ಪರಿಷತ್‌ ಗದ್ದಲ ತಾರಕ್ಕಕ್ಕೆ, ರವಿಕುಮಾರ್-ಜಬ್ಬಾರ್ ನಡುವಿನ ಗಲಾಟೆ ನಿಲ್ಲಿಸಲು ಮಾರ್ಷಲ್‌ಗಳ ಎಂಟ್ರಿ!

ಪರಿಷತ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಗದ್ದಲ ತಾರಕಕ್ಕೇರಿದೆ. ಬಿಜೆಪಿಯವರು ಸದನದ  ಬಾವಿಗಿಳಿದು ಏರುಧ್ವನಿಯಲ್ಲಿ ಕಾಂಗ್ರೆಸ್ ನಾಯಕರತ್ತ ಬಂದಾಗ ಮಾರ್ಷಲ್‌ಗಳು ಬಂದು ಗಲಾಟೆಯನ್ನು ತಡೆದಿರುವ ಘಟನೆ ನಡೆದಿದೆ.

vidhana parishad session marshals entry to stop fight between congress and BJP leaders gow

ಬೆಂಗಳೂರು (ಫೆ.28): ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಾಸಿರ್‌ ಹುಸೇನ್‌ ಗೆಲುವಿನ ಹಿನ್ನೆಲೆಯಲ್ಲಿ ಬೆಂಬಲಿಗರು ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿರುವುದಕ್ಕೆ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ವಿಧಾನ ಪರಿಷತ್ ಮತ್ತು ವಿಧಾನ ಸಭೆ ಕಲಾಪದಲ್ಲಿ ವಾಗ್ವಾದ ತಾರಕಕ್ಕೇರಿದೆ. 

ಪರಿಷತ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಗದ್ದಲ ತಾರಕಕ್ಕೇರಿದೆ. ಬಿಜೆಪಿಯವರು ಸದನದ  ಬಾವಿಗಿಳಿದು ಏರುಧ್ವನಿಯಲ್ಲಿ ಕಾಂಗ್ರೆಸ್ ನಾಯಕರತ್ತ ಬಂದಾಗ ಮಾರ್ಷಲ್‌ಗಳು ಬಂದು ಗಲಾಟೆಯನ್ನು ತಡೆದಿರುವ ಘಟನೆ ನಡೆದಿದೆ.

ಎಲ್ಲಾ ಕಡೆ ಚರ್ಚೆ ಆಗ್ತಿದೆ. ವಿಧಾನಸೌಧದ ಪೋಲೀಸ್ ಠಾಣೆ ಯಲ್ಲಿ ಸುಮೊಟೋ ಕೇಸ್ ದಾಖಲಾಗಿದೆ. ಇಷ್ಟಾದರೂ ಸರ್ಕಾರ ಕ್ರಮ ಕ್ಕೆ ಮುಂದಾಗಿಲ್ಲ. ಈ ರೀತಿಯ ನಿಷ್ಕ್ರಿಯ ಸರ್ಕಾರ, ದೇಶದ್ರೋಹಿ ಸರ್ಕಾರ ನೋಡಿಲ್ಲ ಎಂದು ರವಿಕುಮಾರ್ ಹೇಳಿದರು.  ಈ ಮಾತಿಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪರಿಷತ್ ನಲ್ಲಿ ಗದ್ದಲ ಜೋರಾಗಿಯೇ ನಡೆಯಿತು. ಇದಕ್ಕೆ ಸಭಾಪತಿ ದೇಶದ್ರೋಹಿ ಸರ್ಕಾರ ಪದವನ್ನು ಕಡತದಿಂದ ತೆಗೆಸಿದರು.

ಯಾವ ಮಗನೂ ಹುಟ್ಟಿಲ್ಲ ನನ್ನ ಹೆದರಿಸೋದಕ್ಕೆ, 3 ವರ್ಷದಲ್ಲಿ ಇವರ ಆಟಗಳನ್ನೆಲ್ಲ ನೋಡಿದ್ದೇನೆ: ಸೋಮಶೇಖರ್

ಇವರು ದೇಶದ್ರೋಹಿ ಸರ್ಕಾರ ಅಂತಾ ಹೇಳಿದ್ದಾರೆ. ಇವರ ಪ್ರಧಾನಿ ಮೋದಿಗೆ ಧೈರ್ಯ ಇದ್ದರೆ, ಸರ್ಕಾರದ ಮೇಲೆ ಕ್ರಮ ತೆಗೆದುಕೊಳ್ಳಲು ಹೇಳಿ ಎಂದು ಹರಿಪ್ರಸಾದ್ ಹೇಳಿದರು.

ರವಿಕುಮಾರ್ ಮಾತನಾಡುವಾಗ ಅಬ್ದುಲ್ ಜಬ್ಬಾರ್ ಮದ್ಯಪ್ರವೇಶ ಮಾಡಿ" ರವಿಕುಮಾರ್ ಬಾಯಿ ಬಿಟ್ಟರೆ ಬೆಂಕಿ ಹಚ್ಚೋದೇ ಕೆಲಸ. ಅವನ ಬಾಯಿ ಬಂದ್ ಮಾಡಿಸಿ" ಎಂದರು.

