Asianet Suvarna News Asianet Suvarna News

ಕಾಂಗ್ರೆಸ್ ವೈಫಲ್ಯ ಮರೆಮಾಚಲು ಸಿದ್ದರಾಮಯ್ಯ ಯತ್ನ: ಪ್ರಲ್ಹಾದ್‌ ಜೋಶಿ

ರಾಜ್ಯ ಸರ್ಕಾರದ ನೂನ್ಯತೆಗಳ ಮುಚ್ಚಲು, ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರವನ್ನ ಬುರುಡೇ ಸರ್ಕಾರವೆಂದು ಟೀಕಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರದ ಹಣೆಬರಹಕ್ಕೆ ಜನರಿಗೆ ಗ್ಯಾಸ್ ಕೊಡುವ ಯೋಗ್ಯತೆಯೂ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹರಿಹಾಯ್ದಿದ್ದಾರೆ.

Union Minister Pralhad Joshi Slams On CM Siddaramaiah At Davanagere gvd
Author
First Published Dec 30, 2023, 8:39 PM IST

ದಾವಣಗೆರೆ (ಡಿ.30): ರಾಜ್ಯ ಸರ್ಕಾರದ ನೂನ್ಯತೆಗಳ ಮುಚ್ಚಲು, ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರವನ್ನ ಬುರುಡೇ ಸರ್ಕಾರವೆಂದು ಟೀಕಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರದ ಹಣೆಬರಹಕ್ಕೆ ಜನರಿಗೆ ಗ್ಯಾಸ್ ಕೊಡುವ ಯೋಗ್ಯತೆಯೂ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹರಿಹಾಯ್ದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಕಾದರೆ ಚಾಲೆಂಜ್ ಮಾಡಲಿ. ಸೂರಿಲ್ಲದವರಿಗೆ ಸೂರು ಅಂತಾ 3 ಕೋಟಿ ಮನೆ ಕಟ್ಟಿದ್ದಾಗಿ ಹೇಳುತ್ತಾರೆ. ಆದರೆ, ಮೋದಿ ಸರ್ಕಾರ ಕಳೆದೊಂದು ದಶಕದಲ್ಲಿ 4 ಕೋಟಿ ಮನೆ ಕೊಟ್ಟಿದೆ. ಇದನ್ನು ಸಹಿಸದ ಸಿಎಂ ಬುರುಡೇ ಸರ್ಕಾರವೆನ್ನುತ್ತಾರೆ ಎಂದರು. ಯುಪಿಎ ಆಳ್ವಿಕೆಯಲ್ಲಿ ಶೇ.12ರಷ್ಟು ವಿದ್ಯುತ್ ಕೊರತೆ ಇತ್ತು. ಈಗ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಬೇರೆ ದೇಶಗಳಿಗೆ ಪೂರೈಸುವಷ್ಟು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ಮುದ್ರಾ, ಸ್ವನಿಧಿ ಯೋಜನೆ, ಡಿಬಿಟಿ ಕೇಂದ್ರ ಸರ್ಕಾರದ ಸಾಧನೆಗಳಾಗಿವೆ ಹೀಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಹತ್ತಾರು ಉದಾಹರಣೆ ಕೊಡಬಹುದು ಎಂದು ತಿರುಗೇಟು ನೀಡಿದರು.

ಬಿಎಸ್‌ವೈ, ವಿಜಯೇಂದ್ರ ಬಗ್ಗೆ ಹಗುರ ಮಾತು ಸಲ್ಲದು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರರನ್ನು ಆಯ್ಕೆ ಮಾಡಿದ್ದು ರಾಷ್ಟ್ರೀಯ ನಾಯಕರು, ಆಯ್ಕೆ ಬಗ್ಗೆ ವಿರೋಧಿಸುವುದು ತಪ್ಪು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಟೀಕಾಕಾರರಿಗೆ ಎಚ್ಚರಿಸಿದ್ದಾರೆ. ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ವಿರೋಧ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಗ್ಗೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು. ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡುವುದೂ ಸರಿಯಲ್ಲ. ಯಾರೇ ಆಗಿದ್ದರೂ ನಿಮ್ಮ ದೂರು, ಸಮಸ್ಯೆಗಳಿದ್ದರೆ ಬಹಿರಂಗ ಹೇಳಿಕೆ ನೀಡುವುದು ನಿಲ್ಲಿಸಿ. ಪಕ್ಷದ ವರಿಷ್ಠರಾದ ಅಮಿತ್ ಶಾ, ರಾಜನಾಥ್ ಸಿಂಗ್‌, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಳಿ ಮಾತನಾಡಲಿ. ಏನೇ ಸಮಸ್ಯೆಗಳಿದ್ದರೆ, ತಪ್ಪಾಗಿದ್ದರೆ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದಿಂದ ಇಬ್ಬಗೆ ನೀತಿ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಜನರಿಗೆ ಟೋಪಿ ಹಾಕುವುದರಲ್ಲಿ, ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿನವರು ನಂಬರ್ ಒನ್‌. ಸುಳ್ಳು ಹೇಳುವ ಸ್ಪರ್ಧೆಯಲ್ಲಿ ಕಾಂಗ್ರೆಸ್ ಪ್ರಥಮ ಸ್ಥಾನದಲ್ಲಿದೆ. ಕಾಂಗ್ರೆಸ್ಸಿನ ನಾಯಕರು 30 ವರ್ಷದಿಂದ ಒಂದು ವಾಚ್ ಬಾವಿಗೆ ಬಿದ್ದಿತ್ತು ಎಂದು ಕತೆ ಹೇಳುತ್ತಾರೆ.
-ಪ್ರಲ್ಹಾದ್‌ ಜೋಶಿ, ಕೇಂದ್ರ ಸಚಿವ

Follow Us:
Download App:
  • android
  • ios