ಒಕ್ಕಲಿಗರು ಒಗ್ಗಟ್ಟಿನಿಂದ ಕಾಂಗ್ರೆಸ್ ಬೆಂಬಲಿಸಿ: ಸಂಸದ ಡಿ.ಕೆ.ಸುರೇಶ್
ಕಾಂಗ್ರೆಸ್ ಪಕ್ಷದಲ್ಲಿ 25 ವರ್ಷಗಳ ನಂತರ ಒಕ್ಕಲಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಉನ್ನತ ಸ್ಥಾನ ದೊರೆತಿದೆ. ಹೀಗಾಗಿ ನಮ್ಮ ಸಮುದಾಯ ಒಗ್ಗಟ್ಟಿನಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಲು ಮುಂದಾಗಬೇಕು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಮಳವಳ್ಳಿ (ಮಾ.08): ಕಾಂಗ್ರೆಸ್ ಪಕ್ಷದಲ್ಲಿ 25 ವರ್ಷಗಳ ನಂತರ ಒಕ್ಕಲಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಉನ್ನತ ಸ್ಥಾನ ದೊರೆತಿದೆ. ಹೀಗಾಗಿ ನಮ್ಮ ಸಮುದಾಯ ಒಗ್ಗಟ್ಟಿನಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಲು ಮುಂದಾಗಬೇಕು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು. ಪಟ್ಟಣದ ಹೊರವಲಯದ ಕಾರ್ಮೆಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಎಐಸಿಸಿ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಆಯೋಜಿಸಿದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದಲ್ಲಿ ಎಸ್.ಎಂ.ಕೃಷ್ಣ ನಂತರ ಒಕ್ಕಲಿಗ ಸಮಾಜಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾಗಿದ್ದಾರೆ.
ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದ ಜನರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಪಕ್ಷ ಬೆಂಬಲಿಸಿದರೆ ನಮ್ಮ ಸಮಾಜಕ್ಕೆ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ದೊರೆಯಬಹುದು. ಎಲ್ಲರೂ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಮುಂದಿನ ಸರ್ಕಾರದಲ್ಲಿ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಉನ್ನತ ಸ್ಥಾನ ದೊರೆಯಲಿದೆ ಎಂದು ಹೇಳಿದರು. ವಿದ್ಯಾರ್ಥಿ ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್ ಮತ್ತು ಪಿ.ಎಂ.ನರೇಂದ್ರಸ್ವಾಮಿ ಸ್ನೇಹ ಸಂಬಂಧ ಉತ್ತಮವಾಗಿದ್ದು, ವಿವಿಧ ವಿಭಾಗದಲ್ಲಿ ಪಕ್ಷಕ್ಕಾಗಿ ದುಡಿದಿದ್ದಾರೆ. ಕನಕಪುರ ಮತ್ತು ಮಳವಳ್ಳಿ ಬೇರೆ ಬೇರೆಯಲ್ಲ. ನಮಗೆ ಎರಡೂ ಒಂದೇ.
ಜೆಡಿಎಸ್-ಕಾಂಗ್ರೆಸ್‌ನಿಂದ ಡೋಂಗಿ ರಾಜಕೀಯ: ಡಿ.ವಿ.ಸದಾನಂದಗೌಡ
ಈ ಭಾಗದ ಅಭಿವೃದ್ಧಿಗೆ ಪಕ್ಷದ ಮುಖಂಡರ ಜೊತೆ ಸದಾ ನಿಲ್ಲುವೆ. ಮಳವಳ್ಳಿ ಕ್ಷೇತ್ರ ಕನಕಪುರ ಲೋಕಸಭೆ ಸೇರಬೇಕು ಎನ್ನುವುದು ನನ್ನ ಬಯಕೆ. ನಾನು ರಾಜಕಾರಣದಲ್ಲಿ ಇರುವುದೊಳಗೆ ಮಳವಳ್ಳಿ ಮತ್ತು ಹನೂರು ಕ್ಷೇತ್ರಗಳ ನಮ್ಮ ವ್ಯಾಪ್ತಿಗೆ ಸೇರಿದರೆ ಬಹಳ ಸಂತೋಷ ಪಡುವೆ ಎಂದು ಹೇಳಿದರು. ಎಐಸಿಸಿ ಸದಸ್ಯ ಎನ್.ಚಲುವರಾಯಸ್ವಾಮಿ ಮಾತನಾಡಿ, ಅತಿ ಹೆಚ್ಚು ಒಕ್ಕಲಿಗರು ಇರುವ ಜಿಲ್ಲೆಯಲ್ಲಿ ಸಾಹುಕಾರ್ ಚೆನ್ನಯ್ಯ ಮತ್ತು ಎಸ್.ಎಂ.ಕೃಷ್ಣ ಅಂತ ನಾಯಕರು ಬೆಳೆದಿದ್ದು, ಇತರೆ ಸಮಾಜದೊಂದಿಗೆ ಸಹಬಾಳ್ವೆ ಮತ್ತು ಸಮನ್ವದೊಂದಿಗೆ ಒಗ್ಗಟ್ಟಿನಿಂದ ಎಲ್ಲರನ್ನು ಕರೆದುಕೊಂಡು ಹೋಗುತ್ತಿದೆ.
ಎಸ್.ಎಂ..ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಹಳೆ ಮೈಸೂರಿನ 110 ಸ್ಥಾನಗಳಲ್ಲಿ ಕಾಂಗ್ರೆಸ್ 80 ಸ್ಥಾನ ಗೆದ್ದಿತ್ತು. ಈ ಬಾರಿ ಡಿ.ಕೆ.ಶಿವಕುರ್ಮಾ ಅವರಿಗೂ ಉನ್ನತ ಸ್ಥಾನ ದೊರೆಯಲಿದೆ ಎಂದು ಹೇಳಿದರು. 2004ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಲು ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಧರ್ಮಸಿಂಗ್ ಸಂಪುಟದಲ್ಲಿ ಮಂತ್ರಿಯಾಗಲು ಎಚ್.ಡಿ.ದೇವೇಗೌಡರು ಒಪ್ಪಲಿಲ್ಲ, ಇತರೆ ಒಕ್ಕಲಿಗರು ನಾಯಕರನ್ನು ಬೆಳೆಯಲು ಬಿಡದ ಜೆಡಿಎಸ್‌ನವರ ಮನಸ್ಥಿತಿ ಏಕೆ ನಮ್ಮ ಸಮುದಾಯಕ್ಕೆ ಅರ್ಥವಾಗುತ್ತಿಲ್ಲ ಎಂದರು.
ಸಿದ್ದರಾಮಯ್ಯ ಲೋಕಾಯುಕ್ತ ಹಲ್ಲು ಕಿತ್ತಿದ್ದರು: ಸಿಎಂ ಬೊಮ್ಮಾಯಿ
ಎಐಸಿಸಿ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ.ಸುಂದರ್ ರಾಜ್, ಮುಖಂಡರಾದ ಕದಲೂರು ರಾಮಕೃಷ್ಣ, ಅಜ್ಜಹಳ್ಳಿ ರಾಮಕೃಷ್ಣ, ಶಕುಂತಲಾ ಮಲ್ಲಿಕ್ ಇದ್ದರು.