*   ಹಿರಿಯ ನಾಯಕ ಮುನಿಯಪ್ಪಗೆ ಯಾವ ಸ್ಥಿತಿಯಾಗಿದೆ ನೋಡಿ*  ಕಾಂಗ್ರೆಸ್‌ನವರು ಬೇಕಿದ್ದರೆ ಡಿಕೆ ಉತ್ಸವ ಮಾಡಲಿ*  ಕಾಂಗ್ರೆಸ್‌ ಪಕ್ಷದ ಮತ್ತೊಬ್ಬರು ಅವರ ಅಂತ್ಯೋತ್ಸವ ಮಾಡುತ್ತಾರೆ

ಬೆಂಗಳೂರು(ಜು.11):  ‘ಕಾಂಗ್ರೆಸ್‌ನವರು ಸಿದ್ದರಾಮೋತ್ಸವ ಮಾಡುತ್ತಿರುವುದಕ್ಕೆ ನಮಗೆ ಹೊಟ್ಟೆಕಿಚ್ಚಿಲ್ಲ. ಅವರ ಪಕ್ಷದವರಿಗೆ ಹೊಟ್ಟೆಕಿಚ್ಚಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದು ಮೊದಲು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಳುಗಿಸಿದರು, ನಂತರ ಜಿ.ಪರಮೇಶ್ವರ್‌ ಅವರನ್ನು ಮುಳುಗಿಸಿದರು. ಈಗ ಅವರ ಮುಂದಿನ ಟಾರ್ಗೆಟ್‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಾಗಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

‘ಸಿದ್ದರಾಮಯ್ಯ ಈಗ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದ ಮತ್ತೊಬ್ಬರು ಅವರ ಅಂತ್ಯೋತ್ಸವ ಮಾಡುತ್ತಾರೆ. ಸಿದ್ದರಾಮೋತ್ಸವ ಎಷ್ಟು ಮಾಡುತ್ತಾರೋ ನಮಗೆ ಅಷ್ಟು ಒಳ್ಳೆಯದು. ಅದಕ್ಕಾಗಿ ನಾನು ಶುಭ ಹಾರೈಸುತ್ತೇನೆ ಅಂತ ಹೇಳಿದ್ದಾರೆ. 

ಬಾಟ್ಲಾ ಹೌಸ್ ಶೂಟೌಟ್ ನಲ್ಲಿ ಉಗ್ರ ಸತ್ತಾಗ ಸೋನಿಯಾ ಕಣ್ಣೀರು ಹಾಕಿದ್ರಂತೆ: Pralhad Joshi

ಹಿರಿಯ ನಾಯಕ ಮುನಿಯಪ್ಪಗೆ ಯಾವ ಸ್ಥಿತಿಯಾಗಿದೆ ನೋಡಿ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿಟ್ಟಿದ್ದಾರೆ. ಇಬ್ಬರೂ ಕೂಸು ಹುಟ್ಟುವ ಮೊದಲ ಅಂಗಿ ಹೊಲಿಸಿರುವುದಕ್ಕೆ ಸಮಸ್ಯೆಯಾಗಿದೆ. ಕಾಂಗ್ರೆಸ್‌ನವರು ಬೇಕಿದ್ದರೆ ಡಿಕೆ ಉತ್ಸವ ಮಾಡಲಿ’ ಎಂದು ವ್ಯಂಗ್ಯವಾಡಿದ್ದಾರೆ.