ವೀಣಾ ಕಾಶಪ್ಪನವರಿಗೆ ರಾಜಕೀಯವಾಗಿ ಒಳ್ಳೆ ಭವಿಷ್ಯವಿದೆ: ಸಿಎಂ ಸಿದ್ದರಾಮಯ್ಯ

ಗ್ರಾಮೀಣ ಮಕ್ಕಳೂ ಸಹ ಐಎಎಸ್, ಐಪಿಎಸ್ ನಂತಹ ಪರೀಕ್ಷೆಯಲ್ಲಿ ಪಾಸಾಗಲು ವೀಣಾ ಕಾಶಪ್ಪನವರ ಫೌಂಡೇಶನ್ ನೆರವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು. 

Veena Kashappanavar has a bright future politically Says CM Siddaramaiah gvd

ಬಾಗಲಕೋಟೆ (ನ.25): ಎಲ್ಲರಲ್ಲಿಯೂ ಪ್ರತಿಭೆ ಇದ್ದು, ಅವಕಾಶ ಮತ್ತು ಪ್ರೋತ್ಸಾಹ ದೊರೆತಲ್ಲಿ ಪ್ರತಿಭಾವಂತರಾಗಿ ಹೊರಹೊಮ್ಮಲು ಸಾಧ್ಯವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನವನಗರದ ಅಂಜುಮನ್ ಸಂಸ್ಥೆಯ ಆವರಣದಲ್ಲಿ ವಿವಿಕೆ ಫೌಂಡೇಶನ್ ವತಿಯಿಂದ 200 ವಿದ್ಯಾರ್ಥಿಗಳಿಗೆ ಕೆ.ಎ.ಎಸ್ ಹಾಗೂ ಪಿ.ಎಸ್.ಐ ಪರೀಕ್ಷೆಯ ಉಚಿತ ತರಬೇತಿ ಮತ್ತು ಅಕಾಡೆಮಿ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೂ ಉನ್ನತ ಹುದ್ದೆ ದೊರೆಯಲಿ ಎಂಬ ಸದುದ್ದೇಶದಿಂದ ವಿವಿಕೆ ಫೌಂಡೇಶನ್ ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಬಡವರು ಸಹ ಇಂತಹ ಪರೀಕ್ಷೆ ಪಾಸು ಮಾಡಬೇಕು. ಆ ಮೂಲಕ ಶಕ್ತಿ ತುಂಬಿ ಆಡಳಿತ ಯಂತ್ರದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಉತ್ತಮ ಕೆಲಸವೆಂದರು.

ಕಾಗಿನೆಲೆ ಗುರುಪೀಠದ ನಿರಂಜನಾನಂಣದಪುರಿ ಶ್ರೀ, ಯಲ್ಲಾಲಿಮಗ ಶ್ರೀಮಠದ ಡಾ.ಮುರುಘರಾಜೇಂದ್ರ ಶ್ರೀ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮ ಶ್ರೀ, ಕೂಡಲಸಂಗ ಬಸವಜಯ ಮೃತ್ಯುಂಜಯ ಶ್ರೀ, ಡಾ.ಜಯಬಸವ ಶ್ರೀ, ಗುರುಮಹಾಂತ ಶ್ರೀ, ಬಸವಮೂತರ್ಿ ಮಾದಾರ ಚನ್ನಯ್ಯ ಶ್ರೀ, ಭಗೀರಥಾನಂದಪುರಿ ಶ್ರೀ, ಹಜರತ ಸೈಯದ ಸಾಹೇಬ, ಸಿದ್ದಲಿಂಗ ಶಿವಾಚಾರ್ಯ ಸೇರಿದಂತೆ ಇತರೆ ಶ್ರೀಗಳು ಸಾನಿಧ್ಯ ವಹಿಸಿದ್ದರು. ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ, ಶಾಸಕರಾದ ಎಚ್.ವಾಯ್.ಮೇಟಿ, ಜೆ.ಟಿ.ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ, ವಿವಿಕೆ ಪೌಂಡೇಶನ ಸಂಸ್ಥಾಪಕಿ ವೀಣಾ ಕಾಶಪ್ಪನವರ ಇದ್ದರು.

ರಾಜ್ಯಾದ್ಯಾಂತ ಕಂದಾಯ ಇಲಾಖೆ ದಾಖಲೆ ಡಿಜಿಟಲೀಕರಣ: ಬಳ್ಳಾರಿಗೆ ಮೊದಲ ಸ್ಥಾನ!

ವೀಣಾ ಕಾಶಪ್ಪನವರಿಗೆ ರಾಜಕೀಯವಾಗಿ ಒಳ್ಳೆ ಭವಿಷ್ಯವಿದೆ: ಗ್ರಾಮೀಣ ಮಕ್ಕಳೂ ಸಹ ಐಎಎಸ್, ಐಪಿಎಸ್ ನಂತಹ ಪರೀಕ್ಷೆಯಲ್ಲಿ ಪಾಸಾಗಲು ವೀಣಾ ಕಾಶಪ್ಪನವರ ಫೌಂಡೇಶನ್ ನೆರವಾಗಲಿದೆ. ಈಗ 200 ಅಭ್ಯರ್ಥಿಗಳಿಂದ ಆರಂಭವಾಗಿ 1500 ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಫೌಂಡೇಷನ್ ನೆರಳಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ, ಸಾವಿರಾರು ವಿದ್ಯಾರ್ಥಿಗಳ ಕನಸನ್ನು, ಅವಕಾಶ ವಂಚಿತ ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ಮೂಲಕ ಸಮಾಜದ ಋಣ ತೀರಿಸುವ ಕೆಲಸದಲ್ಲಿ ಕಾಶಪ್ಪನವರ ದಂಪತಿ ತೊಡಗಿದ್ದಾರೆ. ಜಿಲ್ಲಾ ಪಂಚಾಯತಿ ಅಧ್ಯಕ್ಷೆಯಾಗಿ ಜಿಲ್ಲೆ ನೆನಪಿಡುವ ಕೆಲಸಗಳನ್ನು ವೀಣಾ ಮಾಡಿದ್ದಾರೆ. ಇವರ ಸಮಾಜಮುಖಿ ಕೆಲಸಗಳು ಈ ಅಕಾಡೆಮಿ ಮೂಲಕ ಇನ್ನಷ್ಟು ವಿಸ್ತಾರವಾಗುತ್ತಿದೆ ವೀಣಾ ಕಾಶಪ್ಪನವರಿಗೆ ರಾಜಕೀಯವಾಗಿ ಒಳ್ಳೆಯ ಭವಿಷ್ಯ ಇದೆ. ಇವರಿಗೆ ನಿಮ್ಮ ಆಶೀರ್ವಾದ ಎಂದರು.

Latest Videos
Follow Us:
Download App:
  • android
  • ios