ಬೆಂಗಳೂರು(ಜೂ.19): ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುನೀಲ್‌ ವಲ್ಯಾಪುರೆ ಒಟ್ಟು ಆಸ್ತಿ ಮೌಲ್ಯವು 20.02 ಕೋಟಿ. ವಲ್ಯಾಪುರೆ ಹೆಸರಲ್ಲಿ 2.50 ಲಕ್ಷ ರು. ನಗದು ಇದ್ದು, ಪತ್ನಿ ವಿಜಯಲಕ್ಷ್ಮಿ ಬಳಿ 2 ಲಕ್ಷ ರು. ನಗದು ಇದೆ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಘೋಷಣೆ ಮಾಡಲಾಗಿದೆ.

ಸುನೀಲ್‌ ಹೆಸರಲ್ಲಿ 18.03 ಕೋಟಿ ರು. ಆಸ್ತಿ ಇದ್ದು, ಪತ್ನಿ ಹೆಸರಲ್ಲಿ 1.98 ಕೋಟಿ ರು. ಮೌಲ್ಯದ ಆಸ್ತಿ ಇದೆ. ಸುನೀಲ್‌ ಹೆಸರಲ್ಲಿ 1.44 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 16.59 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ಹೆಸರಲ್ಲಿ 60.43 ಲಕ್ಷ ರು. ಮತ್ತು 1.38 ಕೋಟಿ ರು.ಮೌಲ್ಯದ ಸ್ಥಿರಾಸ್ತಿ ಇದೆ. ಸುನೀಲ್‌ ಅವರಿಗೆ 20.48 ಲಕ್ಷ ರು. ಸಾಲ ಇದೆ ಎಂದು ತೋರಿಸಲಾಗಿದೆ.

ಪರಿಷತ್‌ ಕದನ: ಆರ್‌. ಶಂಕರ್‌ ಸಂಪತ್ತು 301 ಕೋಟಿ ರೂ.

ಅಲ್ಲದೇ, ಸುನೀಲ್‌ ಬಳಿ 29.19 ಲಕ್ಷ ರು. ಮೌಲ್ಯದ 600 ಗ್ರಾಂ ಚಿನ್ನ, 48,860 ರು. ಮೌಲ್ಯದ 1 ಕೆಜಿ ಬೆಳ್ಳಿ ಇದೆ. ಪತ್ನಿ ವಿಜಯಲಕ್ಷ್ಮಿ ಬಳಿ 26.76 ಲಕ್ಷ ರು. ಮೌಲ್ಯದ 550 ಗ್ರಾಂ ಚಿನ್ನ, 48 ಸಾವಿರ ರು. ಮೌಲ್ಯದ 1 ಕೆಜಿ ಬೆಳ್ಳಿ ಇದೆ ಎಂದು ಆಸ್ತಿ ವಿವರದಲ್ಲಿ ಮಾಹಿತಿ ನೀಡಲಾಗಿದೆ.