ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ: ಸಚಿವ ಚಲುವರಾಯಸ್ವಾಮಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆ.ಆರ್.ಪೇಟೆ ತಾಲೂಕಿನ ಜನತೆ ಕಾಂಗ್ರೆಸ್‌ಗೆ ಹೆಚ್ಚಿನ ಮತ ನೀಡಿದರೆ ನಾಗಮಂಗಲದಂತೆ ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸುತ್ತೇನೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. 

Vote for Congress in Lok Sabha elections Says Minister N Cheluvarayaswamy gvd

ಕೆ.ಆರ್.ಪೇಟೆ (ನ.27): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆ.ಆರ್.ಪೇಟೆ ತಾಲೂಕಿನ ಜನತೆ ಕಾಂಗ್ರೆಸ್‌ಗೆ ಹೆಚ್ಚಿನ ಮತ ನೀಡಿದರೆ ನಾಗಮಂಗಲದಂತೆ ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸುತ್ತೇನೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಪಟ್ಟಣದ ಚಿಕ್ಕಣ್ಣಗೌಡ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬ್ಲಾಕ್‌ ಕಾಂಗ್ರೆಸ್ 2ನೇ ಘಟಕದ ನೂತನ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್ ಪದಗ್ರಹಣ ಮತ್ತು ಮತದಾರರಿಗೆ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆ ವೇಳೆ ಎಲ್ಲ ಸರ್ವೇ ರಿಪೋರ್ಟ್‌ಗಳೂ ಕಾಂಗ್ರೆಸ್‌ಗೆ ವ್ಯತಿರಿಕ್ತವಾಗಿದ್ದವು. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವುದಿಲ್ಲ ಎನ್ನುತ್ತಿದ್ದರು. ಆದರೂ ನಾವು ಧೃತಿಗೆಡಲಿಲ್ಲ. ಜಿಲ್ಲೆಯ ಜನ ನಮಗೆ ಅಭೂತ ಪೂರ್ವ ಗೆಲುವು ಕೊಟ್ಟಿದ್ದಾರೆ ಎಂದರು. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಜಯಗಳಿಸಿದರೂ ಕೆ.ಆರ್.ಪೇಟೆಯಲ್ಲಿ ನಾವು ಸೋತಿದ್ದೇವೆ. ಇಲ್ಲಿ ನಮ್ಮ ಶಾಸಕರಿಲ್ಲ ಎನ್ನುವ ಕೊರಗು ಕಾರ್ಯಕರ್ತರಿಗೆ ಬೇಡ. ಇಲ್ಲಿನ ಜನ ನಮಗೆ ಮತ ನೀಡದಿದ್ದರೂ ಪಕ್ಷದ ಎಲ್ಲ ಯೋಜನೆಗಳನ್ನು ಇಲ್ಲಿಯ ಜನರಿಗೂ ನೀಡುತ್ತಿದ್ದೇವೆ ಎಂದರು. ಸ್ಥಳೀಯ ಕಾರ್ಯಕರ್ತರಿಗೆ ನಾವು ಸೋತಿದ್ದೇವೆ ಎನ್ನುವ ಮನೋಭಾವ ಬೇಡ. ನಿಮ್ಮ ಜೊತೆ ನಾನಿದ್ದೇನೆ. 

