District incharge Ministers ವಿಜಯನಗರದಿಂದ ಆನಂದ್ ಸಿಂಗ್‌ಗೆ ಕೋಕ್, ಭುಗಿಲೆದ್ದ ಆಕ್ರೋಶ
* ಜಿಲ್ಲಾ ಉಸ್ತುವಾರಿಗಳ ಬದಲಾವಣೆ
* ಆನಂದ್ ಸಿಂಗ್ ಕೈತಪ್ಪಿದ ವಿಜಯನಗರ
* ಹೊಸಪೇಟೆಯಲ್ಲಿ ಭುಗಿಲೆದ್ದ ಆಕ್ರೋಶ
ಹೊಸಪೇಟೆ, (ಜ.24): ಬೊಮ್ಮಾಯಿ ಸರ್ಕಾರ ಹೊಸ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನ (District incharge Ministers) ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ. ಆದ್ರೆ, ಸ್ವಂತ ಜಿಲ್ಲೆಯ ಸಚಿವರುಗಳಿಗೆ ಬೇರೆ ಜಿಲ್ಲೆ ಉಸ್ತುವಾರಿ ನೀಡಲಾಗಿದೆ.
ಈ ಹಿಂದೆ ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿದ್ದ ಆನಂದ್ ಸಿಂಗ್(Anand Singh) ಅವರಿಗೆ ಇದೀಗ ಕೊಪ್ಪಳ ಜಿಲ್ಲೆ ಜವಾಬ್ದಾರಿ ನೀಡಲಾಗಿದೆ. ವಿಜಯನಗರ ಜಿಲ್ಲಾ ಉಸ್ತುವಾರಿಯನ್ನು ಶಶಿಕಲಾ ಜೊಲ್ಲೆ(Shashikala Jolle) ಅವರಿಗೆ ನೀಡಲಾಗಿದೆ. ಇದರಿಂದ ಆನಂದ್ ಸಿಂಗ್ ಅಭಿಮಾನಿಗಳು ಹೊಸಪೇಟೆಯಲ್ಲಿ ದಿಢೀರ್ ಪ್ರತಿಭಟನೆಗಿಳಿದಿದ್ದಾರೆ.
District Ministers ಜಿಲ್ಲಾ ಉಸ್ತುವಾರಿ ಸಚಿವರ ಹೊಸ ಪಟ್ಟಿ ರಿಲೀಸ್, ಅಶೋಕ್, ಆನಂದ್ ಸಿಂಗ್‌ಗೆ ಬಿಗ್ ಶಾಕ್
ವಿಜಯನಗರದಿಂದ ಆನಂದ್ ಸಿಂಗ್ ಅವರನ್ನ ಬದಲಾವಣೆ ಮಾಡಿರುವುದಕ್ಕೆ ಹೊಸಪೇಟೆಯ ಪುನೀತ್ ರಾಜಕುಮಾರ್ ಸರ್ಕಲ್ ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದರು.
ಪ್ರತಿಭಟನಾ ಸ್ಥಳಕ್ಕೆ ಸಿನಿಮೀಯ ರೀತಿಯಲ್ಲಿ ಆಗಮಿಸಿದ ಸಚಿವ ಆನಂದ್ ಸಿಂಗ್, ಅಭಿಮಾನಿಗಳು ಟೈರ್ ಗೆ ಬೆಂಕಿ ಹಚ್ಚಿದ್ದು ಕಂಡು ಆಕ್ರೋಶಗೊಂಡರು. ಅಲ್ಲದೇ ಫೈರ್ ಇಂಜಿನ್ ತರಿಸಿ ಬೆಂಕಿ ನಂದಿಸಿದರು.
ಬಳಿಕ ಮಾತನಾಡಿದ ಆನಂದ್ ಸಿಂಗ್, ಇವೆಲ್ಲಾ ತಾಂತ್ರಿಕ ಸಮಸ್ಯೆಗಳು. ನಾನು ಒಪ್ಪಿದ ನಂತರವೇ ಉಸ್ತುವಾರಿ ಬದಲಾವಣೆ ಆಗಿದೆ. ಎಲ್ಲವನ್ನೂ ಹೊರಗಡೆ ಹೇಳುವ ಹಾಗಿಲ್ಲ ಎಂದು ಅಭಿಮಾನಿಗಳನ್ನ ಸಮಾಧಾನಪಡಿಸಿದರು.
ನಂತರ ತಹಸೀಲ್ದಾರ್ ಕಚೇರಿವರೆಗೆ ಸಚಿವರ ಹಿಂದೆಯೇ ಬಂದ ಅಭಿಮಾನಿಗಳು, ನಾನು ಕೆಲವೊಂದನ್ನು ತಮ್ಮ ಬಳಿ ಹೇಳಲು ಆಗಲ್ಲ ಎಂದಾಗ ಉದ್ದೇಶವ ಪೂರ್ವಕವಾಗಿಯೇ ನಿಮ್ಮ ಬದಲಾವಣೆ ಆಗಿದೆ ಎಂದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.
