ಜೆಡಿಎಸ್‌ಗೆ ನಮ್ಮಿಂದ ಪುನರ್ಜನ್ಮ, ಚನ್ನಪಟ್ಟಣ ಬಿಜೆಪಿಗೆ ಬಿಟ್ಟುಕೊಡಲಿ, ಯತ್ನಾಳ

ಎಚ್.ಡಿ. ಕುಮಾರಸ್ವಾಮಿ ಅವರ ಸಹಾಯ ನಮಗೆ ಬೇಕು. ನಮ್ಮ ಶಕ್ತಿ ಕುಮಾರಸ್ವಾಮಿ ಅವರಿಗೆ ಅಗತ್ಯವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ನಮಗೆ ಬೆಂಬಲ ನೀಡಿದ ಕಾರಣಕ್ಕೆ ಅನುಕೂಲ ಆಗಿದೆ. ಅದರಂತೆ ಜೆಡಿಎಸ್‌ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಇದರಿಂದಾಗಿ ಎರಡು ಕಡೆಯವರಿಗೂ ಲಾಭವಾಗಿದೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ
 

Vijayapura MLA Basanagouda Patil yatnal Talks Over JDS grg

ಹುಬ್ಬಳ್ಳಿ(ಅ.20): ಜೆಡಿಎಸ್‌ ಪಕ್ಷಕ್ಕೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಅವರಿಂದ ನಮಗೂ ಲಾಭವಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ತ್ಯಾಗ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು. 

ನಗರದಲ್ಲಿ ಸಿ.ಪಿ. ಯೋಗೇಶ್ವರಗೆ ಚನ್ನ ಪಟ್ಟಣ ಟಿಕೆಟ್ ವಿಷಯದ ಬಗ್ಗೆ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಎಚ್.ಡಿ. ಕುಮಾರಸ್ವಾಮಿ ಅವರ ಸಹಾಯ ನಮಗೆ ಬೇಕು. ನಮ್ಮ ಶಕ್ತಿ ಕುಮಾರಸ್ವಾಮಿ ಅವರಿಗೆ ಅಗತ್ಯವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ನಮಗೆ ಬೆಂಬಲ ನೀಡಿದ ಕಾರಣಕ್ಕೆ ಅನುಕೂಲ ಆಗಿದೆ. ಅದರಂತೆ ಜೆಡಿಎಸ್‌ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಇದರಿಂದಾಗಿ ಎರಡು ಕಡೆಯವರಿಗೂ ಲಾಭವಾಗಿದೆ ಎಂದ ಅವರು, ಚನ್ನಪಟ್ಟಣ ಉಪಚುನಾವಣೆಯಲ್ಲಿ ಟಿಕೆಟ್‌ನ್ನು ನಮ್ಮ ಪಕ್ಷದ ಕಾರ್ಯಕರ್ತರಿಗೆ ಕೊಡಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ಆದ್ದರಿಂದ ಸಚಿವ ಕುಮಾರಸ್ವಾಮಿ ಅವರು ಟಿಕೆಟ್ ತ್ಯಾಗ ಮಾಡಬೇಕು ಎಂದರು. 

ಮುಸ್ಲಿಮರು ನಮ್ಮ ಮುಂದೆ ಕಣ್ಣುಬಿಟ್ಟೋರು, ಈ ಮಕ್ಕಳಿಗೆ ದೇಶದ ಮೇಲೆ ಯಾವುದೇ ಅಧಿಕಾರ ಇಲ್ಲ: ಯತ್ನಾಳ್

