MLC Election: ಕೊಳವೆ ಬಾವಿ ತೊಡಿಸಿಕೊಡಿ ಎಂದು ಮತ ಪೆಟ್ಟಿಗೆಯಲ್ಲಿ ಪತ್ರ ಹಾಕಿರುವ ಯುವಕ

ವಿಧಾನ ಪರಿಷತ್ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಕೊಳವೆ ಬಾವಿ ತೋಡಿಸಿಕೊಡಿ ಎಂದು ಮತ ಪೆಟ್ಟಿಗೆಯಲ್ಲಿ ಯುವಕನೊಬ್ಬ ಮನವಿ ಪತ್ರವನ್ನು ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. 

voter demand for borewell through writing letter and dropping it in to vote box in chamarajanagar gvd

ಚಾಮರಾಜನಗರ (ಜೂ.16): ವಿಧಾನ ಪರಿಷತ್ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಕೊಳವೆ ಬಾವಿ ತೋಡಿಸಿಕೊಡಿ ಎಂದು ಮತ ಪೆಟ್ಟಿಗೆಯಲ್ಲಿ ಯುವಕನೊಬ್ಬ ಮನವಿ ಪತ್ರವನ್ನು ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. 

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ರಾಜೇಂದ್ರ ಎಂಬ ಮತದಾರ ಕೊಳವೆ ಬಾವಿ ತೋಡಿಸಿಕೊಡಿ ಎಂದು ಪತ್ರ ಪೆಟ್ಟಿಗೆಗೆ ಪತ್ರ ಹಾಕಿದ್ದಾನೆ. ನಾನು ಎಂ.ಎ ಬಿ.ಎಡ್ ಮಾಡಿದ್ದೇನೆ. ಆದರೆ ನನಗೆ ಕೆಲಸ ಇಲ್ಲಾ. ನಮ್ಮಪ್ಪನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜಮೀನಿಗೆ ಕೊಳವೆ ಬಾವಿ ಅವಶ್ಯಕತೆ ಇದೆ. ನನಗೆ ಸರ್ಕಾರಿ ಕೆಲಸ ಕೊಡಿ ಇಲ್ಲ. ಹಾಗಾಗಿ ಜಮೀನಿನಲ್ಲಿ‌ ಕೊಳವೆ ಬಾವಿ ತೊಡಿಸಿಕೊಡಿ ಎಂದು ಮನವಿ ಪತ್ರದಲ್ಲಿ ಹೇಳಿದ್ದಾನೆ. ಜೊತೆಗೆ ಪೆಟ್ರೋಲ್ ಬೆಲೆ ಇಳಿಸಿ ಎಂದು ಮನವಿಯನ್ನು ಮಾಡಿದ್ದಾನೆ. 

ರಸಗೊಬ್ಬರ ಬೆಲೆ ಕಡಿಮೆ ಮಾಡಿ ಎಂದು ಪತ್ರ ಬರೆದು ಬ್ಯಾಲೆಟ್ ಪೇಪರ್ ಜೊತೆಗೆ ತನ್ನ ಪತ್ರ ಹಾಕಿದ್ದಾನೆ. ಇನ್ನು ಮತ್ತೊಂದು ಕಡೆ ಮತದಾರರು ಮತ ಪೆಟ್ಟಿಯೊಳಗಡೆ ವಿಭಿನ್ನ ಕೋರಿಕೆಯ ಪತ್ರಗಳನ್ನು ಹಾಕಿದ್ದಾರೆ. ಬ್ಯಾಲೆಟ್ ಪತ್ರ ಮೇಲೆಯೇ ಅಭ್ಯರ್ಥಿಗಳ ವಿರುದ್ಧ ಅವಾಚ್ಯ ಪದಗಳನ್ನ ಮತದಾರರು‌ ಬರೆದಿದ್ದು, ಯಾವ ಅಭ್ಯರ್ಥಿಗಳು ಹಣ ಕೊಟ್ಟಿಲ್ಲ ಎಂದು ಬ್ಯಾಲೆಟ್ ಪೇಪರ್ ಮೇಲೆ ಮತದಾರನೊಬ್ಬ ಬರೆದಿದ್ದಾನೆ.

'ಬಿಜೆಪಿ ಸರ್ಕಾರದ ದುರಾಡಳಿದಿಂದ ಬೇಸತ್ತ ಜನರು ಹುಕ್ಕೇರಿ ಗೆಲ್ಲಿಸಿದ್ದಾರೆ'

ಇಲ್ಲ ಸಲ್ಲದ ಆರೋಪ ಮಾಡಿದವರಿಗೆ ತಕ್ಕ ಪ್ರತ್ಯುತ್ತರ: ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರ ಆಯ್ಕೆಗೆ ಸಂತಸ ವ್ಯಕ್ತಪಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದವರಿಗೆ ಶಿಕ್ಷಕ ಮತದಾರರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಬಿಜೆಪಿಯವರು ಅನಗತ್ಯವಾಗಿ ಶಿಕ್ಷಕರಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ್ದರು. ಪ್ರಕಾಶ ಹುಕ್ಕೇರಿ ಮುದಿ ಎತ್ತು, ಅವರು ಎಸ್‌ಎಸ್‌ಎಲ್‌ಸಿ ಪಾಸಾಗಲಿಲ್ಲ, ಹಣ ಹಂಚಿದ್ದಾರೆ ಎಂದೆಲ್ಲ ಹೇಳುವ ಮೂಲಕ ಶಿಕ್ಷಕರ ದಾರಿ ತಪ್ಪಿಸುವ ಯತ್ನ ಮಾಡಿದ್ದರು. ಆದರೆ ಇದಕ್ಕೆಲ್ಲ ಮತದಾರರು ಕಿವಿಗೊಡದೆ ಮತ ಚಲಾಯಿಸುವ ಮೂಲಕ ಪ್ರಕಾಶ ಹುಕ್ಕೇರಿಯವರನ್ನು ಗೆಲ್ಲಿಸಿದ್ದಾರೆ ಎಂದಿದ್ದಾರೆ.

MLC Election: ಪಶ್ಚಿಮ ಶಿಕ್ಷಕರ ಮತಕ್ಷೇತ್ರಕ್ಕೆ ಹೊರಟ್ಟಿ ಬಾದಶಾ!

ಕಾಂಗ್ರೆಸ್‌ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು ಒಟ್ಟಾಗಿ ನಿಂತು ಕೆಲಸ ಮಾಡಿದ್ದು, ಪ್ರಕಾಶ ಹುಕ್ಕೇರಿಯವರ ಹಿಂದಿನ ಸಾಧನೆ ಹಾಗೂ ಕಾಂಗ್ರೆಸ್‌ ಪಕ್ಷದ ಇತಿಹಾಸ ಮತ್ತು ಜನಪರ ಕೆಲಸಗಳಿಗೆ ಸಂದ ಜಯ ಇದಾಗಿದೆ. ಮತದಾರರಿಗೆ ಪಕ್ಷದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios