Asianet Suvarna News Asianet Suvarna News

2 ಕಡೆ ಸೋತು ಸೋಮಣ್ಣ ಮಾನಸಿಕವಾಗಿ ನೊಂದಿದ್ದಾರೆ: ಸದಾನಂದಗೌಡ

ಸೋಮಣ್ಣ ತಮ್ಮ ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಹೀಗಾಗಿ ಅಸಮಾಧಾನದ ಮಾತುಗಳನ್ನಾಡಿದ್ದಾರೆ. ಅವರ ಮಾತನ್ನು ಒಪ್ಪುತ್ತೇನೆ. ಪಕ್ಷಕ್ಕಾಗಿ ದುಡಿದಿದ್ದಾರೆ. ಸೋಲಾಗಿರುವುದಕ್ಕೆ ಅವರಿಗೆ ನೋವಾಗಿದೆ. ಒಳ್ಳೆಯ ರಾಜಕಾರಣಿಯಾಗಿ ಕೆಲಸ ನಿರ್ವಹಿಸಿದರು. ಸ್ವಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗಿ ಸೋಲನುಭವಿಸಿದ್ದಕ್ಕೆ ನೋವು ತಂದಿದೆ: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ 

V Somanna Suffering Mentally after losing 2 Sides Says DV Sadananda Gowda grg
Author
First Published Nov 26, 2023, 6:45 AM IST

ಬೆಂಗಳೂರು(ನ.26):  ವಿಧಾನಸಭೆ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧಿಸಿ ಸೋಲನುಭವಿಸಿದ್ದಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಮಾನಸಿಕವಾಗಿ ನೊಂದಿರುವ ಹಿನ್ನೆಲೆಯಲ್ಲಿ ಬೇಸರದ ಮಾತುಗಳನ್ನಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೋಮಣ್ಣ ತಮ್ಮ ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಹೀಗಾಗಿ ಅಸಮಾಧಾನದ ಮಾತುಗಳನ್ನಾಡಿದ್ದಾರೆ. ಅವರ ಮಾತನ್ನು ಒಪ್ಪುತ್ತೇನೆ. ಪಕ್ಷಕ್ಕಾಗಿ ದುಡಿದಿದ್ದಾರೆ. ಸೋಲಾಗಿರುವುದಕ್ಕೆ ಅವರಿಗೆ ನೋವಾಗಿದೆ. ಒಳ್ಳೆಯ ರಾಜಕಾರಣಿಯಾಗಿ ಕೆಲಸ ನಿರ್ವಹಿಸಿದರು. ಸ್ವಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗಿ ಸೋಲನುಭವಿಸಿದ್ದಕ್ಕೆ ನೋವು ತಂದಿದೆ ಎಂದರು.

2 ಕಡೆ ಸ್ಪರ್ಧೆ ಮಾಡಿ ಅಂತ ಪ್ರಧಾನಿ, ಶಾ ಜೀವ ಹಿಂಡುತ್ತಿದ್ದರು: ಸಿದ್ದಗಂಗಾ ಶ್ರೀ ಮುಂದೆ ಸೋಮಣ್ಣ ಅಳಲು

ಗೋವಿಂದರಾಜನಗರದಲ್ಲಿ ಸ್ಪರ್ಧಿಸಿದ್ದರೆ ಖಂಡಿತವಾಗಿಯೂ ಭಾರಿ ಅಂತರದಲ್ಲಿ ಗೆಲುವು ಸಾಧಿಸುತ್ತಿದ್ದರು. ಪಕ್ಷವು ತೀರ್ಮಾನಿಸಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ನೀಡಿತ್ತು. ಸೋಮಣ್ಣ ಅವರನ್ನು ಕೇಳಿಯೇ ಕಣಕ್ಕಿಳಿಸಲಾಗಿತ್ತು ಎಂದು ಹೇಳಿದರು.

Follow Us:
Download App:
  • android
  • ios