Lok Sabha Election 2024: ಬಡವರ, ಶ್ರೀಮಂತರ ನಡುವಿನ ಚುನಾವಣೆ, ಅಂಜಲಿ ನಿಂಬಾಳ್ವರ್

ಇದು ಕೇವಲ ಲೋಕಸಭಾ ಚುನಾವಣೆಯಲ್ಲ, ಕೇವಲ ಬಿಜೆಪಿ ಹಾಗೂ ಕಾಂಗ್ರೆಸ್ ಚುನಾವಣೆಯಲ್ಲ, ಇದು ಬಡವರ ಹಾಗೂ ಶ್ರೀಮಂತರ ನಡುವಿನ ಚುನಾವಣೆ, ನ್ಯಾಯ ಅನ್ಯಾಯದ ನಡುವಿನ ಚುನಾವಣೆ ಹೇಳಿದಂತೆ ನಡೆಯುವ ಸರ್ಕಾರ ನಮ್ಮದು. ರಾಜ್ಯದಲ್ಲಿ ನೀಡಿದ ಎಲ್ಲ ಗ್ಯಾರೆಂಟಿ ಜಾರಿಗೊಳಿಸಲಾಗಿದೆ: ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿ ಅಂಜಲಿ ನಿಂಬಾಳ್ವರ್ 

Uttara Kananda Congress Candidate Anjali Nimbalkar Talks Over Lok Sabha Election 2024 grg

ಚನ್ನಮ್ಮನ ಕಿತ್ತೂರು(ಮಾ.24): ದೇಶ ಮುನ್ನಡೆಯಬೇಕಾದರೆ ಸಂವಿಧಾನ ಅವಶ್ಯ. ಸಂವಿಧಾನ ರಕ್ಷಣೆ ಮಾಡುವ ವ್ಯಕ್ತಿಗಳು ದೇಶಕ್ಕೆ ಬೇಕು. ಆದರೆ, ಸಂವಿಧಾನ ಬದಲಾಯಿಸುವ ಮಾತನ್ನಾಡುವ ನಾಯಕರ ಅವಶ್ಯಕತೆ ನಮಗಿಲ್ಲ ಎಂದು ಮಾಜಿ ಶಾಸಕಿ ಹಾಗೂ ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿ ಅಂಜಲಿ ನಿಂಬಾಳ್ವರ್ ಹೇಳಿದರು.

ಲೋಕಸಭಾ ಚುನಾವಣೆಯ ನಿಮಿತ್ತ ಶನಿವಾರ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮತಯಾಚನೆ ನಡೆಸಿ ಮಾತನಾಡಿದ ಅವರು, ಇದು ಕೇವಲ ಲೋಕಸಭಾ ಚುನಾವಣೆಯಲ್ಲ, ಕೇವಲ ಬಿಜೆಪಿ ಹಾಗೂ ಕಾಂಗ್ರೆಸ್ ಚುನಾವಣೆಯಲ್ಲ, ಇದು ಬಡವರ ಹಾಗೂ ಶ್ರೀಮಂತರ ನಡುವಿನ ಚುನಾವಣೆ, ನ್ಯಾಯ ಅನ್ಯಾಯದ ನಡುವಿನ ಚುನಾವಣೆ ಹೇಳಿದಂತೆ ನಡೆಯುವ ಸರ್ಕಾರ ನಮ್ಮದು. ರಾಜ್ಯದಲ್ಲಿ ನೀಡಿದ ಎಲ್ಲ ಗ್ಯಾರೆಂಟಿ ಜಾರಿಗೊಳಿಸಲಾಗಿದೆ. ಅದರಂತೆಯೇ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹಲವು ಗ್ಯಾರೆಂಟಿ ಘೋಷಣೆ ಮಾಡಿ ದ್ದು ಅಧಿಕಾರಕ್ಕೆ ಬಂದರೆ ಕೇವಲ ತಿಂಗಳೊಳಗೆ ಅವುಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಭರವಸೆ ನೀಡಿದರು.

ಧರ್ಮ, ದೇವರು ಹೆಸರಿನಲ್ಲಿ ದಾರಿ ತಪ್ಪಿಸುತ್ತಿರುವ ಬಿಜೆಪಿ: ಮೃಣಾಲ್‌ ಹೆಬ್ಬಾಳಕರ್‌

ಕೇವಲ ಹಿಂದೂತ್ವದ ಮೇಲೆ ತಪ್ಪು ದಾರಿ ತೋರಿಸಿ ಜನರಿಗೆ ಅನ್ಯಾಯ ಮಾಡಲಾಗಿದೆ. ಸುಳ್ಳು ಆಶ್ವಾಸನೆ ನೀಡಿ ವಂಚಿಸಿದ್ದಾರೆ. ರೈತ ಪರ, ಯುವಕರ ಪರ, ಮಹಿಳೆಯರ ಪರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಮಾಡಿಲ್ಲ, ಇಂತಹ ದೇಶದ್ರೋಹಿ ಬಿಜೆಪಿಗೆ ತಕ್ಕ ಪಾಠವನ್ನು ಮತದಾರರು ಕಲಿಸಬೇಕೆಂದು ಹೇಳಿದರು.

ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರತ್ಯಕ್ಷವಾಗಿ ಇಲ್ಲ ಸಲ್ಲದ ಆರೋಪಗಳ ಮೂಲಕ ಜನರ ದಾರಿ ತಪ್ಪಿಸುವ ವ್ಯಕ್ತಿ ಅವಶ್ಯಕತೆ ಇಲ್ಲ, 6 ಭಾರಿ ಸಂಸದರಾದರೂ ಖಾನಾಪುರ ಹಾಗೂ ಕಿತ್ತೂರು ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಧರ್ಮ ಆಧಾರಿತ ಹಾಗೂ ಭಾವನಾತ್ಮಕವಾಗಿ ಮಾತನಾಡುವವರಿಗೆ ಮತ ಹಾಕಲು ಅಸಾಧ್ಯ, ಮತದಾರರು ಈ ಭಾರಿ ಅಭಿವೃದ್ಧಿ ಪರ ಮತ ಚಲಾಯಿಸಬೇಕೆಂದು ಮನವಿ ಮಾಡಿದರು, ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿದರು. ಪ್ರಚಾರ ಸಮಿತಿ ಅಧ್ಯಕ್ಷ ರಾಜಾಸಲೀಂ ಕಾಶೀಂನವರ, ಶಂಕರಹೊಳಿ, ಬ್ಲಾಕ ಅಧ್ಯಕ್ಷರಾದ ಸಂಗನಗೌಡ ಪಾಟೀಲ, ನಿಂಗಪ್ಪ ಅರಕೇರಿ, ಕಿತ್ತೂರು ಹಾಗೂ ಎಂ.ಕೆ.ಹುಬ್ಬಳ್ಳಿಯ ಪಟ್ಟಣ ಪಂಚಾಯಿತಿಯ ಸದಸ್ಯರು ಹಾಜರಿದ್ದರು.

Latest Videos
Follow Us:
Download App:
  • android
  • ios