ಜಮೀರ್ ಅಹಮದ್ ಖಾನ್‌ ಒಬ್ಬ ಮತಾಂಧ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಜಮೀರ್ ಅಹಮದ್ ಖಾನ್‌ ಒಬ್ಬ ಮತಾಂಧ. ಅವನ ಹೇಳಿಕೆಯಿಂದ ಹಾವೇರಿಯಲ್ಲಿ ಕಲ್ಲು ತೂರಾಟದಂತಹ ಗಂಭೀರ ವಿದ್ಯಮಾನ ನಡೆದವು. ರಾಜಕೀಯ ವ್ಯಕ್ತಿಗಳು ಅನಧಿಕೃತ ಆದೇಶ ಪಾಲನೆ ಮಾಡುವ ಅಧಿಕಾರಿಗಳಿಗೆ ಕನಿಷ್ಠ ಜ್ಞಾನವೂ ಇಲ್ವಾ? ಪ್ರತಿಯೊಬ್ಬ ಅಧಿಕಾರಿ ಇದಕ್ಕೆ ಉತ್ತರ ನೀಡುವ ಪರಿಸ್ಥಿತಿ ಬರಲಿದೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ 

Union Minister Pralhad Joshi Slams Minister Zameer Ahmed Khan grg

ಹುಬ್ಬಳ್ಳಿ(ನ.02):  ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆ ಬಳಿಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸುವ ಯೋಚನೆಯಲ್ಲಿ ರಾಜ್ಯ ಸರ್ಕಾರವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು. 
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಮಾತುಗಳು ಕೇಳಿದರೆ ಚುನಾವಣೆ ದೃಷ್ಟಿಯಿಂದ ಮಾತ್ರ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದಾರೆ ಅನಿಸುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿಕೆ ನೀಡಿದ್ದು, ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದರು. 

ಖರ್ಗೆ ಅವರ ಹೇಳಿಕೆಯ ಶೈಲಿ ನೋಡಿದರೆ ಮಹಾರಾಷ್ಟ್ರ ಹಾಗೂ ಜಾರ್ಖಾಂಡ್ ಚುನಾವಣೆಯವರೆಗೂ ಸುಮ್ಮನಿರಿ ಅಂದ ಹಾಗೇ ಇದೆ. ಬಳಿಕ ತೆಗೆದು ಹಾಕಿ ಎಂಬ ಮಾನಸಿಕತೆಯಲ್ಲಿ ಅವರಿದ್ದಾರೆ. ಕಾಂಗ್ರೆಸ್ ಸುಳ್ಳು ಆಶ್ವಾಸನೆ ನೀಡುವ ಮೂಲಕ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಲು ಯತ್ನಿಸಿದೆ ಎಂದು ಹರಿಹಾಯ್ದರು. 

ವಿಜಯಪುರ ಬಳಿಕ ಮತ್ತೆರಡು ಜಿಲ್ಲೆಗೆ ವಕ್ಫ್ ಶಾಕ್! ರೈತರ ಭೂಮಿಯಲ್ಲಿ 'ವಕ್ಫ್ ಆಸ್ತಿ' ಹೆಸರು!

ಐದು ಗ್ಯಾರಂಟಿ ನಾವು ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಎಲ್ಲಿ ಪೂರೈಸಿದ್ದಾರೆ. ಯುವನಿಧಿ ಯೋಜನೆ 2023-24ರಲ್ಲಿ ಪದವಿ ಮುಗಿಸಿದ ಯಾವ ಯುವಕರಿಗೂ ನೀಡಿಲ್ಲ. ಕಾಂಗ್ರೆಸ್ ಎಂಥ ಖದೀಮರು ಅ೦ ದರೆ ನಾವು ನೀಡುತ್ತಿದ್ದ 5 ಕೆಜಿ ಅಕ್ಕಿ ಯನ್ನು ತಾವೇ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇಂತಹ ಕಳ್ಳರ ನ್ನು ಎಲ್ಲಿ ಹುಡುಕಿದರೂ ಸಿಗುವುದಿಲ್ಲ ಎಂದು ಕಿಡಿಕಾರಿದರು. 

ಕಾಂಗ್ರೆಸ್ ಸುಳ್ಳು ಆಶ್ವಾಸನೆಗೆ ಕಿವಿಗೊಡದ ಜಮ್ಮು- ಕಾಶ್ಮೀರ ಹಾಗೂ ಹರಿಯಾಣ ಜನರು ಅವರ ನ್ನು ಕಡೆಗಣಿಸಿದರು. ಅದೇ ರೀತಿ ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲೂ ಕಿತ್ತೆಸೆಯುತ್ತಾರೆ. ಆಮ್ ಆದಿ ಪಕ್ಷ ಕಾಂಗ್ರೆಸ್ ಅನ್ನು ಅನೇಕ ರಾಜ್ಯದಲ್ಲಿ ತೆಗೆದು ಹಾಕಿದೆ. ದೆಹಲಿಯಲ್ಲಿ ಕಾಂಗ್ರೆಸ್ ಶೂನ್ಯವಾಗಿದೆ ಎಂದು ತಿಳಿಸಿದರು. 

ಜಮೀರ್ ಮತಾಂಧ: 

ಜಮೀರ್ ಅಹಮದ್ ಖಾನ್‌ ಒಬ್ಬ ಮತಾಂಧ. ಅವನ ಹೇಳಿಕೆಯಿಂದ ಹಾವೇರಿಯಲ್ಲಿ ಕಲ್ಲು ತೂರಾಟದಂತಹ ಗಂಭೀರ ವಿದ್ಯಮಾನ ನಡೆದವು. ರಾಜಕೀಯ ವ್ಯಕ್ತಿಗಳು ಅನಧಿಕೃತ ಆದೇಶ ಪಾಲನೆ ಮಾಡುವ ಅಧಿಕಾರಿಗಳಿಗೆ ಕನಿಷ್ಠ ಜ್ಞಾನವೂ ಇಲ್ವಾ? ಪ್ರತಿಯೊಬ್ಬ ಅಧಿಕಾರಿ ಇದಕ್ಕೆ ಉತ್ತರ ನೀಡುವ ಪರಿಸ್ಥಿತಿ ಬರಲಿದೆ ಎಂದರು.

Latest Videos
Follow Us:
Download App:
  • android
  • ios