ಯುಪಿಎ ಸರ್ಕಾರ 10 ವರ್ಷದ ದುರಾಡಳಿತ ನಡೆಸಿತ್ತು: ಡಾ.ಸಿ.ಎನ್.ಅಶ್ವತ್ಥನಾರಾಯಣ
ಕೇಂದ್ರ ಬಿಜೆಪಿ ಸರ್ಕಾರವು ತಮ್ಮ ಸಾಧನೆಯನ್ನು ಅಂಕಿ-ಅಂಶಗಳ ಶ್ವೇತಪತ್ರದ ಮೂಲಕ ತಿಳಿಸಲಾಗಿದೆ. ಆದರೆ, ಯುಪಿಎ ಅವಧಿಯ ‘ಆಡಳಿತ ರೋಡ್ ಟು ನೋವೇರ್’ ಆಗಿದ್ದು, ರಾಜಕೀಯ ಪ್ರೇರಿತ ಆಡಳಿತ ಅದಾಗಿತ್ತು ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರು (ಫೆ.11): ಕೇಂದ್ರ ಬಿಜೆಪಿ ಸರ್ಕಾರವು ತಮ್ಮ ಸಾಧನೆಯನ್ನು ಅಂಕಿ-ಅಂಶಗಳ ಶ್ವೇತಪತ್ರದ ಮೂಲಕ ತಿಳಿಸಲಾಗಿದೆ. ಆದರೆ, ಯುಪಿಎ ಅವಧಿಯ ‘ಆಡಳಿತ ರೋಡ್ ಟು ನೋವೇರ್’ ಆಗಿದ್ದು, ರಾಜಕೀಯ ಪ್ರೇರಿತ ಆಡಳಿತ ಅದಾಗಿತ್ತು ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಯುಪಿಎ ಬಿಟ್ಟು ಹೋದ ಆರ್ಥಿಕ ಗೊಂದಲ, ದಿಕ್ಕು ದೆಸೆ ಇಲ್ಲದ ಆಡಳಿತ ಮತ್ತು ಅವ್ಯವಸ್ಥೆಯನ್ನು ಸರಿಪಡಿಸಿ ಕಷ್ಟದ ಕಾಲದಿಂದ ಒಳ್ಳೆಯ ಕಾಲಕ್ಕೆ ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡೊಯ್ದಿದ್ದಾರೆ. ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ಸಿಗರು ಮಾತನಾಡುತ್ತಾರೆ.
ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಆಡಳಿತ ವೇಳೆ ಹಣದುಬ್ಬರ, ಬೆಲೆ ಏರಿಕೆ ಶೇ 3.9ರಷ್ಟಿತ್ತು. ಕಾಂಗ್ರೆಸ್‌ನ 10 ವರ್ಷಗಳ ಅವಧಿಯಲ್ಲಿ ಅದು ಸರಾಸರಿ ಶೇ 8.2 ಆಗಿತ್ತು. ಕೋವಿಡ್ ಇದ್ದರೂ, ಜಾಗತಿಕ ಹಣಕಾಸಿನ ಬಿಕ್ಕಟ್ಟು, ಯುದ್ಧಗಳಿದ್ದರೂ ನರೇಂದ್ರ ಮೋದಿ ಆಡಳಿತದಲ್ಲಿ ಬೆಲೆ ಏರಿಕೆ ಸರಾಸರಿ ಶೇ.5ರಷ್ಟಿದೆ ಎಂದು ಯುಪಿಎ ಸರ್ಕಾರದ ವೈಫಲ್ಯಗಳನ್ನು ವಿವರಿಸಿದರು. ದೇಶದ ಸಾಲ ಮರುಪಾವತಿಗೂ ಸಮಸ್ಯೆ ಇದ್ದು, ಯುಪಿಎ ಸರ್ಕಾರ ನಿರಾಳವಾಗಿ ನಿದ್ರಾಲೋಕದಲ್ಲಿತ್ತು. ಬ್ಯಾಂಕ್ ಎನ್‌ಪಿಎ ಶೇ.7 ರಷ್ಟು ಇತ್ತು. ಈಗ ಅದು ಶೇ 3.2ರಷ್ಟಿದೆ. ಬ್ಯಾಂಕ್‌ಗಳು ಹಿಂದೆ ಮುಚ್ಚುವಂತಹ ಸ್ಥಿತಿಯಲ್ಲಿದ್ದವು.
ಸಚಿವ ಎಚ್.ಕೆ.ಪಾಟೀಲ್‌ಗೆ ತಾಕತ್ತಿದ್ದರೆ ಬಂಧಿಸಲಿ: ಕೆ.ಎಸ್.ಈಶ್ವರಪ್ಪ
ಈಗ ಅವು ಬೆಳವಣಿಗೆ ಕಂಡಿವೆ. ಯುಪಿಎ ಅವಧಿಯಲ್ಲಿ ಡಾಲರ್ ಬೆಲೆ ಏರಿಕೆಯೂ ಗರಿಷ್ಠ ಪ್ರಮಾಣದಲ್ಲಿತ್ತು. ಹಣಕಾಸು ಕೊರತೆ ಗರಿಷ್ಠ ಇತ್ತು. 1 ಲಕ್ಷದ 90 ಸಾವಿರ ಕೋಟಿ ಆಯಿಲ್ ಬಾಂಡ್ ಬಿಡುಗಡೆ ಮಾಡಿದ್ದು, ಇದನ್ನೆಲ್ಲ ತೋರಿಸಿರಲಿಲ್ಲ. ಇಂತಹ ಸಾಲಗಳನ್ನು ಮರುಪಾವತಿ ಮಾಡಲಾಗಿದೆ ಎಂದು ಹೇಳಿದರು. ಯುಪಿಎ ಕಾಲದಲ್ಲಿ ಆರ್ಥಿಕ ಸುಸ್ಥಿರತೆ ಇಲ್ಲದೆ ಎಲ್ಲವೂ ಭರವಸೆದಾಯಕವಾಗಿರಲಿಲ್ಲ. ಇವತ್ತು ಎಲ್ಲವೂ ಸುಸ್ಥಿರತೆಯಿಂದ ಸಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಮೂಲಭೂತ ಸೌಕರ್ಯಕ್ಕೆ ಕಡಿವಾಣ ಹಾಕಿರುವುದು ಎದ್ದು ಕಾಣುವಂತಿದೆ. ಈ ಎಲ್ಲ ವಿಚಾರಗಳಿಗೆ ಕಾಂಗ್ರೆಸ್‌ನವರಲ್ಲಿ ಉತ್ತರ ಇಲ್ಲ ಎಂದು ಟೀಕಿಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.