ಲಖನೌ, (ಆ.21): ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ ಸಾದರ್​ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜನ್​ಮೇಜಯ್​ ಸಿಂಗ್​ (75) ಅವರು ಇಂದು (ಶುಕ್ರವಾರ) ನಿಧನರಾಗಿದ್ದಾರೆ.

ಗುರುವಾರ ರಾತ್ರಿ ಶಾಸಕ ಜನ್​ಮೇಜಯ್​ ಸಿಂಗ್​ ಅವರರನ್ನ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನ  ಲಖನೌದ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.  

ಬಿಜೆಪಿ ಮಾಜಿ ಶಾಸಕ ಸಿ. ಗುರುಸ್ವಾಮಿ ಕೊರೋನಾಗೆ ಬಲಿ!

ಜನಮೇಜಯ್​ ಸಿಂಗ್​ ಸಾವಿಗೆ  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ವಿಧಾನಸಭಾ ಸ್ಪೀಕರ್​ ಹೃದಯ್​ ನಾರಾಯಣ್ ದೀಕ್ಷಿತ್​ ಸೇರಿದಂತೆ ಕಾಂಗ್ರೆಸ್, ಬಿಎಸ್‌ಪಿ ನಾಯಕರು  ಸಂತಾಪ ಸೂಚಿಸಿದ್ದಾರೆ.