ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಐಷಾರಾಮಿ ವಿಮಾನಯಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಐಟಿ ಸಚಿವಾಲಯದ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌, ‘ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳನ್ನು ಸ್ವಂತ ಎಟಿಎಂ ಮಾಡಿಕೊಂಡು, ಜನರ ಹಣದಲ್ಲಿ ಮೋಜು ಮಾಡುತ್ತಿದೆ’ ಎಂದು ಕಿಡಿಕಾರಿದ್ದಾರೆ. 

ನವದೆಹಲಿ (ಡಿ.23): ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಐಷಾರಾಮಿ ವಿಮಾನಯಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಐಟಿ ಸಚಿವಾಲಯದ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌, ‘ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳನ್ನು ಸ್ವಂತ ಎಟಿಎಂ ಮಾಡಿಕೊಂಡು, ಜನರ ಹಣದಲ್ಲಿ ಮೋಜು ಮಾಡುತ್ತಿದೆ’ ಎಂದು ಕಿಡಿಕಾರಿದ್ದಾರೆ.

ಈ ಕುರಿತಾಗಿ ಟ್ವೀಟ್‌ ಮಾಡಿರುವ ಅವರು, ‘ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಕಾಂಗ್ರೆಸ್‌, ರಾಜ್ಯಗಳನ್ನು ತನ್ನ ಸ್ವಂತ ಎಟಿಎಂ ಮಾಡಿಕೊಳ್ಳುತ್ತಿದೆ. ಯುದ್ಧವಿಮಾನಗಳನ್ನು ಮೇಲ್ದರ್ಜೆಗೇರಿಸಲು ಹಣವಿಲ್ಲದ ಸಮಯದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಯುಪಿಎ ಸರ್ಕಾರ ಇದ್ದಾಗ ವಿಐಪಿ ಹೆಲಿಕಾಪ್ಟರ್‌ಗಳಿಗೆ ಹಣ ಖರ್ಚು ಮಾಡಿದ್ದರು. ಸೋನಿಯಾ ಅವರೇ ಹೀಗೆ ಮಾಡಿರುವಾಗ ಐಷಾರಾಮಿ ವಿಮಾನದಲ್ಲಿ ಪ್ರಯಾಣಿಸಲು ಸಿದ್ದರಾಮಯ್ಯ, ಕರ್ನಾಟಕ ಸರ್ಕಾರದ ಹಣ ಬಳಸದೇ ಇರುತ್ತಾರೆಯೇ’ ಎಂದು ಪ್ರಶ್ನಿಸಿದ್ದಾರೆ.

ಕಾರ್ಮಿಕ ಕಾನೂನು ವ್ಯಾಪ್ತಿಗೆ ಐಟಿ, ಬಿಟಿ ಕಂಪನಿ?: ಸಚಿವ ಸಂತೋಷ್‌ ಲಾಡ್‌

ಆಧಾರ್‌ ಸೇವೆಗೆ ಹೆಚ್ಚಿಗೆ ಹಣ ಪಡೆದರೆ ₹50,000 ದಂಡ, ಸಸ್ಪೆಂಡ್‌: ಆಧಾರ್‌ ಕಾರ್ಡ್‌ ತಿದ್ದುಪಡಿ, ನವೀಕರಣ, ಮಾಹಿತಿ ಸರಿಪಡಿಸುವಿಕೆ ಇತ್ಯಾದಿ ಸೇವೆಗಳಿಗೆ ಸೇವಾ ಕೇಂದ್ರಗಳು ಹೆಚ್ಚುವರಿ ಹಣ ಪಡೆದರೆ 50,000 ರು. ದಂಡ ಹಾಗೂ ಅಮಾನತು ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಲೋಕಸಭೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ ಕೇಂದ್ರ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌,‘ಆಧಾರ್‌ ಸೇವೆಗಳನ್ನು ಕೇಂದ್ರ, ರಾಜ್ಯ ಸರ್ಕಾರ ಹಾಗೂ ಅಧಿಕೃತ ಕೇಂದ್ರಗಳಲ್ಲಿ ಮಾಡಲಾಗುತ್ತದೆ. ಇದಕ್ಕಾಗಿ ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನು ಮಾತ್ರ ಪಡೆಯತಕ್ಕದ್ದು. ಹೆಚ್ಚುವರಿ ಹಣ ಪಡೆದರೆ ಅಂಥ ನೋಂದಣಿ ಮಾಡುವವರನ್ನು ಅಮಾನತು ಮಾಡಲಾಗುತ್ತದೆ ಹಾಗೂ 50,000 ರು. ದಂಡವನ್ನು ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕೃತಕ ಬುದ್ಧಿಮತ್ತೆ ದುರ್ಬಳಕೆ ತಡೆಗೆ ಬದ್ಧ: ಕೃತಕ ಬುದ್ಧಿಮತ್ತೆ ದುರ್ಬಳಕೆ ತಡೆಗೆ ಶಾಸಕಾಂಗ ರಕ್ಷಣೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ, ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು. ಬೆಂಗಳೂರು ಟೆಕ್‌ ಶೃಂಗಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೃತಕ ಬುದ್ಧಿಮತ್ತೆ ಸಕಾರಾತ್ಮಕ ದಾರಿಯಲ್ಲಿ ಅಂದರೆ ಕೃಷಿ, ಆರೋಗ್ಯ ಕ್ಷೇತ್ರ, ಸರ್ಕಾರದ ಆಡಳಿತ, ಶೈಕ್ಷಣಿಕ ಕ್ಷೇತ್ರದಲ್ಲಿ ಬಳಕೆ ಆಗಬೇಕು. 

ನಿನ್ನೆ ತನಕ ಬಿಜೆಪಿಯಲ್ಲಿನ ಕೆಲವರಲ್ಲಿ ಅಸಮಾಧಾನ ಇತ್ತು, ಈಗ ಸರಿಯಾಗಿದೆ: ಈಶ್ವರಪ್ಪ

ಪ್ರಮುಖವಾಗಿ ಕೃತಕ ಬುದ್ಧಿಮತ್ತೆ ಯಾವುದೇ ಕಾರಣಕ್ಕೂ ದುರ್ಬಳಕೆ ಆಗದಂತೆ ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳುವುದು ಹೇಗೆ? ಜಗತ್ತು ಭಾರತದಿಂದ ಬಯಸುತ್ತಿರುವಂತೆ ಕೃತಕ ಬುದ್ಧಿಮತ್ತೆ ಬಳಕೆಗೆ ಶಾಸಕಾಂಗ ರಕ್ಷಣೆಯನ್ನು ಒದಗಿಸುವುದು ಹೇಗೆ ಎಂಬ ಕುರಿತು ಗಂಭೀರ ಚಿಂತನೆ ನಡೆಯಲಿದೆ ಎಂದರು. ಜನವರಿ 10ರಂದು ಇಂಡಿಯಾ ಎಐ ಸಮ್ಮಿಟ್‌ ನಡೆಯಲಿದ್ದು, ಈ ವೇಳೆ ಪ್ರತಿಭೆ, ಎಐ ಚಿಪ್‌, ಎಐ ಕಂಪ್ಯೂಟ್‌, ಎಐ ಮಾದರಿ, ಎಲ್‌ಎಲ್‌ಎಂ ಮಾದರಿಗಳ ಕುರಿತು ಹೆಚ್ಚಿನ ಗಮನ ಹರಿಸಲಾಗುವುದು ಎಂದು ತಿಳಿಸಿದರು.