳಲ್ಲಿ ತಕ್ಕ ಉತ್ತರವನ್ನು ಬಿಜೆಪಿಗೆ(BJP) ನೀಡುತ್ತಿದ್ದಾರೆ. ಯಾವಾಗ ಚುನಾವಣೆ ಬರುತ್ತದೆಯೋ ಈ ಬಿಜೆಪಿಯನ್ನು ಯಾವಾಗ ತೊಲಗಿಸಬೇಕು ಎಂದು ಜನರು ಕಾಯುತ್ತಿದ್ದಾರೆ ಎಂದರು.
 

Follow Us:
Download App:
  • android
  • ios