ಪುಕ್ಸಟ್ಟೆ ಯೋಜನೆಯಿಂದ ಗಂಡ-ಹೆಂಡತಿ ಮಧ್ಯೆ ಜಗಳ ಶುರುವಾಗಿವೆ: ಕಾಂಗ್ರೆಸ್ ವಿರುದ್ಧ ಜಿಗಜಿಣಗಿ ವಾಗ್ದಾಳಿ

2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವುದಿಲ್ಲ ಅಂತ ಹೇಳುವ ಮೂಲಕ ಖಡಕ್ ಆಗಿಯೇ ವಿಶ್ವಾಸ ಹೊರಹಾಕಿದ ವಿಜಯಪುರ ಬಿಜೆಪಿ ಸಂಸದ ರಮೇಶ್‌ ಜಿಗಜಿಣಗಿ 

Vijayapura BJP MP Ramesh Jigajinagi Slams Karnataka Congress Government grg

ವಿಜಯಪುರ(ಜೂ.14): ಪಾರ್ಲಿಮೆಂಟ್ ಚುನಾವಣೆವರೆಗೆ ಮಾತ್ರ ಫ್ರೀ..‌ಫ್ರೀ, ಚುನಾವಣೆ ಬಳಿಕ ಫ್ರೀ ಕಟ್ ಮಾಡ್ತಾರೆ.‌ ಜನರನ್ನ ತಪ್ಪು ದಾರಿಗೆ ಎಳೆಯಲು ಕಾಂಗ್ರೆಸ್ ಈ ಕೆಲಸ ಮಾಡಿದೆ. ಎಲೆಕ್ಷನ್‌ನಲ್ಲಿ ಎಲ್ಲರಿಗೂ ಫ್ರೀ ಅಂತ ಗ್ಯಾರಂಟಿ ಕಾರ್ಡ್‌ ಹಂಚಿದ್ರು. ಈಗ ಫ್ರೀ ಅವರಿಗಿಲ್ಲ, ಇವರಿಗಿಲ್ಲ ಅಂತಿದ್ದಾರೆ. ಗ್ಯಾರಂಟಿ ಕಾರ್ಟ್‌ಲ್ಲಿ ಮೊದಲೇ ಹೇಳಬೇಕಿತ್ತು. ಈಗ ದಿನಕ್ಕೊಂದು ರೂಲ್ಸ್ ಮಾಡ್ತಾರೆ ಅಂತ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿಜಯಪುರ ಬಿಜೆಪಿ ಸಂಸದ ರಮೇಶ್‌ ಜಿಗಜಿಣಗಿ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಸರ್ಕಾರದ ಫ್ರೀ ಗ್ಯಾರಂಟಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ್‌ ಜಿಗಜಿಣಗಿ. ಮಹಿಳೆಯರಿಗೆ ಫ್ರೀ ಕೊಟ್ಟಿದ್ದಕ್ಕೆ ನನಗೆ ಖುಷಿ ಇದೆ. ಆದ್ರೆ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿವೆ. ಪುಕ್ಸಟ್ಟೆ ಯೋಜನೆಯಿಂದ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಜಗಳಗಳು ನಡೆಯುತ್ತಿವೆ. ಪುಕ್ಸಟ್ಟೆ ಬಸ್ ಎಂದು ಹೆಣ್ಣುಮಕ್ಕಳು ದಿನ ಮಗಳ ಊರಿಗೆ, ಅಪ್ಪನ ಊರಿಗೆ,  ಅವ್ವನ ಊರಿಗೆ ಅಂತಾ ಅಡ್ಡಾಡ್ತಿದ್ದಾರೆ ಅಂತ ಹೇಳಿದ್ದಾರೆ. 

ಲೋಕಸಭೆ ಚುನಾವಣೆ 2024: ಶಿವಮೊಗ್ಗದಿಂದ ಗೀತಾ ಶಿವರಾಜ್‌ ಕುಮಾರ್‌ ಕಾಂಗ್ರೆಸ್‌ ಅಭ್ಯರ್ಥಿ?

