Asianet Suvarna News Asianet Suvarna News

ಸಿಎಂ ವಿರುದ್ಧ ಅನಂತ್‌ ಮತ್ತೆ ಏಕವಚನದಲ್ಲಿ ವಾಗ್ದಾಳಿ

ದೇಶ ಮತ್ತು ಧರ್ಮಕ್ಕಾಗಿ ಗಟ್ಟಿಯಾಗಿ ಮಾತನಾಡಬೇಕು. ನನ್ನ ಮೇಲೆ 80-90 ಕೇಸ್‌ ಇದ್ದವು. ಎಲ್ಲ ಕೇಸ್‌ಗಳು ಖುಲಾಸೆಯಾಗಿದ್ದವು. ನನಗೂ ಸಾಕಾಗಿ ಬೇಡ ಎಂದು ಬಿಟ್ಟಿದ್ದೆ. ನನ್ನ ಆರೋಗ್ಯ ಕೂಡ ಸರಿ ಇರಲಿಲ್ಲ. ಚುನಾವಣೆ ಬೇಡವೆಂದು ಬಿಟ್ಟಿದ್ದೆ. ಕೆಲ ಜನ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದರು. ಈಗ, ಮೊನ್ನೆ ಸಿದ್ದರಾಮಯ್ಯ ಮತ್ತೆ ಮೂರು ಕೇಸ್‌ ಹಾಕಿಸಿದರು. ಮೊದಲ ಕೇಸ್‌ ಹಾಕುತ್ತಿದ್ದಂತೆ ನನ್ನ ಆರೋಗ್ಯ ಸರಿಹೋಯಿತು ಎಂದ ಸಂಸದ ಅನಂತಕುಮಾರ ಹೆಗಡೆ

Uttara Kannada BJP MP Anantkumar Hegde Slams CM Siddaramaiah grg
Author
First Published Mar 8, 2024, 5:16 AM IST

ಬೆಳಗಾವಿ(ಮಾ.08):  ಧರ್ಮ, ದೇಶದ ಬಗ್ಗೆ ಮಾತನಾಡಿದ್ದಕ್ಕೆ ನನ್ನ ಮೇಲೆ ಕೇಸ್‌ ಹಾಕಿದ್ದಾರೆ. ಕೇಸ್‌ ಹಾಕಲಿ, ನನಗೆ ಅದರ ಬಗ್ಗೆ ಏನೂ ಬೇಸರ ಇಲ್ಲ. ನಾನು ಯಾವುದಕ್ಕೂ ಅಂಜುವುದಿಲ್ಲ ಎಂದು ಕೆನರಾ ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ದೇಶ ಮತ್ತು ಧರ್ಮಕ್ಕಾಗಿ ಗಟ್ಟಿಯಾಗಿ ಮಾತನಾಡಬೇಕು. ನನ್ನ ಮೇಲೆ 80-90 ಕೇಸ್‌ ಇದ್ದವು. ಎಲ್ಲ ಕೇಸ್‌ಗಳು ಖುಲಾಸೆಯಾಗಿದ್ದವು. ನನಗೂ ಸಾಕಾಗಿ ಬೇಡ ಎಂದು ಬಿಟ್ಟಿದ್ದೆ. ನನ್ನ ಆರೋಗ್ಯ ಕೂಡ ಸರಿ ಇರಲಿಲ್ಲ. ಚುನಾವಣೆ ಬೇಡವೆಂದು ಬಿಟ್ಟಿದ್ದೆ. ಕೆಲ ಜನ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದರು. ಈಗ, ಮೊನ್ನೆ ಸಿದ್ದರಾಮಯ್ಯ ಮತ್ತೆ ಮೂರು ಕೇಸ್‌ ಹಾಕಿಸಿದರು. ಮೊದಲ ಕೇಸ್‌ ಹಾಕುತ್ತಿದ್ದಂತೆ ನನ್ನ ಆರೋಗ್ಯ ಸರಿಹೋಯಿತು ಎಂದರು.

ಲೋಕಸಭಾ ಚುನಾವಣೆ ಹೊತ್ತಲ್ಲಿ ಮತ್ತೆ ದಲಿತ ಸಿಎಂ ಕೂಗು! ಖರ್ಗೆ ಕಾಲದಿಂದಲೂ ದಲಿತ ಸಿಎಂ ಬೇಡಿಕೆ ಈಡೇರಿಲ್ಲ ಎಂದ ಸತೀಶ್ ಜಾರಕಿಹೊಳಿ!

ಸಿದ್ದರಾಮಯ್ಯ ಅವರನ್ನು ನಾನು ಏಕವಚನದಲ್ಲಿ ಹೀಯಾಳಿಸಿದ್ದೆ. ಅದಕ್ಕೆ ಕೆಲವು ಜನ ಸಜ್ಜನರು ಅಂತಾ ಇರುತ್ತಾರಲ್ಲ, ಅವರಿಗೆ ಬೇಸರವಾಯಿತಂತೆ. ಅಲ್ಲರೀ, ಸಿದ್ದರಾಮಯ್ಯ ನಮ್ಮ ದೇವಸ್ಥಾನದ ದುಡ್ಡ ತಗೊಂಡ ಹೋಗಿ ಮಸೀದಿಗೆ, ಚರ್ಚ್‌ಗೆ ಕೊಟ್ಟರೆ ಗೌರವದಿಂದ ಏನು ಮಾತಾಡಲಿ?. ಸಿದ್ದರಾಮಯ್ಯ ಅವರನ್ನು ಅಜ್ಜಾ, ಮಾಮಾ ಎಂದು ಕರಿಲೇನು? ಎಂದು ಪ್ರಶ್ನಿಸಿದರು. ಇದು ನನ್ನತ್ರ ಆಗುವುದಿಲ್ಲ ಎಂದು ಸಿಎಂ ವಿರುದ್ಧ ಮತ್ತೆ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ನನ್ನ ತಾಯಿ ಹಾಗೆ ಹೇಳಿ ಕೊಟ್ಟಿಲ್ಲ. ಧರ್ಮಕ್ಕೆ, ದೇಶಕ್ಕೆ ವಿರೋಧ ಮಾಡುತ್ತಾರೆಂದರೆ ಮೊದಲು ಚೆಂಡು ತೆಗೆದು ಬಿಸಾಕು ಎಂದು ಕಲಿಸಿದ್ದಾರೆ. ಯುದ್ಧ ಭೂಮಿಯಲ್ಲಿ ಭರತನಾಟ್ಯ, ಶಾಸ್ತ್ರೀಯ ಸಂಗೀತ ನಡೆಯುವುದಿಲ್ಲ. ನಮ್ಮ ಭಾಷೆಯಲ್ಲಿ ಹೇಳಿದರೆ ಮಾತ್ರ ಸಿದ್ದರಾಮಯ್ಯನವರಿಗೆ ತಿಳಿಯುತ್ತದೆ. ನಾನು ಮತ್ತು ಸಿದ್ದರಾಮಯ್ಯ, ಮೈಸೂರಿನ ಗರಡಿಯಲ್ಲಿ ಬೆಳೆದಿದ್ದೇವೆ ಎಂದು ಹೇಳಿದರು.

Follow Us:
Download App:
  • android
  • ios