ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಕೋಟ ಶ್ರೀನಿವಾಸ ಪೂಜಾರಿಗೆ ಸಮನ್ಸ್

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ. 
 

Violation of Election Code Summons to Kota Srinivas Poojary gvd

ಬೆಂಗಳೂರು (ಏ.06): ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ. ಚುನಾವಣಾ ಸಿಬ್ಬಂದಿ ದಾಖಲಿಸಿದ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು ಕೋಟ ಶ್ರೀನಿವಾಸ ಪೂಜಾರಿ ಜತೆಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪಕ್ಷದ ಮುಖಂಡ ಲಾಲಾಜಿ ಆರ್.ಮೆಂಡನ್ ಅವರಿಗೂ ಸಮನ್ಸ್‌ ಜಾರಿ ಮಾಡಲಾಗಿದ್ದು, ಬರುವ ಮೇ 27ರಂದು ಹಾಜರಾಗಿ ವಿವರಣೆ ನೀಡುವಂತೆ ನಿರ್ದೇಶನ ನೀಡಿದೆ. ಮಾ. 30ರಂದು ಕಟಪಾಡಿ ಖಾಸಗಿ ಕಾಲೇಜು ಆವರಣದಲ್ಲಿ ಚುನಾವಣಾ ಅಧಿಕಾರಿಗಳ ಅನುಮತಿ ಇಲ್ಲದೇ ಪ್ರಚಾರ ಸಭೆ ಮಾಡಿದ್ದರು. ಚುನಾವಣೆ ಸಿಬ್ಬಂದಿ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಿದ್ದರು.

ಚುನಾವಣೆ ಇಲ್ಲಿ, ಮತಯಾಚನೆ ಅಲ್ಲಿ: ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಯೇ ಇರಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮತಯಾಚನೆಗೆ ಬೆಂಗಳೂರು, ಮುಂಬೈ, ಸಾಂಗ್ಲಿ ಇತ್ಯಾದಿ ಕಡೆಗೆ ಹೋಗುತ್ತಾರೆ. ಚುನಾವಣೆ ಇಲ್ಲಿ, ಮತಯಾಚನೆ ಅಲ್ಲಿ, ಇದು ಅಚ್ಚರಿಯಾದರೂ ನಿಜ. ಕಾರಣ ಉಡುಪಿ ಮತ್ತು ದ.ಕ. ಜಿಲ್ಲೆಯ ಗಣನೀಯ ಸಂಖ್ಯೆಯ ಜನರು ಈ ಮಹಾನಗರಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಅವರು ವರ್ಷಗಳಿಂದ ಅಲ್ಲಿದ್ದರೂ ಅವರ ಮತದಾನ ಹಕ್ಕು ಇನ್ನೂ ಊರಿನಲ್ಲಿಯೇ ಇದೆ. 

ಕಾಂಗ್ರೆಸ್‌ ಗೆಲ್ಲಿಸಿ ಸಿದ್ದರಾಮಯ್ಯ ಕೈ ಬಲಪಡಿಸಿ: ಮಾಜಿ ಸಚಿವ ಎಚ್‌.ಆಂಜನೇಯ

ಆದ್ದರಿಂದ ಚುನಾವಣೆಯ ಸಂದರ್ಭದಲ್ಲಿ ಒಂದು ದಿನದ ಮಟ್ಟಿಗಾದರೂ ಅವರು ಊರಿಗೆ ಬಂದು ತಮ್ಮ ಪರವಾಗಿ ಮತ ಚಲಾಯಿಸಿ ಎಂದು ಅಭ್ಯರ್ಥಿಗಳು ಅಲ್ಲಿಗೆ ಹೋಗಿ ಯಾಚಿಸುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿಬಿಟ್ಟಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಂತೂ ಲೋಕಸಭಾ ಅಭ್ಯರ್ಥಿಗಳ ಜೊತೆಗೆ ಉಭಯ ಜಿಲ್ಲೆಗಳು ಶಾಸಕರೂ ಕೂಡ ಮುಂಬೈ, ಬೆಂಗಳೂರಿನಲ್ಲಿರುವ ಕರಾವಳಿಗರನ್ನು ಭೇಟಿಯಾಗಿ ಮತಯಾಚಿಸುತ್ತಿದ್ದಾರೆ. ಕಾರಣ ಉಭಯ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿ ಟಫ್ ಫೈಟ್ ನಡೆಸುತ್ತಿರುವುದರಿಂದ ಒಂದೊಂದು ಮತವೂ ಗೆಲ್ಲುವ ಲೆಕ್ಕಕ್ಕೆ ಬರುತ್ತದೆ.

ಕೋರ್ಟ್‌ ಕಲಾಪ ಅಕ್ರಮ ವಿಡಿಯೋ ಪ್ರಸಾರ: ಕೇಜ್ರಿವಾಲ್‌ ಪತ್ನಿ ವಿರುದ್ಧ ದೂರು ದಾಖಲು!

ಇಂದು ಬೆಂಗಳೂರಿಗೆ ಕೋಟ-ಚೌಟ: ಉಡುಪಿ-ಚಿಕ್ಕಮಗಳೂರಿನ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ದ.ಕ. ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಮಾ.6ರಂದು ಬೆಂಗಳೂರಿಗೆ ತೆರಳಿ ಕರಾವಳಿಗರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮಾ.7ರಂದು ಮುಂಬೈಗೆ ತೆರಳಿ ಅಲ್ಲಿ ಕರಾವಳಿಗರು ಹೆಚ್ಚಿರುವ ಕಡೆಗಳಲ್ಲಿ ಬೆಂಬಲಯಾಚಿಸಲಿದ್ದಾರೆ. ಅವರಿಗೆ ಎರಡೂ ಜಿಲ್ಲೆಗಳ ಶಾಸಕರೂ ಸಾಥ್ ನೀಡಲಿದ್ದಾರೆ. ಕಾಂಗ್ರೇಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಈಗಾಗಲೇ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಮುಂಬೈಯ ಕರಾವಳಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios