ವಾಲ್ಮೀಕಿಗೆ ಗೌರವ ಸಿಗಬೇಕು ಅಂದ್ರೆ ಬಿಜೆಪಿ ಗೆಲ್ಲಿಸಿ: ನಳಿನ್‌ ಕುಮಾರ್ ಕಟೀಲ್

ಮಹರ್ಷಿ ವಾಲ್ಮೀಕಿ ಅವರಿಗೆ ದೇಶದಲ್ಲಿ ಗೌರವ ಸಿಗಬೇಕಾದರೆ ಪರಿಶಿಷ್ಟಪಂಗಡದ ಜನರು ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಕರೆ ಮನವಿ ಮಾಡಿದರು.

Valmiki should get respect and win BJP Says Nalin Kumar Kateel gvd

ಬ್ಯಾಡಗಿ (ಮಾ.12): ಮಹರ್ಷಿ ವಾಲ್ಮೀಕಿ ಅವರಿಗೆ ದೇಶದಲ್ಲಿ ಗೌರವ ಸಿಗಬೇಕಾದರೆ ಪರಿಶಿಷ್ಟಪಂಗಡದ ಜನರು ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಕರೆ ಮನವಿ ಮಾಡಿದರು. ಶನಿವಾರ ಪಟ್ಟಣದ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಜಿಲ್ಲಾ ಘಟಕದ ಎಸ್ಟಿಮೋರ್ಚಾ ಆಶ್ರಯದಲ್ಲಿ ಆಯೋಜಿಸಿದ್ದ ಪರಿಶಿಷ್ಟಪಂಗಡದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಮೊದಲ ಬಾರಿಗೆ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮ ಘೋಷಿಸಿದ್ದು ಬಿ.ಎಸ್‌. ಯಡಿಯೂರಪ್ಪನವರು ಎಂಬುದನ್ನು ಮರೆಯಬಾರದು. 

ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮ ಅವರನ್ನು ರಾಷ್ಟ್ರಪತಿಯಾಗಿ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದರು. ಹಿಂದುಳಿದ ಪರಿಶಿಷ್ಟಪಂಗಡಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಿ.ಎಸ್‌. ಯಡಿಯೂರಪ್ಪ ರಾಜ್ಯದೆಲ್ಲೆಡೆ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಿದರು. ಜನಾಂಗದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಅವರ ಸುಳ್ಳು ಭಾಷಣಗಳಿಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ ಎಂದರು.

ರಾಹುಲ್‌ ಗಾಂಧಿ ಬಗ್ಗೆ ಟೀಕೆ: ನಳಿನ್‌ ಕಟೀಲ್‌ಗೆ ಕಾಂಗ್ರೆಸ್‌ ನೋಟಿಸ್‌

ಕಾಂಗ್ರೆಸ್ಸಿಗೆ ಕಾಣದ ಎಸ್ಟಿ ಸಮುದಾಯ: ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕಳೆದ ಕಳೆದ 59 ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಪರಿಶಿಷ್ಟ ಜನರಿಗಾಗಿ ಒಂದೇ ಒಂದು ರಸ್ತೆ ನಿರ್ಮಿಸಿಲ್ಲ. ಕಾಂಗ್ರೆಸ್‌ಗೆ ಪರಿಶಿಷ್ಟ ಪಂಗಡಕ್ಕೆ ಕಾಣಲಿಲ್ಲವೇಕೆ? ಎಂದು ಪ್ರಶ್ನಿಸಿದ ಅವರು, ಪರಿಶಿಷ್ಟಪಂಗಡದ ಕಾಲನಿಗಳಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣಕ್ಕೆ ಅಸ್ತು ಸಿಗಬೇಕಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾಯಿತು ಎಂದರು. ಬಿಜೆಪಿ ವಿಶ್ವದಲ್ಲೇ ಅತಿ ಹೆಚ್ಚು ಕಾರ‍್ಯಕರ್ತರನ್ನು ಹೊಂದಿರುವ ಬಹುದೊಡ್ಡ ಪಕ್ಷವಾಗಿದ್ದು, ಸಂಘಟನೆಯೊಂದಿಗೆ ದೇಶವನ್ನು ಸುಭದ್ರವಾಗಿರಿಸುವ ನಿಟ್ಟಿನಲ್ಲಿ ಕಾರ‍್ಯ ಕ್ರಮ ನೀಡಿದೆ. ಕೊರೋನಾ ಸಂಕಷ್ಟಲೆಕ್ಕಿಸದೆ ಕೃಷಿ ಸಮ್ಮಾನ ಯೋಜನೆಯಡಿ 10 ಸಾವಿರ ಪ್ರತಿ ರೈತರ ಖಾತೆಗೆ ಬಂದಿದೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಕೇಳಿದ್ದೆ. 429 ಕೋಟಿ ಅನುದಾನ ನೀಡಿದ್ದಲ್ಲದೇ ನಮ್ಮ ಅವಧಿಯಲ್ಲೇ ಭೂಮಿಪೂಜೆ ಮಾಡಿ ಉದ್ಘಾಟಿಸಿದ್ದೇವೆ ಎಂದರು. ಎಸ್ಟಿ ಸಮಾಜದ ಮುಖಂಡ ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ಪರಿಶಿಷ್ಟಪಂಗಡದ ಸಮುದಾಯದ ಜನರು ಕೊಟ್ಟಮಾತಿಗೆ ಗಟ್ಟಿಯಾಗಿ ನಿಲ್ಲುವಂತಹವರು. ಎಸ್ಸಿ ಮತ್ತು ಎಸ್ಟಿಸಮಾಜದ ಪ್ರತಿ ಕುಟುಂಬಕ್ಕೆ 75 ಯೂನಿಟ್‌ ಉಚಿತ ವಿದ್ಯುತ್‌ ನೀಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಇಂತಹ ಹಲವು ಯೋಜನೆಗಳನ್ನು ನಮ್ಮ ಸಮಾಜಕ್ಕೆ ತಲುಪಿವೆ. ಬರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲಿದ್ದೇವೆ ಎಂದರು.

ಅಥಣಿ ಬಿಡಲ್ಲ: ರಮೇಶ್‌ ಜಾರಕಿಹೊಳಿಗೆ ಲಕ್ಷ್ಮಣ ಸವದಿ ಪುತ್ರ ತಿರುಗೇಟು

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಶಾಸಕ ಅರುಣಕುಮಾರ ಪೂಜಾರ, ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ಶಿವರಾಜ್‌ ಸಜ್ಜನ, ಮುಖಂಡರಾದ ಮಹೇಶ ಟೆಂಗಿನಕಾಯಿ, ರಾಜೇಂದ್ರ ಹಾವೇರಣ್ಣನವರ, ಎನ್‌.ಎಂ. ಈಟೇರ, ಸಿ.ಆರ್‌. ಬಳ್ಳಾರಿ, ಎಂ.ಎಸ್‌. ಪಾಟೀಲ, ಭಾರತಿ ಜಂಬಗಿ, ಸುರೇಶ ಅಸಾದಿ, ವೀರೇಂದ್ರ ಶೆಟ್ಟರ, ಎಸ್ಟಿ ಘಟಕದ ಮುಖಂಡರಾದ ಶಿವಾನಂದ ಯಮನಕ್ಕನವರ, ಮಾರುತಿ ಫಾಸಿ, ಪುರಸಭೆ ಅಧ್ಯಕ್ಷೆ ಫಕ್ಕೀರಮ್ಮ ಛಲವಾದಿ, ಉಪಾಧ್ಯಕ್ಷೆ ಮಲ್ಲಮ್ಮ ಪಾಟೀಲ, ಬಿಜೆಪಿ ತಾಲೂಕಾಧ್ಯಕ್ಷ ಹಾಲೇಶ್‌ ಜಾಧವ ಸೇರಿದಂತೆ ಇನ್ನಿತರರಿದ್ದರು.

Latest Videos
Follow Us:
Download App:
  • android
  • ios