ಎಸ್ ಟಿ ಸೋಮಶೇಖರ್(ಮೈಸೂರು), ಬೈರತಿ ಬಸವರಾಜ್೯ ದಾವಣಗೆರೆ) ಮತ್ತು ಮುನಿರತ್ನ (ಕೋಲಾರ) ಅಶ್ವತ್ಥ್ ನಾರಾಯಣ(ರಾಮನಗರ), ಗೋಪಾಲಯ್ಯ(ಹಾಸನ) ಈ ಹಿಂದೆ ಇದ್ದ ಜಿಲ್ಲಾ ಉಸ್ತುವಾರಿಯೇ ಮುಂದುವರೆಯಲಿದ್ದಾರೆ.
ಶ್ರೀರಾಮುಲು ಅವರಿಗೆ ಚಿತ್ರದುರ್ಗ ಬದಲಾಗಿ ಬಳ್ಳಾರಿ ನೀಡಲಾಗಿದೆ. ಈ ಹಿಂದೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಬೇಕು ಎಂದು ಶ್ರೀರಾಮುಲು ಬೇಡಿಕೆ ಇಟ್ಟಿದ್ದರು. ಅದಂರಂತೆ ಅವರ ಬೇಡಿಕೆ ಈಡೇರಿದೆ. ಆದ್ರೆ, ಸುಧಾಕರ್, ಎಂಟಿಬಿ ನಾಗರಾಜ್, ಈಶ್ವರಪ್ಪ ಸೇರಿದಂತೆ ಇನ್ನುಳಿದ ಸಚಿವರನ್ನ ಅವರ ಜಿಲ್ಲೆ ಬಿಟ್ಟು ಬೇರೆ ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಇದರಿಂದ ಕೆಲವರು ಸಂತಸಗೊಂಡಿದ್ದರೆ, ಇನ್ನೂ ಕೆಲವರು ಸ್ವಂತ ಜಿಲ್ಲೆ ಉಸ್ತುವಾರಿ ಸಿಗಲಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ.
* ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಬೆಂಗಳೂರು ನಗರ
* ಗೋವಿಂದ ಕಾರಜೋಳ ಬೆಳಗಾವಿ ಜಿಲ್ಲಾ ಉಸ್ತುವಾರಿ,
* ಕೆ.ಎಸ್.ಈಶ್ವರಪ್ಪ-ಚಿಕ್ಕಮಗಳೂರು
* ಬಿ.ಶ್ರೀರಾಮುಲು-ಬಳ್ಳಾರಿ
* ವಿ.ಸೋಮಣ್ಣ-ಚಾಮರಾಜನಗರ
* ಉಮೇಶ್ ಕತ್ತಿ-ವಿಜಯಪುರ
* ಎಸ್.ಅಂಗಾರ-ಉಡುಪಿ
* ಆರಗ ಜ್ಞಾನೇಂದ್ರ-ತುಮಕೂರು
* ಡಾ.ಅಶ್ವತ್ಥ್ ನಾರಾಯಣ-ರಾಮನಗರ
* ಸಿ.ಸಿ.ಪಾಟೀಲ್-ಬಾಗಲಕೋಟೆ
* ಪ್ರಭು ಚವ್ಹಾಣ- ಯಾದಗಿರಿ
* ಮುರುಗೇಶ್ ನಿರಾಣಿ- ಕಲಬುರಗಿ
* ಎಸ್.ಟಿ. ಸೋಮಶೇಖರ್- ಮೈಸೂರು
* ಬಿ.ಸಿ.ಪಾಟೀಲ್-ಚಿತ್ರದುರ್ಗ ಮತ್ತು ಗದಗ
* ಭೈರತಿ ಬಸವರಾಜ್-ದಾವಣಗೆರೆ
* ಡಾ.ಕೆ.ಸುಧಾಕರ್-ಬೆಂಗಳೂರು ಗ್ರಾಮಾಂತರ ಜಿಲ್ಲೆ
* ಕೆ.ಗೋಪಾಲಯ್ಯ-ಹಾಸನ, ಮಂಡ್ಯ
* ಶಶಿಕಲಾ ಜೊಲ್ಲೆ-ವಿಜಯನಗರ
* ಎಂಟಿಬಿ ನಾಗರಾಜ್-ಚಿಕ್ಕಬಳ್ಳಾಪುರ
* ಕೆ.ಸಿ.ನಾರಾಯಣಗೌಡ-ಶಿವಮೊಗ್ಗ
* ಬಿ.ಸಿ.ನಾಗೇಶ್-ಕೊಡಗು
* ವಿ.ಸುನಿಲ್ ಕುಮಾರ್-ದಕ್ಷಿಣ ಕನ್ನಡ
* ಹಾಲಪ್ಪ ಆಚಾರ್-ಧಾರವಾಡ
* ಶಂಕರ ಪಾಟೀಲ್ ಮುನೇನಕೊಪ್ಪ-ರಾಯಚೂರು, ಬೀದರ್,
* ಮುನಿರತ್ನ-ಕೋಲಾರ