Asianet Suvarna News Asianet Suvarna News

ಸ್ವಪಕ್ಷದ ನಾಯಕರ ಮಧ್ಯೆಯೇ ಫೈಟ್: ಇವತ್ತೇ ಉಸ್ತುವಾರಿ ಚೇಂಜ್ ಮಾಡಿ ಹೋಗ್ತಿರ್ತಿನಿ ಎಂದ ಸಚಿವ

* ಗದಗ ಕೆಡಿಪಿ ಮೀಟಿಂಗ್ ನಲ್ಲಿ ಶಾಸಕ ಬಂಡಿ V/S ಸಚಿವ ಬಿಸಿ ಪಾಟೀಲ್ 
* ಸ್ವಪಕ್ಷದ ನಾಯಕರ ಮಧ್ಯೆಯೇ ಟಾಕ್ ವಾರ್
* ಇವತ್ತೇ ಉಸ್ತುವಾರಿ ಚೇಂಜ್ ಮಾಡಿ ಹೋಗ್ತಿರ್ತಿನಿ ಎಂದ ಸಚಿವ

verbal fight between minister bc patil BJP mla kalasappa bandi In Gadag KDP Meeting rbj
Author
Bengaluru, First Published Apr 11, 2022, 5:10 PM IST | Last Updated Apr 11, 2022, 5:11 PM IST

ವರದಿ: ಗಿರೀಶ್ ಕುಮಾರ್

ಗದಗ, (ಏ.11): ಗದಗ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ, ಕೃಷಿ ಸಚಿವ ಬಿಸಿ ಪಾಟೀಲ್ ಹಾಗೂ ಶಾಸಕ ಕಳಕಪ್ಪ ಬಂಡಿ ಮಧ್ಯೆದ ವಾಕ್ ಯುದ್ಧಕ್ಕೆ ವೇದಿಕೆಯಾಗಿತ್ತು.

ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿಸಿ ಪಾಟೀಲರ ಅಧ್ಯಕ್ಷತೆಯಲ್ಲಿ ನಿಗದಿಯಂತೆ ಸಭೆ ನಡೀತಿತ್ತು. ಬೆಳಗ್ಗೆ 11 ಗಂಟೆಗೆ ಆರಂಭವಾಗಿದ್ದ ಸಭೆಯಲ್ಲಿ‌ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಲಾಗ್ತಿತ್ತು. ಆರಂಭದಲ್ಲಿ ಶಾಸಕ ಬಂಡಿ, ಸಚಿವ ಬಿಸಿ ಪಾಟೀಲ ಹಾಗೂ ಸಿಸಿ ಪಾಟೀಲರು ಅಧಿಕಾರಿಗಳ ಬೆಂಡೆತ್ತಿದರು. ಚುರುಕಿನಿಂದ ಕೆಲಸ ಮಾಡ್ಬೇಕು ಅಂತಾ ಅಧಿಕಾರಿಗಳಿಗೆ ತಾಕೀತು ಮಾಡ್ತಿದ್ರು. ಆದ್ರೆ ಅದ್ಯಾವಾಗ, ಸಚಿವ ಬಿಸಿ ಪಾಟೀಲ್ ಮರಳು ಅಕ್ರಮ ತಡೆಯುವಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಪೊಲೀಸ್ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಮುಂದಾದ್ರೋ ಆಗ್ಲೆ ಪರಿಸ್ಥಿತಿ ನಿಗಿನಿಗಿ ಕೆಂಡತಂತಾಗಿತ್ತು.. 

'ನನ್ನಿಂದಲೇ ಬಿಜೆಪಿ ಎನ್ನುವರನ್ನೇ ಹೈಕಮಾಂಡ್ ಮನೆಯಲ್ಲಿ ಕೂರಿಸಿದೆ, ವಿಜಯೇಂದ್ರ ಯಾವ ಗಿಡದ ತಪ್ಪಲು?'

ಸ್ವಪಕ್ಷದ ಸಚಿವರಿಗೆ ಮುಜುಗರ ಉಂಟುಮಾಡಿದ ಶಾಸಕ ಬಂಡಿ..!
ಮರಳು ಅಕ್ರಮ ತಡೆ ಬಗ್ಗೆ ಸಚಿವರಿಗೆ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡ್ತಿದ್ರು.. ಇದೇ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಬಂಡಿ, ಒಬ್ಬರಿಗೂ ಮರಳು ಸಿಗದಂತೆ ಮಾಡ್ಬಿಡಿ.. ಪ್ರ್ಯಾಕ್ಟಿಕಲ್ ಆಗಿ ಯೋಚನೆ ಮಾಡ್ಬೇಕು.. ಮನೆ ಕಟ್ಟಲು ಮರಳಿಲ್ಲ ಅಂತಾ ಜನ ಅಂತಾರೆ.. ನೀವ್ ಡಿಸ್ಟ್ರಿಕ್ಟ್ ಮಿನಿಷ್ಟರ್ ಆಗಿ ಮರಳು ಬಂದ್ ಮಾಡ್ಬಿಡಿ.. ಹಾಗೆಲ್ಲ ನಡೆಯಲ್ಲ ಅಂತಾ ಅಂತ ಶಾಸಕ ಬಂಡಿ ತಗಾದೆ ತೆಗೆದ್ರು.. ಮರಳು ಎಲ್ಲಿಂದ ತರ್ಬೇಕು ಅಮೇರಿಕಾ, ಇಂಗ್ಲೆಂಡ್ ನಿಂದ ತರಬೇಕಾ ಅಂತಾ ಪ್ರಶ್ನಿಸಿದ್ರು.. ಪ್ರತಿಯಾಗಿ ಸಚಿವ ಬಿಸಿ ಪಾಟೀಲ ಕಾನೂನು ಪ್ರಕಾರ ಮರಳುಗಾರಿಕೆ ನಡೀಲಿ.. ನಾನೇನು ಮಾಡಕ್ಕೆ ಬಂದಿದಿನ ಮಾಡ್ತೀನಿ.. ಹೀಗೆ ಮಾತ್ನಾಡೋದು ಸರಿ ಅಲ್ಲ ಅಂತಾ ಸಚಿವ ಬಿಸಿ ಪಾಟೀಲ ಹೇಳ್ತಿದ್ರು.

ಸಚಿವ ಸಿಸಿ ಪಾಟೀಲರ ಮನವಿಗೂ ಬಗ್ಗದ ಶಾಸಕ ಬಂಡಿ..!
ಸಚಿವ ಸಿಸಿ ಪಾಟೀಲ ಮಧ್ಯ ಪ್ರವೇಶಿಸಿ ಮುಂದಿನ ಚರ್ಚೆ ಮಾಡಿ ಅಂತಾ ಹೇಳಿಕೊಂಡ್ರು.. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಶಾಸಕ ಕಳಕಪ್ಪ ಬಂಡಿ, ವಾಗ್ವಾದ ಮುಂದು ವರೆಸಿದ್ರು.. ನೀವು ಹೇಳಿದ್ದನ್ನೇ ಕೇಳಿ ಕೂರಕ್ಕೆ ಆಗಲ್ಲ ಅಂತಾ ವಾದ ಶುರುಮಾಡಿದ ಬಂಡಿ, ಜನರಿಗೆ ಉತ್ತರ ಕೊಡಬೇಕು ಎಂದ್ರು..

ತುಸು ಗರಂಆಗಿದ್ದ ಸಚಿವ ಬಿಸಿ ಪಾಟೀಲ, ನಿಮಗೆ ಆಗಲ್ಲ ಅಂದ್ರ ಹೇಳಿ ಮೇಲೆ (ಸಿಎಂಗೆ) ಹೇಳಿ.. ನಾನೇನು ಇಲ್ಲೇ ಸಚಿವ ಆಗ್ಬೇಕು ಅಂತಾ ಕೇಳಿಕೊಂಡು ಬಂದಿಲ್ಲ.. ಇಲ್ಲಷ್ಟೇ ಅಲ್ಲ.. ಕಾಯ್ದೆ ಕಾನೂನು ಎಲ್ಲ ಕಡೆ ಇದೆ.‌. ಮರಳು ಸಾಗಾಟಕ್ಕೆ ಪರ್ಮಿಟ್ ಕೊಡ್ತಾರೆ.. ನ್ಯಾಯವಾಗಿ ಮರಳು ಸಾಗಿಸಲಿ‌ ಅಂತಾ ಹೇಳೋದಕ್ಕೆ ಮುಂದಾದ್ರು.. ಆದ್ರೆ, ಸುಮ್ಮನಿರದ ಶಾಸಕ ಬಂಡಿ ಎಲ್ಲರನ್ನ ದೊಡ್ಡ ಜೈಲಿನಲ್ಲಿ ಹಾಕಿ.. ಹೆಸರು ಬರುತ್ತೆ ನಿಮಗೆ ಅಂತಾ ಅಸಮಾಧಾನ ಹೊರ ಹಾಕಿದ್ರು..

ಮೀಟಿಂಗ್ ನಲ್ಲಿ ಮಾತಾಡೋದು ಸರಿಯಲ್ಲ..!
ಹೀಗೆ ಮೀಟಿಂಗ್ ನಲ್ಲಿ ಮಾತಾಡೋದು ಸರಿಯಲ್ಲ ಅಂತಾ ಬಿಸಿ ಪಾಟೀಲ ಹೇಳ್ತಿದ್ರೆ, ನೀವು ಡೈರೆಕ್ಷನ್ ಕೊಡೋದು ಅಧಿಕಾರಿಗಳು ಮಾಡ್ತಾರೆ ಅಂತಾ ಶಾಸಕ ಜಗಳಕ್ಕೆ ನಿಂತ್ರು. ಎಲ್ಲರನ್ನ ಜೈಲಿಗೆ ಹಾಕಿಸೋದಕ್ಕಾ ನಿಮ್ಮನ್ನ ಉಸ್ತುವಾರಿ ಮಾಡಿದ್ದು. ವಾಕ್ ಯುದ್ಧ ಮುಂದುವರೆಸಿದ ಬಂಡಿ ನಿಮ್ಮನ್ನ ಇಲ್ಲಿ ಎಲ್ಲರನ್ನ ಜೈಲಿಗೆ ಹಾಕೋದಕ್ಕೆ ಕಳಸಿದ್ದಾ ಅಂತಾ ಪ್ರಶ್ನಿಸಿದ್ರು.. ಮೈನಿಂಗ್ ವಿಷಯ ಒಂದೇ ಮೀಟಿಂಗ್ ಮಾಡೋದ್ಯಾಕೆ ಅಂತಾ ಶಾಸಕ ಬಂಡಿ ಅಂದ್ರು..  ನಿಮಗೆ ಕಷ್ಟ ಆದ್ರೆ ಮೇಲೆ ಹೇಳಿ.. ನಾನೇನು ಇಲ್ಲಿಗೆ ಬಂದು ಕೆಲಸ ಮಾಡೋ ಆಸೆ ಇಲ್ಲ.. ಇವತ್ತೇ ಚೇಂಜ್ ಮಾಡ್ಸಿ ಅಂತಾ ಪಾಟೀಲ ಗರಂಆಗಿದ್ರು.. ಇಷ್ಟೆಲ್ಲ ಅಧಿಕಾರಿಗಳ ಎದ್ರು ಮಾತಾಡೋದು ಸರಿಯಲ್ಲ ಅಂತಾ ಗುನುಗಿದ್ರು..

Latest Videos
Follow Us:
Download App:
  • android
  • ios