ಸಿದ್ದರಾಮಯ್ಯ ಪರ ಜಿ.ಟಿ. ದೇವೇಗೌಡ ಬ್ಯಾಟಿಂಗ್, ಯಾಕೆ ಹೀಗೆ ಹೇಳ್ತಾರೆ ಅಂತ ಅವರಿಗೆ ಗೊತ್ತು: ಸೋಮಣ್ಣ
ಸಿಎಂ ಸಿದ್ದರಾಮಯ್ಯ ಅವರ ನಡುವಳಿಕೆ ದಿನಕೊಂದು ತರ ಆಗ್ತಾಯಿದೆ. ಬೆಕ್ಕಿಗೆ ಗಂಟೆ ಕಟ್ಟವವರು ಯಾರು, ನಾವು ನೀವು ಕಟ್ಟಲು ಆಗುತ್ತಾ?. ಸಿಎಂ ಅವರೇ ಮಾಡಿಕೊಂಡಿರುವ ಕಾಯಿಲೆ, ನೀವೇ ಕೆರೆದುಕೊಂಡಿರುವ ಹುಣ್ಣು. ಅದಕ್ಕೆ ನೀವೆ, ಔಷಧಿ ಹಚ್ಚಿಕೊಳ್ಳಬೇಕು ಎಂದ ಕೇಂದ್ರ ಸಚಿವ ವಿ. ಸೋಮಣ್ಣ
ಗದಗ(ಅ.03): ಸಿಎಂ ಸಿದ್ದರಾಮಯ್ಯ ನಾನು ಒಟ್ಟಿಗೆ ರಾಜಕೀಯಕ್ಕೆ ಬಂದವರು. ಮುಡಾ ಪ್ರಕರಣ ಜಗತ್ ಜಾಹೀರವಾಗಿದೆ, ಅದನ್ನು ಸಿಎಂ ಅರ್ಥ ಮಾಡಿಕೊಳ್ಳುತ್ತಿಲ್ಲ. ನಾವು ಬೇರೆ ಭಾಷೆಯಲ್ಲಿ ಮಾತನಾಡಲು ಆಗೋದಿಲ್ಲ, ನಮಗೆ ಸಂಸ್ಕಾರ ಇದೆ. ಸಿಎಂ ಅವರೇ ಆತ್ಮಸಾಕ್ಷಿ ಅಂತಾ ಹೇಳಿದ್ರು. ಅದು ಕಾಮೆಂಟ್ ಆಗ್ತಿದೆ. ಶಾಸನ ಸಭೆಯಲ್ಲಿ ಸೈಟ್ ವಾಪಸ್ ಕೊಡಬೇಕಿತ್ತು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿ. ಸೋಮಣ್ಣ ಅವರು, ವಿಪಕ್ಷ ನಾಯಕ ಆರ್. ಅಶೋಕರನ್ನು ಹಿಡ್ಕೊಂಡಿದ್ದೀರಿ. ಈ ಪ್ರಕರಣಕ್ಕೆ ಏನು ಸಂಬಂಧ. ಆಶೋಕ ಆಗಲೇ ವಾಪಸ್ಸ್ ನೀಡಿದ್ರು, ನೀವು ಆವಾಗಲೇ ಮಾಡಬೇಕಾಗಿತ್ತು. ವ್ಯವಸ್ಥೆಯಲ್ಲಿ ಯಾರು ದೊಡ್ಡವರಲ್ಲ, ಕಾನೂನು ಎಲ್ಲರಿಗೂ ಒಂದೆ ಎಂದು ಹೇಳಿದ್ದಾರೆ.
ಬಳ್ಳಾರಿ ಜನರ ಶಾಪದಿಂದ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಜನಾರ್ದನ ರೆಡ್ಡಿ
ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಜೆಡಿಎಸ್ ನಾಯಕ ಜಿ.ಟಿ. ದೇವೇಗೌಡರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸೋಮಣ್ಣ ಅವರು, ಅದನ್ನು ಅವರನ್ನೇ ಕೇಳಬೇಕು, ಅವರು ಸೀನಿಯರ್ ರಾಜಕಾರಣಿ. ಯಾಕೆ ಹೀಗೆ ಹೇಳ್ತಾರೆ ಅದು ಅವರಿಗೆ ಗೊತ್ತು ಎಂದಷ್ಟೇ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ. ತಮ್ಮ ಕಾಲಿನ ಮೇಲೆ ಒಂದು ಕಲ್ಲು ಹಾಕಿಕೊಳ್ಳುವ ಬದಲು ಹತ್ತಾರು ಕಲ್ಲು ಹಾಕಿಕೊಂಡು, ಔಷಧಿ ಇಲ್ಲದ ಹಾಗೇ ಮಾಡಿಕೊಂಡಿದ್ದಾರೆ. ಕಾನೂನು ಇದೆ, ಕಾನೂನು ಯಾವ ರೀತಿ ನಿರ್ಮಾಣ ಮಾಡುತ್ತೆ ನೋಡೋಣ ಎಂದು ತಿಳಿಸಿದ್ದಾರೆ.
ಭ್ರಷ್ಟ ಸಿಎಂ ಪ್ರಭಾವಕ್ಕೆ ಒಳಗಾಗಿ ಸೈಟು ಖಾತೆ ರದ್ದು: ಸಿದ್ದು ವಿರುದ್ಧ ಸಿಡಿದೆದ್ದ ವಿಜಯೇಂದ್ರ
ಆರ್. ಅಶೋಕ್ ಅವರೂ ಸೈಟ್ ಹಿಂತಿರುಗಿಸಿರುವ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸೋಮಣ್ಣ ಅವರು, ಎತ್ತಣ ಮಾಮರ ಎತ್ತಣ ಕೋಗಿಲೆ. ಯಾವದನ್ನು ಯಾವುದಕ್ಕೆ ಹೋಲಿಕೆ ಮಾಡುತ್ತೀರಿ. ಅಶೋಕ್ ಸೈಟ್ ಮರಳಿ ನೀಡಿದಾಗ ಪ್ರಕರಣ ಕೋರ್ಟ್ ಗೆ ಹೋಗಿರಲ್ಲಿಲ್ಲ. ಈಗ ಸೈಟ್ ವಾಪಸ್ ನೀಡಿದ್ದಾರೆ. ಒಂದೇ ದಿನಕ್ಕೆ ರಿಜಿಸ್ಟರ್ ಕ್ಯಾನ್ಸಲ್ ಮಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ನಡುವಳಿಕೆ ದಿನಕೊಂದು ತರ ಆಗ್ತಾಯಿದೆ. ಬೆಕ್ಕಿಗೆ ಗಂಟೆ ಕಟ್ಟವವರು ಯಾರು, ನಾವು ನೀವು ಕಟ್ಟಲು ಆಗುತ್ತಾ?. ಸಿಎಂ ಅವರೇ ಮಾಡಿಕೊಂಡಿರುವ ಕಾಯಿಲೆ, ನೀವೇ ಕೆರೆದುಕೊಂಡಿರುವ ಹುಣ್ಣು. ಅದಕ್ಕೆ ನೀವೆ, ಔಷಧಿ ಹಚ್ಚಿಕೊಳ್ಳಬೇಕು. ಈವಾಗ ರಾಜೀನಾಮೆ ನೀಡಿ, ನೀವು ತಪ್ಪಿತಸ್ಥರು ಅಲ್ಲಾ ಅಂದ್ರೆ ನೀವೇ ಸಿಎಂ ಆಗಿ ಎಂದು ತಿಳಿಸಿದ್ದಾರೆ.