ಇದಕ್ಕೆ ರೊಚ್ಚಿಗೆದ್ದ ರವಿಕುಮಾರ್ ಏಯ್ ಏಕವಚನ ದಲ್ಲಿ ಮಾತಾಡಿದ್ರೆ ಸರಿ ಇರಲ್ಲ ಎಂದು ತಮ್ಮ ಸ್ಥಳದಿಂದ ಎದ್ದು ಹೊಡೆಯುವಂತೆ ಮುಂದೆ ಬಂದರು. ಇವರಿಗೆ ಬಿಜೆಪಿಯ ಇತ ನಾಯಕರು ಸಾಥ್ ನೀಡಿದರು. ಕೈಕೈ ಮಿಲಾಯಿಸುವಂತ ಪರಿಸ್ಥಿತಿ ನಿರ್ಮಾಣವಾಯ್ತು. ಪರಿಸ್ಥಿತಿ ಕೈಮೀರಿ ಹೋಗುವುದನ್ನು ತಪ್ಪಿಸಲು ಸಭಾಪತಿ ಕೂಡಲೇ ಮಾರ್ಷಲ್ ಗಳನ್ನು ಒಳಗೆ ಕರೆಯಿಸಿ ಪರಿಷತ್ ಕಲಾಪ ಹತ್ತು ನಿಮಿಷಗಳ ಕಾಲ ಮುಂದೂಡಿದರು.  ಮಾರ್ಷಲ್ ಗಳು ರವಿಕುಮಾರ್ ಮತ್ತು ಬಿಜೆಪಿಯ ಇತರ ನಾಯಕರನ್ನು ಕಾಂಗ್ರೆಸ್ ನಾಯಕರು ಕುಳಿತ ಕಡೆಗೆ ಹೋಗದಂತೆ ತಡೆದರು.

 ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ; ನಿನ್ನೆ ಏನೇನಾಯ್ತು? ಹೇಗಾಯ್ತು?

ಬಳಿಕ ಮತ್ತೆ ಕಲಾಪ ಆರಂಭವಾಯ್ತು. ಸದನದಲ್ಲಿ ಬೇಕಾಬಿಟ್ಟಿ ಮಾತನಾಡಿದ್ರೆ ಬಹಳ ಬೇಜಾರ್ ಆಗುತ್ತೆ. ಇದೇ ರೀತಿ ನಡೆದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತೆ. ಸಭಾಪತಿ ಹೇಳಿದ್ರೂ ಕೇಳೋದಿಲ್ಲ ಎಂದರೆ, ಇದನ್ನ ನಾನು ಸಹಿಸೋದಿಲ್ಲ ಎಂದು ಸಭಾಪತಿ ಹೇಳಿದ್ರು. 

ದೇಶದ ಗೌರವದ ಪ್ರಶ್ನೆ ಬಂದಾಗಕ್ಷಮೆ ಕೇಳಲು ನನಗೆ ತೊಂದರೆ ಇಲ್ಲ. ಆದ್ರೆ ನಮ್ಮ‌ ಶತ್ರು ದೇಶ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದರೆ ಹೇಗೆ ಸಹಿಸಿಕೊಳ್ಳಲಿ. ಸದಸ್ಯರು ಏಕವಚನದಲ್ಲಿ ನನ್ನ ಬಗ್ಗೆ ಮಾತನಾಡಿದ್ದಾರೆ ಎಂದು ರವಿಕುಮಾರ್ ಹೇಳಿದರು.  

ರವಿ ಕುಮಾರ್ ಬಗ್ಗೆ ಹೇಳಿದ ಮಾತಿಗೆ ನಾನು ವಾಪಸ್ ತಗೆದುಕೊಳ್ಳುತ್ತೇನೆ ಎಂದು ಜಬ್ಬರ್‌ ತಮ್ಮ ಮಾತನ್ನು ಹಿಂತೆಗೆದುಕೊಂಡರು. 

ದೇಶ ದ್ರೋಹಿ ಸರ್ಕಾರ ಅಂದಿದ್ದನ್ನ ವಾಪಸ್ ತಗೆದುಕೊಳ್ಳಿ ಎಂದು ಸಭಾಪತಿ ರವಿಕುಮಾರ್ ಅವರಿಗೆ ಮನವಿ ಮಾಡಿದ್ರು. ನನ್ನ ಹೇಳಿಕೆ  ಹೇಗೆ ವಾಸಪ್ ತೆಗದುಕೊಳ್ಳಲಿ ಎಂದ ರವಿಕುಮಾರ್, ಇದನ್ನ ನಾನು ದೇಶಭಕ್ತ ಸರ್ಕಾರ ಎಂದು ಕರೆಯಬೇಕಾ ಎಂದು ವ್ಯಂಗ್ಯವಾಡಿದ್ರು.