ಕಾಂಗ್ರೆಸ್‌ಗೆ ಅಧಿಕಾರ, ವಿಪಕ್ಷಗಳಿಗೆ ಹೊಟ್ಟೆ ಉರಿ: ಸಚಿವ ಚಲುವರಾಯಸ್ವಾಮಿ

ಮುಖಂಡರಿದ್ದಾರೆ. ಯಾವುದೇ ಸಂದರ್ಭದಲ್ಲೂ ಜನ ನನ್ನ ಬಳಿ ಅಥವಾ ಕಚೇರಿಗೆ ಬಂದು ಸಮಸ್ಯೆಗಳನ್ನು ತಲುಪಿಸಿದರೆ ಅದನ್ನು ಪರಿಹರಿಸುವ ಕೆಲಸ ಮಾಡುತ್ತೇನೆ ಎಂದರು. ಪಕ್ಷದ ಬಾವುಟ ನೀಡಿ ನೂತನ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್‌ಗೆ ಶುಭ ಕೋರಿದ ಸಚಿವರು, ಎಲ್ಲ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸುವಂತೆ ಸಲಹೆ ನೀಡಿದರು. ಕಳೆದ ವಿಧಾನಸಭಾ ಚುನಾವಣೆ ಪರಾಜಿತ ಅಭ್ಯರ್ಥಿ ಬಿ.ಎಲ್.ದೇವರಾಜು ಮಾತನಾಡಿ, ಚುನಾವಣೆ ನಂತರ ಇದುವರೆಗೂ ಕ್ಷೇತ್ರದಲ್ಲಿ ಒಂದು ಸಭೆ ಮಾಡಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಕೃತಜ್ಞತೆ ಹೇಳಿಲ್ಲ ಎನ್ನುವ ಆರೋಪ ಇತ್ತು. 

ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ಕೃತಜ್ಞತಾ ಸಭೆ ನಡೆಯಬೇಕಾಗಿತ್ತು. ಆದರೆ, ಕಾರಣಂತರಗಳಿಂದ ಮುಂದೂಡಲ್ಪಟ್ಟಿತ್ತು ಎಂದರು. ಚುನಾವಣೆಯಲ್ಲಿ ನಾನು ಸೋತಿದ್ದೇನೆ. ಆ ಸೋಲಿನ ಬಗ್ಗೆ ಮಾತನಾಡುವುದು ಬೇಡ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ನಾವು ನಮ್ಮ ಜನರಿಗೆ ಮನವರಿಕೆ ಮಡಿಕೊಡದ ಕಾರಣ ನಮಗೆ ಸೋಲಾಯಿತು. ಪಕ್ಷದ ಮುಖಂಡರು ಇರುವ ಜಾಗದಲ್ಲಿಯೇ ನನಗೆ ಹೆಚ್ಚು ಮತ ಬರಲಿಲ್ಲ. ಇದು ನನ್ನ ಸೋಲಿಗೆ ಕಾರಣವಾಯಿತು ಎಂದರು. ನನ್ನ ಸೋಲಿಗೆ ಎಲ್ಲ ನೋವುಗಳನ್ನೂ ನಾನೇ ಅನುಭವಿಸುತ್ತೇನೆ. ಕಾರ್ಯಕರ್ತರು ಧೃತಿಗೆಡದೆ ಮುಂಬರುವ ಲೋಕಸಭೆ, ತಾಪಂ, ಜಿಪಂ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕು. 

ಅಂಬರೀಶ್ ಗುರಿ, ಉದ್ದೇಶಗಳನ್ನು ಮುಂದುವರೆಸಿಕೊಂಡು ಹೋಗಲು ಸಂಕಲ್ಪ: ಸುಮಲತಾ

ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟೋಣ. ಗುತ್ತಿಗೆ ಕೆಲಸ ಕೊಡಿಸುವುದನ್ನು ಬಿಟ್ಟು ಕಾರ್ಯಕರ್ತರ ಮಿಕ್ಕೆಲ್ಲಾ ಸಮಸ್ಯೆಗಳಿಗೆ ನಾನು ಸ್ಪಂದಿಸುತ್ತೇನೆ ಎಂದರು. ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಪದಗ್ರಹಣ ಮಾಡಿದ ನೂತನ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್ ಮಾತನಾಡಿದರು. ಸಭೆಯಲ್ಲಿ ಮಾಜಿ ಶಾಸಕ ಬಿ.ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಮುಖಂಡರಾದ ವಿಜಯ ರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಬಿ.ನಾಗೇಂದ್ರ ಕುಮಾರ್, ಕೋಡಿ ಮಾರನಹಳ್ಳಿ ದೇವರಾಜು, ಚಿನಕುರಳಿ ರಮೇಶ್, ಹಿರೀಕಳಲೆ ರಾಮದಾಸ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Latest Videos
Follow Us:
Download App:
  • android
  • ios