Asianet Suvarna News Asianet Suvarna News

ಯಾವ 'ಯಪ್ಪ'ನಿಂದಲೂ ವೋಟು ಬರೊಲ್ಲ, ಮೋದಿಯಿಂದ್ಲೇ ಕರ್ನಾಟಕ ಗೆಲುವು; ಸ್ವಪಕ್ಷೀಯರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಯತ್ನಾಳ!

ನಾನು ಯಾರ ಭೇಟಿಗೂ ದೆಹಲಿಗೆ ಹೋಗಿಲ್ಲ. ಯಾರ ಅಪಾಯಿಟ್ಮೆಂಟ್ ಕೇಳಿಲ್ಲ. ಅದರ ಅಗತ್ಯವೂ ನನಗಿಲ್ಲ. ನಾನು ನನ್ನ ವೈಯಕ್ತಿಕ ಕೆಲಸದ ಮೇಲೆ ಹೋಗಿದ್ದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿ ಪ್ರವಾಸದ ಬಗ್ಗೆ ಸ್ಪಷ್ಟಪಡಿಸಿದರು.

Vijayapur MLA Basanagowda patil yatnal outraged agains bs yadiyurappa indirectly rav
Author
First Published Dec 22, 2023, 6:46 PM IST

 ವಿಜಯಪುರ (ಡಿ.22): ನಾನು ಯಾರ ಭೇಟಿಗೂ ದೆಹಲಿಗೆ ಹೋಗಿಲ್ಲ. ಯಾರ ಅಪಾಯಿಟ್ಮೆಂಟ್ ಕೇಳಿಲ್ಲ. ಅದರ ಅಗತ್ಯವೂ ನನಗಿಲ್ಲ. ನಾನು ನನ್ನ ವೈಯಕ್ತಿಕ ಕೆಲಸದ ಮೇಲೆ ಹೋಗಿದ್ದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿ ಪ್ರವಾಸದ ಬಗ್ಗೆ ಸ್ಪಷ್ಟಪಡಿಸಿದರು.

ಇಂದು ವಿಜಯನಗರದಲ್ಲಿ ದೆಹಲಿ ಪ್ರವಾಸ ಕುರಿತು ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ದೆಹಲಿಗೆ ಹೋಗಿದ್ದು, ನನ್ನ ವೈಯಕ್ತಿಕ ಕೆಲಸದ ಮೇಲೆ. ಕಾರ್ಖಾನೆ ವಿಚಾರವಾಗಿ. ನಾನು ಅತ್ಯಂತ ಅಪಮಾನಕಾರಿಯಾಗಿ, ದೈನ್ಯನಾಗಿ ಹೋಗಿಲ್ಲ. ನಾನು ಯಾರನ್ನೂ ಭೇಟಿ ಮಾಡಿಲ್ಲ, ಯಾರೂ ಬೈದಿಲ್ಲ, ಮಾಧ್ಯಮಗಳಲ್ಲಿ ತೋರಿಸಿದಂತೆ ಯಾವ ನಾಯಕರು ಎಚ್ಚರಿಕೆಯನ್ನೂ ಕೊಟ್ಟಿಲ್ಲ. ಸುಮ್ನೆ ನೀವು ಹೊಡೆಯುತ್ತಾ ಕೂರ್ತಿರಿ ಎಂದು ಮಾಧ್ಯಮಗಳ ವಿರುದ್ಧ ಸಿಡಿಮಿಡಿಗೊಂಡರು.

ಯತ್ನಾಳ್ ಹುಚ್ಚುನಾಯಿ ಇದ್ದಂತೆ, ನಾಯಿ ನಿಯತ್ತೂ ಇಲ್ಲದ ವ್ಯಕ್ತಿ: ರೇಣುಕಾಚಾರ್ಯ

ಸ್ವಪಕ್ಷೀಯರ ವಿರುದ್ಧ ಮತ್ತೆ ಹರಿಹಾಯ್ದ ಯತ್ನಾಳ್!

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಗೆಲುವು ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಯಾವ 'ಯಪ್ಪ'ನಿಂದಲೂ ಸಾಧ್ಯವಿಲ್ಲ. ಇವರ ಮುಖ ನೋಡಿ ಯಾರೂ ವೋಟ್ ಹಾಕಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

 

ಯತ್ನಾಳ್ ಯಾವ ಪಕ್ಷದಲ್ಲಿದ್ದಾರೋ ಗೊತ್ತಾಗ್ತಿಲ್ಲ ; ಬಿಸಿ ಪಾಟೀಲ್

 ನಾನು ಕುಟುಂಬ ರಾಜಕಾರಣ ವಿರೋಧಿ. ವಂಶ ರಾಜಕಾರಣವನ್ನು ನಾನು ವಿರೋಧಿಸುತ್ತೇನೆ. ವಂಶವಾದದ ವಿರುದ್ಧ, ಅಡ್ಜೆಸ್ಟ್‌ಮೆಂಟ್ ರಾಜಕಾರಣದ ವಿರುದ್ಧ  ನನ್ನ ಹೋರಾಟ ನಿರಂತರ ಮುಂದುವರಿಯುತ್ತದೆ ಎಂದರು. ಯಾವ ಹೈಕಮಾಂಡಿಗೂ ಸೂಚನೆಗೂ, ನೋಟಿಸ್‌ಗೂ ಬಗ್ಗಲ್ಲ ಎನ್ನುವ ಮೂಲಕ ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಕಿಡಿಕಾರಿದರು.

Follow Us:
Download App:
  • android
  • ios