Asianet Suvarna News Asianet Suvarna News

ಎರಡು ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಬೊಮ್ಮಾಯಿ ಸರಕಾರ ಆದೇಶ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರ ಇಬ್ಬರು ಹೊಸ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನ  ನೇಮಕ ಮಾಡಿ ಆದೇಶ ಹೊರಡಿಸಿದೆ.  ಸಚಿವೆ ಶಶಿಕಲಾ ಜೊಲ್ಲೆಗೆ  ಮತ್ತು ಆನಂದ್ ಸಿಂಗ್ ಅವರ ಉಸ್ತುವಾರಿ ಸಚಿವ ಸ್ಥಾನವನ್ನು ಬದಲಾವಣೆ ಮಾಡಲಾಗಿದೆ.

vijayanagara and koppal district incharge-minister reshuffle gow
Author
Bengaluru, First Published Jul 30, 2022, 1:03 PM IST

ಬೆಂಗಳೂರು (ಜು.30): ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರ ಇಬ್ಬರು ಹೊಸ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನ  ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ ಜನವರಿ 24 ರಂದು ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರುಗಳನ್ನ ನೇಮಕ ಮಾಡಿದ್ದ ಬೊಮ್ಮಾಯಿ ಸರಕಾರ ಈಗ ಅಧಿಸೂಚನೆಯನ್ನು ತಿದ್ದುಪಡಿ ಮಾಡಿ ಪ್ರವಾಸೋದ್ಯಮ ಇಲಾಖೆ ಸಚಿವ ಆನಂದ್ ಸಿಂಗ್ ಅವರನ್ನು ವಿಜಯನಗರ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಮುಜುರಾಯಿ  ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆಗೆ ಕೊಪ್ಪಳ ಜಿಲ್ಲೆಯ ಜವಾಬ್ದಾರಿಯನ್ನು ನೀಡಲಾಗಿದೆ. ಈ ಹಿಂದೆ ಸಚಿವ ಆನಂದ್ ಸಿಂಗ್ ಗೆ ಕೊಪ್ಪಳ ಜಿಲ್ಲೆ ಉಸ್ತುವಾರಿ ಮತ್ತು  ಶಶಿಕಲಾ ಜೊಲ್ಲೆಗೆ ವಿಜಯನಗರ ಜಿಲ್ಲೆ ಉಸ್ತುವಾರಿ  ವಹಿಸಲಾಗಿತ್ತು.  ಸ್ವಂತ ಜಿಲ್ಲೆಯ ಸಚಿವರುಗಳಿಗೆ ಬೇರೆ ಜಿಲ್ಲೆ ಉಸ್ತುವಾರಿ ನೀಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿತ್ತು. ವಿಜಯನಗರದಿಂದ ಆನಂದ್‌ ಸಿಂಗ್ ಅವರನ್ನ ಬದಲಾವಣೆ ಮಾಡಿದಕ್ಕೆ ಹೊಸಪೇಟೆಯಲ್ಲಿ ಕಾರ್ಯಕರ್ತರು ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದರು. ಇದಕ್ಕೆ  ಆನಂದ್ ಸಿಂಗ್, ಇವೆಲ್ಲಾ ತಾಂತ್ರಿಕ ಸಮಸ್ಯೆಗಳು. ನಾನು ಒಪ್ಪಿದ ನಂತರವೇ ಉಸ್ತುವಾರಿ ಬದಲಾವಣೆ ಆಗಿದೆ. ಎಲ್ಲವನ್ನೂ ಹೊರಗಡೆ ಹೇಳುವ ಹಾಗಿಲ್ಲ ಎಂದು ಅಭಿಮಾನಿಗಳನ್ನ ಸಮಾಧಾನಪಡಿಸಿಸಿದ್ದರು. ಇದಾಗಿ 6 ತಿಂಗಳ ಬಳಿಕ ಇದೀಗ ಮತ್ತೆ ಆನಂದ್ ಸಿಂಗ್ ಗೆ ವಿಜಯನಗರದ ಉಸ್ತುವಾರಿ ನೀಡಲಾಗಿದೆ.

