ಮೋದಿ, ರಾಹುಲ್ ಗಾಂಧಿ ನೋಡಿ ಮತ ಹಾಕೋದಲ್ಲ, ಜನ ಸೇವೆ ಮಾಡುವವರಿಗೆ ವೋಟ್ ಹಾಕಿ: ಲಕ್ಷ್ಮಣ ಸವದಿ
ಅಭ್ಯರ್ಥಿ ಬಿಟ್ಟು ಮೋದಿಯನ್ನ, ರಾಹುಲ್ ಗಾಂಧಿಯನ್ನು ನೋಡಿ ಮತ ಹಾಕುವುದಲ್ಲ. ನಮ್ಮ ಭಾಗದಲ್ಲಿ ಯಾವ ಅಭ್ಯರ್ಥಿ ಯೋಗ್ಯವಾಗಿದ್ದಾರೆ. ಜನರ ಸೇವೆ ಮಾಡಲು ಯಾರು ಲಭ್ಯವಿರುತ್ತಾರೆ ಎಂದು ನೋಡಿ ಅಂತಹವರಿಗೆ ಮತ ಹಾಕಬೇಕು: ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ
ಹನುಮಸಾಗರ(ಮೇ.05): ಕನ್ಯಾ ದಾನ ಮಾಡಲು ಉತ್ತಮ ವರ ನೋಡಬೇಕು. ವರನ ತಂದೆ ನೋಡಿ ಮದುವೆ ಮಾಡಬೇಡಿ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ಗ್ರಾಮದ ಎಪಿಎಂಸಿ ಮೈನಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಪರ ಪ್ರಚಾರದಲ್ಲಿ ಮಾತನಾಡಿದರು.
ಅಭ್ಯರ್ಥಿ ಬಿಟ್ಟು ಮೋದಿಯನ್ನ, ರಾಹುಲ್ ಗಾಂಧಿಯನ್ನು ನೋಡಿ ಮತ ಹಾಕುವುದಲ್ಲ. ನಮ್ಮ ಭಾಗದಲ್ಲಿ ಯಾವ ಅಭ್ಯರ್ಥಿ ಯೋಗ್ಯವಾಗಿದ್ದಾರೆ. ಜನರ ಸೇವೆ ಮಾಡಲು ಯಾರು ಲಭ್ಯವಿರುತ್ತಾರೆ ಎಂದು ನೋಡಿ ಅಂತಹವರಿಗೆ ಮತ ಹಾಕಬೇಕು. ಆಶ್ವಾಸನೆಯಂತೆ ಗ್ಯಾರಂಟಿ ಜಾರಿ ಮಾಡಿ ಮತ ಕೇಳುವ ಹಕ್ಕನ್ನು ಹೊಂದಿ ಮತ ಕೇಳಲು ಬಂದಿದ್ದೇವೆ. ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಓಟು ಕೇಳಲು ಬಂದಿದ್ದಾರೆ ಎಂದು ಪ್ರಶ್ನಿಸಿದರು.ರೈತರು ಉಪಯೋಗಿಸುವ ಗೊಬ್ಬರ, ಬೀಜ ಸೇರಿದಂತೆ ಎಲ್ಲ ಬೆಲೆಗಳು ಗಗನಕ್ಕೇರಿವೆ. ಬಿಜೆಪಿ ಸಾಲಮನ್ನಾ ಮಾಡಿಲ್ಲ. ಕಾಂಗ್ರೆಸ್ ಮಾತ್ರ ಸಾಲ ಮನ್ನಾ ಮಾಡಿದೆ. ಈ ಬಾರಿ ಮೋದಿ ಪ್ರಧಾನಿ ಆಗಲ್ಲ. ಇದು ಬರೆದುಕೊಳ್ಳಿ. ಬಿಜೆಪಿ ೨೨೦ ದಾಟುವುದಿಲ್ಲ. ಬಿಜೆಪಿ ತಂತಿ ಹರೆದ ತಂಬೂರಿಯಂತಾಗಿದೆ. ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಮತದಾರರೆಂಬ ನ್ಯಾಯಾಧೀಶರು ಮೇ೭ರಂದು ತೀರ್ಪು ಕೊಡಬೇಕು ಎಂದರು.
ಸಿದ್ದರಾಮಯ್ಯ ನನ್ನ ಜೊತೆ ಸಂಧಾನ ಮಾಡಿಕೊಂಡಿದ್ರು: ಹೊಸ ಬಾಂಬ್ ಸಿಡಿಸಿದ ಜನಾರ್ದನ ರೆಡ್ಡಿ..!
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಕೃಷಿ ಅಭಿವೃದ್ಧಿ, ಡ್ಯಾಂ ನಿರ್ಮಾಣ, ರೈತರ ಆದಾಯ ಹೆಚ್ಚಳ, ಶಿಕ್ಷಣ ಅಭಿವೃದ್ಧಿ, ಕಾಂಗ್ರೆಸ್ ಸರ್ಕಾರ ಮಾಡಿದ್ದು. ಬರಪರಿಹಾರ ಹಣ ಬಿಡುಗಡೆ ವಿಷಯದಲ್ಲಿ ಬಿಜೆಪಿ ಕೇಂದ್ರ ಸರ್ಕಾರ ಬರಿ ಸುಳ್ಳು ಹೇಳುತ್ತಿದೆ ಎಂದರು. ಮಾಜಿ ಶಾಸಕ ಹಸನಸಾಬ ದೋಟಿಹಾಳ ಮಾತನಾಡಿದರು.
ಜಿಪಂ ಮಾಜಿ ಸದಸ್ಯರಾದ ವಿಜಯ ನಾಯಕ, ನೇಮಣ್ಣ ಮೇಲಸಕ್ರಿ, ಹನುಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ ತಳವಾರ, ತೋಟಪ್ಪ ಕಾಮನೂರ, ನಿರ್ಮಲಾ ಕರಡಿ, ಬಸವಂತಪ್ಪ ಕಂಪ್ಲಿ, ಮೈನುದ್ದೀನಸಾಬ ಖಾಜಿ, ಶರಣಪ್ಪ ಸಜ್ಜನ, ಶೇಖರಗೌಡ ಮಾಲಿಪಾಟೀಲ, ಶಿವಶಂಕರಗೌಡ ಪಾಟೀಲ, ಮಹಾಂತೇಶ ಅಗಸಿಮುಂದಿನ, ವಿಶ್ವನಾಥ ಕನ್ನೂರ, ಗ್ರಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥ ಹುಲ್ಲೂರ, ಪ್ರಶಾಂತ ಗಡಾದ, ಆಸಿಫ್ ಡಾಲಾಯತ, ಸಂಗಯ್ಯ ವಸ್ತ್ರದ ಹಾಗೂ ಗ್ಯಾರಂಟಿ ಕಮಿಟಿ ಪದಾಧಿಕಾರಿಗಳು ಇದ್ದರು.