Asianet Suvarna News Asianet Suvarna News

ಕಾಂಗ್ರೆಸ್‌ ಈಗ ಡೇಟ್‌ ಬಾರ್‌ ಆದ ಪಕ್ಷ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಕಾಂಗ್ರೆಸ್‌ ಪಕ್ಷ ಈಗ ಡೇಟ್‌ ಬಾರ್‌ ಆಗಿರುವ ಪಕ್ಷವಾಗಿದೆ ಎಂದು ಕೇಂದ್ರದ ಸಚಿವ ಪ್ರಹ್ಲಾದ ಜೋಶಿ ಅವರು ವ್ಯಂಗ್ಯವಾಡಿದರು. ನಗರದ ಸೈನಿಕ ಶಾಲೆಯಲ್ಲಿ ಜರುಗಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Union Minister Pralhad Joshi Slams On Congress At Vijayapura gvd
Author
First Published Mar 19, 2023, 9:22 PM IST

ವಿಜಯಪುರ (ಮಾ.19): ಕಾಂಗ್ರೆಸ್‌ ಪಕ್ಷ ಈಗ ಡೇಟ್‌ ಬಾರ್‌ ಆಗಿರುವ ಪಕ್ಷವಾಗಿದೆ ಎಂದು ಕೇಂದ್ರದ ಸಚಿವ ಪ್ರಹ್ಲಾದ ಜೋಶಿ ಅವರು ವ್ಯಂಗ್ಯವಾಡಿದರು. ನಗರದ ಸೈನಿಕ ಶಾಲೆಯಲ್ಲಿ ಜರುಗಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಸಿದ್ದರಾಮಯ್ಯನವರಿಗೆ ಅಚ್ಚೇ ದಿನ್‌ ಬರುವುದಿಲ್ಲ. ಏಕೆಂದರೆ ಅವರ ಪಕ್ಷದ ಡೇಟ್‌ ಡಿಬಾರ್‌ ಆಗಿದೆ. ಆದರೆ, ದರಿಂದಾಗಿ ದೇಶದ ಜನರಿಗೆ ಅಚ್ಚೇ ದಿನ್‌ ಬಂದಿವೆ ಎಂದು ಹೇಳಿದರು. 

ಈ ಹಿಂದೆ ಟಿಪ್ಪು ಸುಲ್ತಾನ್‌ ಅಪ್ಘಾನಿಸ್ತಾನಕ್ಕೆ ಪತ್ರ ಬರೆದು ಸಹಾಯ ಕೇಳಿದ್ದ, ಈಗ ಅದೇ ಪರಂಪರೆಯನ್ನು ಕಾಂಗ್ರೆಸ್‌ ನಾಯಕರು ಮುಂದುವರೆಸಿದ್ದು, ವಿದೇಶಿ ನೆಲದಲ್ಲಿ ನಿಂತು ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಬಂದು ಅಭಯ ನೀಡಿ ಎಂದು ಕೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಸಂಸದರೊಬ್ಬರು ದೇಶದಲ್ಲಿ ಪ್ರಜಾಪ್ರಭುತ್ವ ಗಂಡಾಂತರದಲ್ಲಿ ಇದೆ ಎಂದು ಭಾಷಣ ಮಾಡಿದ್ದಾರೆ. ಈ ಹಿಂದೆ ಟಿಪ್ಪು ಸುಲ್ತಾನ್‌ ಸಹ ಅಪ್ಘಾನಿಸ್ತಾನ ದೇಶಕ್ಕೆ ಪತ್ರ ಬರೆದು ಭಾರತಕ್ಕೆ ಬಂದು ದಂಗೆ ಮಾಡಿ ಎಂದು ಮನವಿ ಮಾಡಿದ್ದ. 

ಕರ್ನಾಟಕ ಸಂಘ ಕತಾರ್ ವತಿಯಿಂದ 'ಕಬ್ಜ' ಚಿತ್ರದ ವಿಶೇಷ ಪ್ರದರ್ಶನ

ಈಗ ಅದೇ ನೀತಿಯನ್ನು ಕಾಂಗ್ರೆಸ್ಸಿಗರು ಅನುಸರಿಸುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್‌ನ ಹಿರಿಯ ನಾಯಕನೊಬ್ಬ ಪಾಕ್‌ಗೆ ಹೋಗಿ ಅಲ್ಲಿನ ಜನರನ್ನುದ್ದೇಶಿಸಿ ನೀವು ಭಾರತಕ್ಕೆ ಬಂದು ಮೋದಿಯನ್ನು ಸೋಲಿಸಿ ಎಂದು ಕರೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಮಿ, ಐಎಸ್‌ಐ ಮೊದಲಾದ ಭಯೋತ್ಪಾದಕ ಸಂಘಟನೆಗಳೊಂದಿಗೆ ಪಿಎಫ್‌ಐನಂತಹ ಸಂಘಟನೆ ಒಡನಾಟ ಹೊಂದಿದೆ. ಇದಕ್ಕೆ ಕಾಂಗ್ರೆಸ್‌ ಕುಮ್ಮಕ್ಕು ನೀಡುತ್ತಿದೆ. ಬಿಜೆಪಿ ದೇಶದಲ್ಲಿನ ಭಯೋತ್ಪಾದನೆ ಮಟ್ಟಹಾಕಿದ್ದು, ಪಾಕ್‌ ಒಳಗೆ ನುಗ್ಗಿ ಭಯೋತ್ಪಾದಕರಿಗೆ ಬುದ್ಧಿ ಕಲಿಸಿದೆ ಎಂದು ಹೇಳಿದರು.