District incharge Ministers ವಿಜಯನಗರದಿಂದ ಆನಂದ್‌ ಸಿಂಗ್‌ಗೆ ಕೋಕ್, ಭುಗಿಲೆದ್ದ ಆಕ್ರೋಶ

ಬೊಮ್ಮಾಯಿ ಸರಕಾರದ ಪ್ರತಿನಿಧಿಗಳ ಉಸ್ತುವಾರಿ ಸ್ಥಾನ ಇಂತಿದೆ
ಸಿಎಂ ಬಸವರಾಜ ಬೊಮ್ಮಾಯಿ - ಬೆಂಗಳೂರು ನಗರ
* ಗೋವಿಂದ ಕಾರಜೋಳ - ಬೆಳಗಾವಿ ಜಿಲ್ಲಾ ಉಸ್ತುವಾರಿ, 
* ಬೈರತಿ ಬಸವರಾಜ್ - ಚಿಕ್ಕಮಗಳೂರು 
* ಬಿ. ಶ್ರೀರಾಮುಲು - ಬಳ್ಳಾರಿ
* ವಿ. ಸೋಮಣ್ಣ- ಚಾಮರಾಜನಗರ 
* ಉಮೇಶ್ ಕತ್ತಿ- ವಿಜಯಪುರ
* ಎಸ್. ಅಂಗಾರ - ಉಡುಪಿ 
* ಆರಗ ಜ್ಞಾನೇಂದ್ರ - ತುಮಕೂರು 
* ಡಾ. ಅಶ್ವತ್ಥ್ ನಾರಾಯಣ - ರಾಮನಗರ
* ಸಿ.ಸಿ. ಪಾಟೀಲ್ - ಬಾಗಲಕೋಟೆ
* ಪ್ರಭು ಚವ್ಹಾಣ - ಯಾದಗಿರಿ
* ಮುರುಗೇಶ್ ನಿರಾಣಿ - ಕಲಬುರಗಿ
* ಎಸ್‌.ಟಿ. ಸೋಮಶೇಖರ್ - ಮೈಸೂರು
* ಬಿ.ಸಿ. ಪಾಟೀಲ್ - ಚಿತ್ರದುರ್ಗ ಮತ್ತು ಗದಗ
* ಭೈರತಿ ಬಸವರಾಜ್- ದಾವಣಗೆರೆ
* ಡಾ.ಕೆ.ಸುಧಾಕರ್ - ಬೆಂಗಳೂರು ಗ್ರಾಮಾಂತರ ಜಿಲ್ಲೆ
* ಕೆ.ಗೋಪಾಲಯ್ಯ - ಹಾಸನ, ಮಂಡ್ಯ 
* ಶಶಿಕಲಾ ಜೊಲ್ಲೆ- ಕೊಪ್ಪಳ
* ಎಂಟಿಬಿ ನಾಗರಾಜ್ - ಚಿಕ್ಕಬಳ್ಳಾಪುರ 
* ಕೆ.ಸಿ.ನಾರಾಯಣಗೌಡ - ಶಿವಮೊಗ್ಗ 
* ಬಿ.ಸಿ.ನಾಗೇಶ್ - ಕೊಡಗು 
* ವಿ.ಸುನಿಲ್ ಕುಮಾರ್ - ದಕ್ಷಿಣ ಕನ್ನಡ 
* ಹಾಲಪ್ಪ ಆಚಾರ್ - ಧಾರವಾಡ
* ಶಂಕರ ಪಾಟೀಲ್ ಮುನೇನಕೊಪ್ಪ-ರಾಯಚೂರು, ಬೀದರ್, 
* ಮುನಿರತ್ನ - ಕೋಲಾರ
* ಆನಂದ್ ಸಿಂಗ್ - ವಿಜಯನಗರ

Follow Us:
Download App:
  • android
  • ios