ಶಿಗ್ಗಾವಿ ಟಿಕೆಟ್ ಬೊಮ್ಮಾಯಿ ಅವರ ಪುತ್ರನಿಗೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭರತ್ ಬೊಮ್ಮಾಯಿಗೆ ಟಿಕೆಟ್ ಹಂಚಿಕೆ ವಿಷಯದಲ್ಲಿ ಬಸವರಾಜ ಬೊಮ್ಮಾ ಯಿ ಅವರನ್ನೇಕೆ ಬಲಿಪಶು ಮಾಡುತ್ತೀರಿ. ರಾಜ್ಯದಲ್ಲಿ ನಂಬರ್ ಒನ್ ಸ್ಥಾನದಲ್ಲಿರು ವವರಿಂದಲೇ ಕುಟುಂಬ ರಾಜಕಾರಣ ಮುಂದುವರಿದಿದೆ. ಬೊಮ್ಮಾಯಿ ಅವರ ಪುತ್ರನಿಗೆ ಟಿಕೆಟ್ ನೀಡಿದರೆ ತಪ್ಪೇನಿಲ್ಲ. ಈ ಹಿಂದೆ ಎಲ್ಲ ರಿಗೂ ಟಿಕೆಟ್ ಕೊಟ್ಟಮೇಲೆ ಅವರು ಮಗನಿಗೆ ಕೊಟ್ಟರೆ ತಪ್ಪೇನಿಲ್ಲ ಎಂದರು. 

ಸಿಎಂ ರಾಜೀನಾಮೆ ನೀಡಲಿ: 

ಒಂದು ಕಪ್ಪು ಚುಕ್ಕೆ ಇಲ್ಲದಿರುವ ಸಿಎಂ ಎಂದಿದ್ದ ಸಿದ್ದರಾ ಮಯ್ಯ, ಮತ್ತೆ ಈಗ ಮುಡಾ ಹಗರಣದಲ್ಲಿ ಏಕೆ ಸಿಲುಕಿಕೊಂಡಿದ್ದಾರೆ? ಮುಡಾ ಸೈಟ್‌ನ್ನು ಆವಾಗಲೇ ಕೊಟ್ಟಿದ್ದರೆ ಮುಗಿದು ಬಿಡುತ್ತಿತ್ತು. ಈಗ ಹಗರಣದಲ್ಲಿ ಸಿಲುಕಿಕೊಂಡಿದ್ದು, ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ಆರೋಪ ಮುಕ್ತರಾಗಬೇಕು ಎಂದು ಯತ್ನಾಳ ಆಗ್ರಹಿಸಿದರು. 

ಸರ್ಕಾರ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಕೇಸ್ ವಾಪಸ್ ಪಡೆದಿರುವುದು ದುರಂತದ ಸಂಗತಿ, ದೇಶದ್ರೋಹಿಗಳು ಪೊಲೀಸ್ ಠಾಣೆ ಸುಡಲು ಮುಂದಾಗಿದ್ದರು. ದೇಶದಲ್ಲಿ ಯಾವುದೇ ಪಕ್ಷ ಇದ್ದರೂ ಇಂತಹದ್ದನ್ನು ಒಪ್ಪಿಕೊಳ್ಳಬಾರದು. ಇದರಿಂದಾಗಿಪೊಲೀಸರ ನೈತಿಕತೆ ಅಡಗಿ ಹೋಗುತ್ತದೆ ಎಂದರು. 

ಕೆಜೆ ಹಳ್ಳಿ, ಡಿಜೆ ಹಳ್ಳಿ ನಂತರ ಹುಬ್ಬಳ್ಳಿ ಗಲಭೆ ಬಹ ಳ ಗಂಭೀರವಾದದ್ದು, ಸರ್ಕಾರಕ್ಕೆ ಮಾನ- ಮರ್ಯಾದೆ ಇದ್ದರೆ ಈ ಪ್ರಕರಣವನ್ನು ಹಿಂಪಡೆಯಬಾರದು. ಹಾಗೇನಾದರೂ ಮಾ ಡಿದ ರೆ ಹೈಕೋರ್ಟ್ ಮೆಟ್ಟಿಲು ಹತ್ತುತ್ತೇವೆ. ದೇಶ ದ್ರೋಹಿಗಳನ್ನು ಗುಂಡು ಹಾರಿಸಿ ಕೊಲ್ಲ ಬೇ ಕು. ಮುಸ್ಲಿಂರ ತುಷ್ಟಿಕರಣಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್‌ಐಆರ್‌