ನೇರ ಪಾವತಿ ಮೂಲಕ ಜನರ ಕೋಟಿ ಕೋಟಿ ಹಣ ಕೆಲ ವ್ಯಕ್ತಿಗಳ ಪಾಲಾಗುವುದನ್ನು ಮೋದಿ ಸರ್ಕಾರ ತಪ್ಪಿಸಿದೆ. ಯಾರ ಜೇಬಿಗೆ ಹಣ ಹೋಗುವುದು ಬಂದ್‌ ಆಗಿದೆಯೋ ಅವರು ಮೋದಿ ಅವರನ್ನು ತೆಗಳುತ್ತಾರೆ ಎಂದರು. ಕೋವಿಡ್‌ ವ್ಯಾಕ್ಸಿನ್‌ ತಯಾರಿಕೆಗೆ ಮೋದಿ ಸರ್ಕಾರ ಪ್ರೋತ್ಸಾಹ ಹಾಗೂ ನೆರವು ನೀಡದೇ ಹೋಗಿದ್ದರೆ ಅಮೆರಿಕ, ರಷ್ಯಾದಿಂದ ಸಾವಿರಾರು ರೂಪಾಯಿಗೆ ಒಂದರಂತೆ ವ್ಯಾಕ್ಸಿನ್‌ ಖರೀದಿಸಬೇಕಿತ್ತು. ಆದರೆ, ಪ್ರಧಾನಿ ಮೋದಿಯವರ ಪರಶ್ರಮ, ದೂರದೃಷ್ಟಿ, ನಾಯಕತ್ವದಿಂದ ಇಂದು ನಾವೆಲ್ಲ ಒಂದಲ್ಲ, ಎರಡಲ್ಲ ತಲಾ 3 ಡೋಸ್‌ ವ್ಯಾಕ್ಸಿನ್‌ ಪಡೆದು ಮಾಸ್‌್ಕ ಇಲ್ಲದೇ ಸುರಕ್ಷಿತವಾಗಿ ಬದುಕುವಂತಾಗಿದೆ ಎಂದರು.

ವಿರೋಧ ಪಕ್ಷಗಳು ನಿರಾಕರಿಸಲು ಸಾಧ್ಯವಿಲ್ಲದಷ್ಟು ಯೋಜನೆಗಳ ಲಾಭ ಜನರಿಗೆ ತಲುಪಿವೆ. ನೀರು ಕೊಡುವ ಜವಾಬ್ದಾರಿ ಗ್ರಾಮ ಪಂಚಾಯಿತಿಯದ್ದು, ಅದಕ್ಕೆ ಅನುದಾನ ಕೊಡಬೇಕಾದುದು ರಾಜ್ಯ ಸರ್ಕಾರ, ಆದರೆ, ಪ್ರಧಾನಿ ಮೋದಿ ಅವರು ಪ್ರತಿ ಹಳ್ಳಿಯಲ್ಲೂ ಕುಡಿಯುವ ನೀರು ಮನೆ ಮನೆಗೆ ತಲುಪಬೇಕು ಎಂಬ ದೂರದೃಷ್ಟಿಹೊಂದಿ ಜಲಜೀವನ್‌ ಯೋಜನೆ ಜಾರಿಗೊಳಿಸಿದ್ದಾರೆ ಎಂದು ಪ್ರಶಂಸಿಸಿದರು. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ದೇಶದಲ್ಲಿ 3.23 ಕೋಟಿ ಮನೆಗಳಿಗೆ ಮಾತ್ರ ನಲ್ಲಿ ಸಂಪರ್ಕವಿತ್ತು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ 11.45 ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. 2025-26ರ ಹೊತ್ತಿಗೆ ದೇಶದ ಪ್ರತಿ ಮನೆಗೂ ನಳದ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಅಪ್ಪ-ಮಗ ಬರೀ ತರ್ಲೆ, ರೌಡಿಸಂ ಮಾಡಸ್ತಾರೆ: ಸಚಿವ ಸೋಮಣ್ಣ

ಜನಧನ್‌ ಖಾತೆ ಬಗ್ಗೆ ವಿರೋಧಿಗಳು ನಗೆಯಾಡಿದ್ದರು. ಆದರೆ, ಈ ಯೋಜನೆ ಘೋಷಣೆಯಾದ ನಂತರ 42 ಕೋಟಿ ಹೊಸ ಖಾತೆ ಸೃಷ್ಟಿಯಾದವು. ಈ ಹಿಂದೆ ಆಧಾರ್‌ ಇರಲಿಲ್ಲ, ಆಧಾರ್‌ ಕಲ್ಪಿಸಿದ್ದು ಕೂಡ ಮೋದಿ ಎಂದರು. ದಿಲ್ಲಿಯಿಂದ 100 ಹಾಕಿದರೆ ಅದು ಹಳ್ಳಿ ತಲುಪವಷ್ಟರಲ್ಲಿ 15 ಆಗುತ್ತದೆ ಎಂದು ದಿ.ರಾಜೀವಗಾಂಧೀ ಅವರೇ ಹೇಳಿದ್ದರು. ಆದರೆ, ಈಗ ಮೋದಿ ಅವರು ಜಾರಿಗೊಳಿಸಿದ ಆಧಾರ್‌, ಬ್ಯಾಂಕ್‌ ಲಿಂಕ್‌ ಮೂಲಕ .100 ದೇಶದ ಯಾವ ಮೂಲೆಗೂ ಬೇಕಾದರೂ ಅದೇ ಮೌಲ್ಯದಲ್ಲಿ ತಲುಪುತ್ತದೆ ಎಂದರು.

Follow Us:
Download App:
  • android
  • ios