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲೋದಿಲ್ಲ

2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವುದಿಲ್ಲ ಅಂತ ಹೇಳುವ ಮೂಲಕ ರಮೇಶ್‌ ಜಿಗಜಿಣಗಿ ಖಡಕ್ ಆಗಿಯೇ ವಿಶ್ವಾಸ ಹೊರಹಾಕಿದ್ದಾರೆ.  ಬಿಜೆಪಿ ಗೆದ್ದರೆ ಮೋದಿಗೆ ಕ್ರೆಡಿಟ್, ಸೋತರೆ ರಾಜ್ಯ ನಾಯಕರ ಮೇಲೆ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ರಮೇಶ್‌ ಜಿಗಜಿಣಗಿ, ಈಗ ಕಾಂಗ್ರೆಸ್‌ನವರು ಗೆದ್ದಿದ್ದಾರೆ. ಕ್ರೆಡಿಟ್ ಸಿದ್ದರಾಮಯ್ಯಗೆ ಕೊಟ್ರಾ ಅಥವಾ ಗೌಡಗೆ ಕೊಟ್ರಾ?. ಕ್ರೆಡಿಟ್ ಯಾರಿಗೆ ಕೊಟ್ಟರು ಅಂದ್ರೆ ರಾಹುಲ್ ಗಾಂಧಿ, ಆ ಗಾಂಧಿ, ಸೋನಿಯಾ ಗಾಂಧಿಗೆ ಕೊಟ್ಟಾರೆ. ಹಂಗೆ ನಾವು ಮೋದಿಯವರು ಬಂದ್ರು ಗೆದ್ದೀವಿ ಅಂತ ಹೇಳ್ತಿದ್ದೇವು ಅಂತ ತಿಳಿಸಿದ್ದಾರೆ. 

ಜಗತ್ತಿನ ನಾಯಕರು ಮೋದಿ ಸಲುವಾಗಿ ಸೋತು ಹೋಗಿದ್ದಾರೆ

ಪ್ರಧಾನಿ ಮೋದಿ ಹವಾ ಕಡಿಮೆ ಆಗಿದ್ಯಾ ಅನ್ನೋ ವಿಚಾರಕ್ಕೆ ಸಂಬಂಧಿಸಿಂತೆ ಮಾತನಾಡಿದ ಜಿಗಜಿಣಗಿ, ಮೋದಿ ಹವಾ ಈ ಎಲೆಕ್ಷನ್ ಅಷ್ಟೇ ಅಲ್ಲ, ಅವರ ಜೀವ ಇರುವವರಿಗೂ ಕಡಿಮೆ ಆಗಲಿಕ್ಕೆ ಸಾಧ್ಯವೇ ಇಲ್ಲ. ತಾನಾಗಿಯೇ ರಾಜಕೀಯ ಬಿಟ್ಟು ಹೋದ್ರೆ ಆ ಮಾತು ಬೇರೆ. ಹವಾ ಕಡಿಮೆ ಆಗಿಲ್ಲ, ಇನ್ನೂ ಹೆಚ್ಚಿಗೆ ಆಗಿದೆ. ಜಗತ್ತಿನ ನಾಯಕರು ಮೋದಿ ಸಲುವಾಗಿ ಸೋತು ಹೋಗಿದ್ದಾರೆ. 130 ಕೋಟಿ ಜನರನ್ನು ಹೇಗೆ ಕಂಟ್ರೋಲ್ ಮಾಡ್ತಾರೆ ಅಂತಾರೆ. ಅವರಿಗೆ 20 ಕೋಟಿ ಜನರನ್ನು ಕಂಟ್ರೋಲ್ ಮಾಡಲು ಆಗಲಿಲ್ಲ. ಮಹಾಮಾರಿ ನೋಡಿದ್ರಲ್ಲ, ರೋಡ್ ರೋಡ್‌ಗೆ ಹೆಣಗಳು ಬಿದ್ದವು. ಅದೇ ವಾತಾವರಣ ದೇಶದಲ್ಲಿ ನಿರ್ಮಾಣ ಆಗಿದ್ರೆ. ರೋಡ್‌ನಲ್ಲಿರುವ ಹೆಣ ಒಗಿಯಲು ಯಾರು ಸಿಗ್ತಿರಲಿಲ್ಲ. ನಮ್ಮು ನಿಮ್ಮು ಹೆಣ ರೋಡ್ ಮೇಲೆ ಬಿಳ್ತಿದ್ವು, ಪುಣ್ಯಾತ್ಮ ಮೋದಿ ನಮಗೆ ಲೈಫ್ ಕೊಟ್ಟಿದ್ದಾನೆ. ಎಲ್ಲರೂ ನೆನೆಸಿಕೊಳ್ಳೋಣ ಎಂದ ಜಿಗಜಿಣಗಿ ಹೇಳಿದ್ದಾರೆ. 

Latest Videos
Follow Us:
Download App:
  • android
  • ios