ಯಾವುದೇ ಕಾರಣಕ್ಕೂ Rajinikanth ಕರ್ನಾಟಕಕ್ಕೆ ಬರಬಾರದು: ವಾಟಾಳ್ ನಾಗರಾಜ್
ಕಾವೇರಿ ನದಿ ನೀರಿನ ವಿಷಯದಲ್ಲಿ ಮೌನ ವಹಿಸಿರುವ ನಟ ರಜನಿಕಾಂತ್ ಬಗ್ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ. ಯಾವುದೇ ಕಾರಣಕ್ಕೂ ರಜನಿಕಾಂತ್ ಕರ್ನಾಟಕಕ್ಕೆ ಬರಬಾರದು. ಅವರ ಚಿತ್ರಗಳನ್ನು ಬಿಡುಗಡೆ ಮಾಡಬಾರದು ಎಂದರು.
ಬೆಂಗಳೂರು (ಸೆ.29): ಕಾವೇರಿ ನದಿ ನೀರಿನ ವಿಷಯದಲ್ಲಿ ಮೌನ ವಹಿಸಿರುವ ನಟ ರಜನಿಕಾಂತ್ ಬಗ್ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ. ಯಾವುದೇ ಕಾರಣಕ್ಕೂ ರಜನಿಕಾಂತ್ ಕರ್ನಾಟಕಕ್ಕೆ ಬರಬಾರದು. ಅವರ ಚಿತ್ರಗಳನ್ನು ಬಿಡುಗಡೆ ಮಾಡಬಾರದು ಎಂದ ಅವರು ರಜನಿಕಾಂತ್ ಕನ್ನಡದವರಾಗಿ ಕನ್ನಡಿಗರ ಪರವಾಗಿ ಹೋರಾಟ ಮಾಡಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು. ಕಾವೇರಿ ಹೋರಾಟ ಅಥವಾ ಕನ್ನಡ ಪರ ಹೋರಾಟಗಳು ನಡೆದಾಗೊಮ್ಮೆ ರಜನಿಕಾಂತ್ ಹೆಸರು ಪ್ರಸ್ತಾಪವಾಗುತ್ತದೆ.
ಈ ಹಿಂದೆ ರಜನಿಕಾಂತ್ ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ರಿಲೀಸ್ ಆಗಬಾರದು ಎಂದು ದೊಡ್ಡ ಮಟ್ಟದಲ್ಲೇ ಹೋರಾಟ ನಡೆದಿತ್ತು. ಸಿನಿಮಾಗಳ ಪ್ರದರ್ಶನವನ್ನೂ ತಡೆದಿದ್ದರು. ಇದೀಗ ಮತ್ತೆ ಅಂಥದ್ದೊಂದು ಚರ್ಚೆ ಮುನ್ನೆಲೆಗೆ ಬಂದಿದೆ. ಅದರಲ್ಲೂ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ರಾಜ್ಯದಲ್ಲಿ ಐವತ್ತು ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದೆ. ಹೀಗಾಗಿ ಮತ್ತೆ ರಜನಿ ವಿರುದ್ಧ ಗುಡುಗುವಂತಾಗಿದೆ.
ಬಂದ್ ಹೆಸರಲ್ಲಿ ಜನರಿಗೆ ತೊಂದರೆ ಮಾಡಿದರೆ ಕ್ರಮ: ಡಿ.ಕೆ.ಶಿವಕುಮಾರ್
ಶುಕ್ರವಾರವಾದರೂ ಹೊಸ ಸಿನಿಮಾ ಬಿಡುಗಡೆಯಿಲ್ಲ, ಸಿನಿಮಾ ಪ್ರದರ್ಶನವೂ ಇರೊಲ್ಲ: ಕಳೆದ ಹದಿನೈದು ದಿನಗಳಿಂದಲೂ ಕರ್ನಾಟಕ ರಾಜ್ಯಾದ್ಯಂತ ಕಾವೇರಿ ನೀರಿಗಾಗಿ ತೀವ್ರ ಹೋರಾಟ ನಡೆಯುತ್ತಿದ್ದು, ಸೆ.29ರಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಈ ವೇಳೆ ಕಾವೇರಿ ಬಂದ್‌ಗೆ ಬೆಂಬಲ ನೀಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಶುಕ್ರವಾರದಂದು ಯಾವುದೇ ಹೊಸ ಸಿನಿಮಾ ಬಿಡುಗಡೆ ಮಾಡೊಲ್ಲ, ಯಾವುದೇ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮಾಡೊಲ್ಲ, ಸಿನಿಮಾ ಶೂಟಿಂಗ್ ಕೂಡ ಮಾಡುವುದಿಲ್ಲ ಎಂದು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿವೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಿಗಾಗಿ ಮಾಡುತ್ತಿರುವ ಕರ್ನಾಟಕ ಬಂದ್‌ನಲ್ಲಿ ಚಿತ್ರರಂಗದ ಬೆಂಬಲ ಕೇಳಿದ್ದು ಇದೇ ಮೊದಲು. ಇದರಿಂದಾಗಿ ಅವರು ಬಂದ್ ಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಚಿತ್ರೋಧ್ಯಮವನ್ನೇ ಬಂದ್ ಮಾಡುತ್ತೇವೆ ಅಂತ ಹೇಳಿದ್ದಾರೆ. ಯಾವುದೇ ಶೂಟಿಂಗ್, ಸಿನಿಮಾ ಪ್ರದರ್ಶನ ಇಲ್ಲ ಅಂತ ಹೇಳಿದ್ದಾರೆ. ಟೌನ್ ಹಾಲ್ ನಿಂದ ಬೃಹತ್ ಮೆರವಣಿಗೆ ಆಗುತ್ತದೆ. ಫಿಲ್ಮ್ ಚೇಂಬರ್ ನಿಂದಲೇ ಮೆರವಣಿಗೆ ಬನ್ನಿ ಎಂದು ಹೇಳಲಾಗಿದೆ ಎಂದು ತಿಳಿಸಿದರು.
ದೇವೇಗೌಡರ ಬಗ್ಗೆ ಹೇಳಿಕೆ: ರಾಜಣ್ಣ, ಬಸವರಾಜು ವಿರುದ್ಧ ಎಚ್‌ಡಿಕೆ ವಾಗ್ದಾಳಿ
ಈ ಕುರಿತು ಮಾಧ್ಯಮಗಳೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಮ್. ಸುರೇಶ್ ಮಾತನಾಡಿ, ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಎಲ್ಲಾ ಅಂಗ ಸಂಸ್ಥೆ ಗಳು ಬಂಸ್‌ಗೆ ಒಪ್ಪಿಗೆ ಕೊಟ್ಟಿವೆ. ನಮ್ಮ ನಾಡಿಗಾಗಿ ನಾವು ಹೋರಾಡುತ್ತೇವೆ. ನಾಳೆ ನಡೆಯುವ ರ್ಯಾಲಿಗೆ ಎಲ್ಲರೂ ಬರಬೇಕು. ಚಿತ್ರರಂಗದ ಘನತೆ ಗೌರವ ಕಾಪಾಡೋ ಕೆಲಸ ಮಾಡೋಣ. ನಾವೆಲ್ಲಾ ಒಂದಾಗಿ ಫಿಲ್ಮ್ ಚೇಂಬರ್ ನಿಂದ ಹೋಗೋಣ. ಈ ಬಂದ್ ಅನ್ನು ಯಶಸ್ವಿ ಮಾಡಲಿದ್ದೇವೆ. ಕಾವೇರಿಗಾಗಿ ಕರ್ನಾಟಕ ಬಂದ್‌ಗೆ ಚಿತ್ರರಂಗ ಸಂಪೂರ್ಣ ಬೆಂಬಲ ಇದೆ. ಎಲ್ಲ ಕಲಾವಿದರು ಕರ್ನಾಟಕ ಬಂದ್‌ನಲ್ಲಿ ಭಾಗವಹಿಸುತ್ತಾರೆ. ಬೆಳಗ್ಗೆ 9 ಗಂಟೆಗೆ ಫಿಲ್ಮ್ ಚೇಂಬರ್ ನಿಂದ ರ್ಯಾಲಿ ಹೊರಡಲಿದೆ. ಚಿತ್ರರಂಗದ ಎಲ್ಲಾ ಅಂಗ ಸಂಸ್ಥೆಗಳು ರ್ಯಾಲಿ ಮೂಲಕ ಭಾಗಿಯಾಗುತ್ತಾರೆ ಎಂದು ತಿಳಿಸಿದರು.