Narendra Modi: 25ಕ್ಕೆ ವಿಜಯಸಂಕಲ್ಪ ಯಾತ್ರೆ ಹಿನ್ನೆಲೆ: ದಾವಣಗೆರೆಗೆ ಮತ್ತೊಮ್ಮೆ ಮೋದಿ
ಬಿಜೆಪಿಯಿಂದ ಮಾ.25ರಂದು ನಗರದಲ್ಲಿ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮದ ಸಮಾರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ತಂಡವು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಜೊತೆಗೆ ಸಮಾವೇಶ ಸ್ಥಳವನ್ನು ಬುಧವಾರ ವೀಕ್ಷಿಸಿತು.
ದಾವಣಗೆರೆ (ಮಾ.16) : ಬಿಜೆಪಿಯಿಂದ ಮಾ.25ರಂದು ನಗರದಲ್ಲಿ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮದ ಸಮಾರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ತಂಡವು ಸಂಸದ ಡಾ.ಜಿ.ಎಂ.ಸಿದ್ದೇಶ್ವರ(Dr GM Siddeshwar) ಜೊತೆಗೆ ಸಮಾವೇಶ ಸ್ಥಳವನ್ನು ಬುಧವಾರ ವೀಕ್ಷಿಸಿತು.
ನಗರದ ಜಿಎಂಐಟಿ ಕಾಲೇಜಿಗೆ ಹೊಂದಿರುವ ವಿಶಾಲ ಪ್ರದೇಶದಲ್ಲಿ ಸಮಾವೇಶಕ್ಕೆ ಸಿದ್ಧತೆ ಕಾರ್ಯಗಳು ಭರದಿಂದ ಸಾಗಿರುವ ಹಿನ್ನೆಲೆಯಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಸಮಾವೇಶಕ್ಕೆ ನಿಗದಿಪಡಿಸಿದ 400 ಎಕರೆ ಪ್ರದೇಶದ ಬಗ್ಗೆ ರಾಜ್ಯ ತಂಡದ ಸದಸ್ಯರ ಜೊತೆಗೆ ವಿವರಿಸಿ, ವೀಕ್ಷಣೆ ಮಾಡಿದರು.
Vijayasankalpa yatre: ಭಾರತವನ್ನು ಸಂಪೂರ್ಣ ಹಿಂದುತ್ವ ಶಾಲೆಯಾಗಿ ಪರಿವರ್ತಿಸಬೇಕು: ಸಿ.ಟಿ.ರವಿ
ಈ ವೇಳೆ ಮಾತನಾಡಿದ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ರಾಜ್ಯದ ನಾಲ್ಕು ಕಡೆಯಿಂದ ಯಾತ್ರೆ ಆರಂಭವಾಗಿದೆ. ಮಾ.24ರಂದು ಶಿವಮೊಗ್ಗದಿಂದ ಬರುವ ವಿಜಯ ಸಂಕಲ್ಪ ಯಾತ್ರೆ(Vijayasankalpa yatre) ಹೊನ್ನಾಳಿ, ಹುಬ್ಬಳ್ಳಿಯಿಂದ ಹೊರಟ ಯಾತ್ರೆ ಹರಿಹರ, ಕಲಬುರಗಿಯಿಂದ ಹೊರಟ ಯಾತ್ರೆ ಜಗಳೂರಿಗೆ, ತುಮಕೂರು ಕಡೆಯಿಂದ ಬರುವ ಯಾತ್ರೆ ದಾವಣಗೆರೆ ತಾಲೂಕಿನ ಆನಗೋಡು ಗ್ರಾಮಕ್ಕೆ ಬಂದು, ಮಾ.25ರಂದು ದಾವಣಗೆರೆ ನಗರದಲ್ಲಿ ಮಹಾ ಸಂಗಮವಾಗಲಿವೆ ಎಂದರು.
3 ಲಕ್ಷಕ್ಕೂ ಅಧಿಕ ಆಸನ:
ಸುಮಾರು 400 ಎಕರೆ ಪ್ರದೇಶದಲ್ಲಿ ವಿಶಾಲ ವೇದಿಕೆ, ಪೆಂಡಾಲ್ ನಿರ್ಮಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ(PM Narendra Modi) ಪಾಲ್ಗೊಳ್ಳುವ ಐತಿಹಾಸಿಕ ಕಾರ್ಯಕ್ರಮಕ್ಕೆ ಸುಮಾರು 3 ಲಕ್ಷಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗುವುದು. ಬಂದ ಜನರಿಗೆ ಊಟ, ಕುರ್ಚಿ, ನೆರಳು ನೀಡುತ್ತೇವೆ. ಬಿಜೆಪಿ ಪ್ರತಿ ಸಲವೂ ಯಾವುದೇ ಕಾರ್ಯಕ್ರಮವನ್ನು ರಾಜಕೀಯ ಪಕ್ಷಗಳಿಗೆ ಅದೃಷ್ಟದ ನೆಲವಾದ ದಾವಣಗೆರೆಯಿಂದ ಆರಂಭಿಸುತ್ತದೆ. ಮಹಾ ಸಂಗಮವನ್ನು ದಾವಣಗೆರೆಯಲ್ಲಿ ಹಮ್ಮಿಕೊಳ್ಳುವ ಮೂಲಕ ಯಾತ್ರೆ ಮುಗಿಸಲಿದೆ ಎಂದು ತಿಳಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ ಮೌರ್ಯ, ಪಕ್ಷದ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ವಿ ಸದಸ್ಯ ಕೆ.ಎಸ್.ನವೀನ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶಿವಪ್ರಕಾಶ, ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ಸದಸ್ಯ ಗೌತಮ್ ಜೈನ್, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್, ನವೀನ ಇತರರಿದ್ದರು.
ಅಜಾನ್ ಕುರಿತು ವಿವಾದಾತ್ಮಕ ಹೇಳಿಕೆ : ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ SDPI ಪ್ರತಿಭಟನೆ
ದಾವಣಗೆರೆಯ ಸಮಾವೇಶದ ಮೂಲಕ ರಾಜ್ಯದಲ್ಲಿ ಕನಿಷ್ಠ 150 ಕ್ಷೇತ್ರ ಗೆಲ್ಲುವ ಸಂದೇಶ ನೀಡಲಾಗುವುದು. ಹಿಂದೆಂದೂ ಕಾಣದಂತಹ ಸಮಾವೇಶ ನಡೆಸಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ. ಅತೀ ಹೆಚ್ಚು ಜನರು ಸೇರುವ ಐತಿಹಾಸಿಕ ಕಾರ್ಯಕ್ರಮ ಇದಾಗಲಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ನೀಡಲಿದ್ದಾರೆ.
ಡಾ.ಜಿ.ಎಂ.ಸಿದ್ದೇಶ್ವರ, ಸಂಸದ