ಇದಕ್ಕೂ ಮುನ್ನ ಪರಿಷತ್  ಕಲಾಪ ಆರಂಭ ಆಗ್ತಾ ಇದ್ದಂತೆ ಕೋಟಾ ಶ್ರೀನಿವಾಸ್ ಪೂಜಾರಿ ಅವರು ನಿನ್ನೆ ನಡೆದ ಘಟನೆ ಪ್ರಸ್ತಾಪ ಮಾಡಿದರು. ರಾಜ್ಯಸಭೆ ಚುನಾವಣೆ ನಡೆದ ಸಂಧರ್ಭದಲ್ಲಿ ಪಾಕ್ ಪರ  ಘೋಷಣೆ ಕೂಗಲಾಗಿದೆ ಈ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. 

ಇದಕ್ಕೆ ಎಚ್‌ ಕೆ ಪಾಟೀಲ್‌ ಚುನಾವಣೆ ಗೆದ್ದ ಸಂಧರ್ಭದಲ್ಲಿ ಅಭ್ಯರ್ಥಿ ಪರ ಘೋಷಣೆ ಕೂಗಿದಾಗ ಯಾರೋ ಈ ರೀತಿಯ ಘೋಷಣೆ ಕೂಗಿದ್ದಾರೆ ಎಂದು ಸುಳ್ಳು ಸೃಷ್ಟಿ ಮಾಡಲಾಗಿದೆ ಎಂದರು. ಇದನ್ನು ಒಪ್ಪದ ಬಿಜೆಪಿ ಸದಸ್ಯರು ಗದ್ದಲ ಶುರು ಮಾಡಿದರು. ಸುಳ್ಳು ಸೃಷ್ಟಿ ಮಾಡಿಲ್ಲ ವಿಡಿಯೋ ಸಾಕ್ಷಿ ಇದೆ ಎಂದು ರವಿಕುಮಾರ್ ಹೇಳಿದರು. ಮಾದ್ಯಮದವರು ಕೇಳಿದಾಗ ಅವರ ಮೇಲೂ ನಾಸಿರ್ ಹುಸೇನ್‌ ಕೂಗಾಡಿದ್ದಾರೆ ಎಂದ ಕೋಟಾ ಶ್ರೀನಿವಾಸ್ ಪೂಜಾರಿ ಈ ವೇಳೆ ಹೇಳಿದರು.

ನಾನು ವಿದ್ಯುನ್ಮಾನ ಮಾದ್ಯಮಗಳಲ್ಲಿ ಪ್ರಸಾರವಾದ ಸುದ್ದಿ ಗಮನಿಸಿದ್ದೇನೆ. ಆ ರೀತಿ ಘೋಷಣೆ ಕೂಗಿಲ್ಲ ಎಂದ ಎಚ್ ಕೆ ಪಾಟೀಲ್ ಗೆ  ನಿಮಗೆ ಸರಿಯಾಗಿ ಕೇಳಿಸಿಲ್ಲ ಎಂದು ರವಿಕುಮಾರ್ ಉತ್ತರ ನೀಡಿದರು. ಈ ವೇಳೆ ನಿನಗೆ ಮಾತ್ರ ಕಿವಿ ಸರಿಯಾಗಿ ಕೇಳುತ್ತಾ ಎಂದು ಯು ಬಿ ವೆಂಕಟೇಶ್ ಪ್ರತ್ಯುತ್ತರ ನೀಡಿದರು ಇದು ಮಾತಿನ ಚಕಮುಕಿಗೆ ಕಾರಣವಾಯ್ತು. ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ಪರಿಶೀಲನೆ ಮಾಡ್ತೀವಿ ಅಂತೀರಾ. ಇದು ದುರಂತ. ಇಡೀ ರಾಜ್ಯದ ಜನ ಕೇಳಿದ್ದಾರೆ. ನಿಮಗೆ ಕೇಳಿಲ್ಲ ಅಂತೀರಾ? ಎಂದು ಬಿಜೆಪಿ ಸದಸ್ಯರು ಗದ್ದಲ ಮಾಡಿದರು. ಮುಖ್ಯಮಂತ್ರಿ ಗಳು ರಾಜೀನಾಮೆ ಕೊಡಬೇಕು ಎಂದು ಕೋಟಾ ಶ್ರೀನಿವಾಸ್ ಪೂಜಾರಿ  ಆಗ್ರಹಿಸಿದರು.  ಪರಿಷತ್ ನಲ್ಲಿ ಉಭಯ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮುಕಿ ನಡೆಯಿತು. ಈ ವೇಳೆ ಸದನವನ್ನು ಹತೋಟಿ ಗೆ ತೆಗೆದುಕೊಳ್ಳಲು ಸಭಾಪತಿ ತೀವ್ರ ಪ್ರಯತ್ನ ಮಾಡಿ, ತಪ್ಪಿತಸ್ಥ ರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ ಎಂದು ಸರ್ಕಾರಕ್ಕೆ ಸೂಚನೆ ನೀಡಿದರು.  

Latest Videos
Follow Us:
Download App:
  • android
  • ios