ಜೋಶಿಗೆ ಸಂಬಂಧವಿಲ್ಲ 

ಪ್ರಹ್ಲಾದ್ ಜೋಶಿ ಸಹೋದರನ ಮೇಲೆ ವಂಚನೆ ಪ್ರಕರಣದ ಕುರಿತಂತೆ ಪ್ರತಿಕ್ರಿ ಯೆ ನೀಡಿದ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಪ್ರಹ್ಲಾದ ಜೋಶಿ ಹಾಗೂ ಅವರ ಸಹೋದರ ಬೇರೆ ಬೇರೆಯಾಗಿ ದ್ದಾರೆ. ಜೋಶಿ ಹಾಗೂ ಸಹೋದರ ಗೋಪಾಲ ಜೋಶಿಗೂ ಯಾವುದೇ ಬಗೆ ಯ ಸಂಬಂಧವಿಲ್ಲ ಎಂದು ತಿಳಿಸಿದರು. ಸುಮ್ಮನೆ ಪ್ರಹ್ಲಾದ ಜೋಶಿ ಅವರ ಹೆಸರು ಕರೆತಲಾಗುತ್ತಿದೆ. ಎಲ್ಲೆಡೆ ಒಳ್ಳೆಯವರು ಇರುವಂತೆ ಕೆಟ್ಟವರು ಇರುತ್ತಾರೆ ಎಂದರು.

ಮುಸ್ಲಿಮರಿಗೆ ದೇಶದ ಮೇಲೆ ಹಕ್ಕಿಲ್ಲ 

ಹುಬ್ಬಳ್ಳಿ: ಕಾಂಗ್ರೆಸ್ ಯಾವಾಗಲೂ ಮುಸ್ಲಿಂ ತುಷ್ಟಿಕರಣ ಮಾಡುತ್ತಲೇ ಬಂದಿದೆ. ವಕ್ಸ್ ಬೋರ್ಡ್ ಆಸ್ತಿಯನ್ನೇ ನೋಡಿ ರಾಜ್ಯದಲ್ಲಿ 6.5 ಲಕ್ಷ ಎಕರೆ ಕ್ಷೇಮ್ ಮಾಡ್ತಾ ಇದ್ದಾರೆ. ರಾಜ್ಯದಲ್ಲೇ ಇಷ್ಟಾದರೆ ದೇಶದಲ್ಲಿ ಎರಡು ಪಾಕಿಸ್ತಾನ ಆಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಸ್ ಬೋರ್ಡ್ ಆಸ್ತಿಯೇನು ಜಮೀರ್ ಅಹ್ಮದ್ ಅವರ ಅಪ್ಪಂದಾ? ಎಂದು ಪ್ರಶ್ನಿಸಿದ ಅವರು, ಟಿಪ್ಪು ಸುಲ್ತಾನ, ಆದಿಲ್‌ಶಾಹಿ ಹೀಗೆ ಆಗಿನ ಕಾಲದಲ್ಲಿನ ಮುಸ್ಲಿಮರಿಗೆ ಹೆದರಿ ಮತಾಂತರ ಆದವರು ಇವರು. 1500 ವರ್ಷದ ಹಿಂದೆ ಮುಸ್ಲಿಮರೆಲ್ಲಿ ಇದ್ದರು. ಮುಸ್ಲಿಮರಿಗೆ ಈ ದೇಶದ ಮೇಲೆ ಯಾವುದೇ ಹಕ್ಕಿಲ್ಲ. ಗಾಂಧಿ ಮತ್ತು ನೆಹರು ಈ ದೇಶ ಹಾಳು ಮಾಡಿದವರು ಎಂದು ಗಂಭೀರವಾಗಿ ಆರೋಪಿಸಿದರು.

Latest Videos
Follow Us:
Download App:
  • android
  • ios