ವಿಜಯಪುರ, (ಜ.12): ಬಹುದಿನಗಳ ಬಳಿಕ ನಾಳೆ ಅಂದ್ರೆ ಜನವರಿ 13ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದ್ದು , 7 ರಿಂದ 8 ಜನ ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ನಾಳೆ (ಬುಧವಾರ) ಮಧ್ಯಾಹ್ನ 3.50ಕ್ಕೆ ರಾಜಭವನದಲ್ಲಿ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯ ನಡೆಯಲಿದ್ದು, ಈ ಹಿನ್ನಲೆ ನೂತನ ಸಚಿವರಾಗಲಿರುವ ಶಾಸಕರಿಗೆ ಮುಖ್ಯಮಂತ್ರಿಗಳೇ ಕರೆ ಮಾಡಿ ಆಹ್ವಾನ ನೀಡುತ್ತಿದ್ದಾರೆ.

ಸಿಎಂ ಮಹತ್ವದ ಹೇಳಿಕೆ: ಏಳೆಂಟು ಸಚಿವರು ಪ್ರಮಾಣ ವಚನ ಸ್ವೀಕಾರ ಫಿಕ್ಸ್, ಒಬ್ಬರಿಗೆ ಕೋಕ್

ಕಳೆದ ಹಲವು ತಿಂಗಳಿಂದ ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಕಳೆದ 24 ಗಂಟೆಯಿಂದ ಮೌನಕ್ಕೆ ಶರಣಾಗಿದ್ದಾರೆ. ಸೋಮವಾರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದ ಅವರು, ಇಂದು (ಮಂಳಗವಾರ) ನಗರದಲ್ಲಿ ಪತ್ರಕರ್ತರು ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳಿಂದ ಕರೆ ಬಂದಿದೆಯೇ ಎಂದು ಕೇಳಿದಾಗ ನನ್ನ ಕರೆನ್ಸಿ ಖಾಲಿ ಆಗಿದೆ, ಮುಖ್ಯಮಂತ್ರಿ ನನಗೇನೂ ಕರೆ ಮಾಡಿಲ್ಲ ಎಂದು ಹೇಳಿದರು.

ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ ನನಗೆ ಮುಖ್ಯಮಂತ್ರಿಯಿಂದ ಕರೆ ಬಂದಿಲ್ಲ, ನನ್ನ ಕರೆನ್ಸಿ ಖಾಲಿಯಾಗಿದೆ. ಇಷ್ಟಕ್ಕೂ ಬೆಂಗಳೂರಿನಲ್ಲಿ ನನಗೇನೂ ಕೆಲಸವಿಲ್ಲ, ಹೀಗಾಗಿ ನಾನು ಅಲ್ಲಿಗೆ ಹೋಗುತ್ತಲೂ ಇಲ್ಲ ಎಂದರು.