Asianet Suvarna News Asianet Suvarna News

'ಯತ್ನಾಳ್ ಬಿಜೆಪಿ ಸೇರ್ಪಡೆ ಬೇಡವೆಂದ್ರೂ ಬಿಎಸ್‌ವೈ ಕೇಳಲಿಲ್ಲ, ಈಗ ಅವರಿಗೆ ಮುಳುವು'

ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಸನಗೌಡ ಪಾಟೀಲ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಸಂಸದ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Vijayapura BJP MP ramesh jigajinagi Hits out at Basangouda patil Yatnal rbj
Author
Bengaluru, First Published Jan 15, 2021, 3:39 PM IST

ವಿಜಯಪುರ, (ಜ.15): ಸಚಿವ ಸ್ಥಾನ ಸಿಗದಿದ್ದಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಎಸ್ ಯಡಿಯೂರಪ್ಪ ವಿರುದ್ಧ ಸಿಡಿ ಬಾಂಬ್ ಸ್ಫೋಟಿಸಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚನ ಮೂಡಿಸಿದೆ.

ಕಣ್ಣಿನಿಂದ ನೋಡಲಾಗದಂತಹ ಸಿಡಿ ಇದೆ.   ಈ ಸಿಡಿಯನ್ನು ಮುಂದಿಟ್ಟು ಯಡಿಯೂರಪ್ಪನವರನ್ನು ಬ್ಲ್ಯಾಕ್​ಮೇಲ್ ಮಾಡಿ ಹಲವರು ಸಚಿವರಾಗಿದ್ದಾರೆ ಎಂದು  ಯತ್ನಾಳ್ ಆರೋಪಿಸಿದ್ದರು. ಯತ್ನಾಳ್ ಅವರ ಈ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಬಿಎಸ್‌ವೈ ವಿರುದ್ಧ CD ಬಾಂಬ್ ಸಿಡಿಸಿದ ಯತ್ನಾಳ್: ರಾಜಕಾರಣಲ್ಲಿ ಶುರುವಾಯ್ತು ಸಿಡಿ ಚರ್ಚೆ

ಇನ್ನು ಈ ಬಗ್ಗೆ ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಪ್ರತಿಕ್ರಿಯಿಸಿದ್ದು, ಬಿಜೆಪಿ ಪಕ್ಷದಿಂದ ಉಚ್ಛಾಟನೆ ಆಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಮರು ಸೇರ್ಪಡೆ ಬೇಡ ಎಂದರೂ ಮುಖ್ಯಮಂತ್ರಿ ಯಡಿಯೂರಪ್ಪ ಕೇಳಲಿಲ್ಲ.ಸಾಹೇಬ್ರೇ ಇಂಥವರು ಮತ್ತೆ ಪಕ್ಷಕ್ಕೆ ಬರುವುದು ಬೇಡ ಎಂದರೂ ಯಡಿಯೂರಪ್ಪ ಕೇಳಲಿಲ್ಲ. ಈಗ ಅವರಿಗೆ ಮುಳುವಾಗಿದೆ ಎಂದರು.

ಸಚಿವ ಸ್ಥಾನದ ಅವಕಾಶ ಸಿಗದಿರುವುದು, ಬೇಸರ, ಅಸಮಾಧಾನ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು. ಅದು ಬಿಟ್ಡು ಹಾದಿಬೀದಿಯಲ್ಲಿ ಮಾತಾನಾಡುತ್ತಾ ತಿರುಗಿದರೆ ತಲೆ ಕೆಟ್ಟಿದೆ ಎನ್ನುತ್ತಾರೆ ಎಂದು ಯತ್ನಾಳ್‌ ವಿರುದ್ಧ ವಾಗ್ದಾಳಿ ನಡೆಸಿದರು.

Follow Us:
Download App:
  • android
  • ios