Asianet Suvarna News Asianet Suvarna News

ಕಾಂಗ್ರೆಸ್‌ನ ಇಂದಿನ ಜೋಕರ್ ಪಟ್ಟ ಯಾರಿಗೆ, ಪ್ರಹ್ಲಾದ್ ಜೋಶಿ ಆಯ್ಕೆ

ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ| ಪೌರತ್ವ ಕಾಯ್ದೆ ವಿರೋಧಿಸುವುದಕ್ಕೆ ಅರ್ಥವೇ ಇಲ್ಲ| ಜೋಕರ್ ಗಳ ಮಾತನ್ನು ಎಂಜಾಯ್ ಮಾಡಬೇಕು| ಈ ದೇಶದ ಜನ ಸದಾ ನರೇಂದ್ರ ಮೋದಿ ಅವರ ಪರವಾಗಿ ನಿಂತಿದ್ದಾರೆ.

Union Minister Pralhad Joshi Slams Congress Leader C M Ibrahim
Author
Bengaluru, First Published Jan 5, 2020, 4:35 PM IST

ಧಾರವಾಡ (ಜ. 05) ದೇಶದಲ್ಲಿ ಪೌರತ್ವ ಕಾಯಿದೆ ತಿದ್ದುಪಡಿಗೆ ವಿರೋಧ ವ್ಯಕ್ತವಾಗಿದೆ. ಧಾರ್ಮಿಕ ಆಧಾರದಲ್ಲಿ ಜನರನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.  ಪೌರತ್ವ ಕೊಡದಕ್ಕೆ ಕಾಂಗ್ರೆಸ್ ವಿರೋಧ ಯಾಕೆ? ಈ ಪ್ರಶ್ನೆಗೆ ಇವತ್ತಿಗೂ ಉತ್ತರ ನೀಡಿಲ್ಲ. ಕಾಂಗ್ರೆಸ್ ಅವಸಾನ ಈಗಾಗಲೇ ಆಗಿದೆ, ಇನ್ನು ಪೂರ್ತಿ ಆಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭವಿಷ್ಯ ನುಡಿದಿದ್ದಾರೆ.

ಹೀಗಾಗಿ ಮೂರು ಕೋಟ ಜನರನ್ನು ಸಂಪರ್ಕ ಮಾಡುವ ತೀರ್ಮಾನ ಮಾಡಿದ್ದೇವೆ.  ಕೊಪ್ಪಳದಲ್ಲಿ ಬಾಂಗ್ಲಾ ನಿರಾಶ್ರಿತರಿಗೆ ಪೌರತ್ವ ಬಂದೇ ಬರುತ್ತದೆ. ಈ ಬಗ್ಗೆ ಸಂಗಣ್ಣ ಕರಡಿ 2004 ರಲ್ಲಿ ಪತ್ರ ಬರೆದಿದ್ದರು.  ದೇಶದಲ್ಲಿ ಮಹಾತ್ಮ ಗಾಂಧಿ ಅವರು ಅಪೇಕ್ಷೆ ಪಟ್ಟಿದ್ದರು. ಹೊರ ದೇಶದಲ್ಲಿನವರಿಗೆ ತೊಂದರೆ ಆದರೆ ಅವರನ್ನು ನೋಡಿಕೊಳ್ಳಬೇಕು ಎಂದು ಗಾಂಧೀಜಿ ಹೇಳಿದ್ದರು. 

ಪೌರತ್ವ ಪ್ರತಿಭಟನೆ ವೇಳೆ ಬೆಂಗಳೂರು ಪೊಲೀಸರಿಗೆ ಜೈಕಾರ

ಮೋದಿ, ಅಮಿತ್ ಶಾ ದೇಶವನ್ನು ಅಧೋಗತಿಗೆ ತಂದಿದ್ದಾರೆ ಎಂದು ಸಿಎಂ ಇಬ್ರಾಹಿಂ ಹೇಳುತ್ತಾರೆ. 2014, 2019 ರಲ್ಲಿ ಜನರು ತೀರ್ಮಾನ ಮಾಡಿದ್ದಾರೆ. ಮೋದಿಯವರ ಪರವಾಗಿ ದೇಶದ ಜನರು ತೀರ್ಪು ನೀಡಿದ್ದಾರೆ. ಮೋದಿಯವರ ವಿರುದ್ಧ ಈ ಪ್ರಮಾಣದ ಅಪಪ್ರಚಾರ ಮತ್ತು ಬೈಗುಳ ಎಂದೂ ಆಗಿಲ್ಲ. ಮೋದಿಯವರನ್ನು ದೇಶದ ಜನ ಕೈ ಹಿಡಿದಿದ್ದಾರೆ ಎಂದು ಜೋಶಿ ಸಮರ್ಥಿಸಿಕೊಂಡರು.

ರಾಹುಲ್ ಗಾಂಧಿಯವರಿಗೆ ರಫೆಲ್ ವಿಚಾರದಲ್ಲಿ ಕಪಾಳಿಗೆ ಹೊಡೆದಂತೆ ಸುಪ್ರೀಂ ಹೇಳಿದೆ. ಇಬ್ರಾಹಿಂ ನಂತಹ ವಿದೂಷಕರು ಕಾಂಗ್ರೆಸ್ ನಲ್ಲಿ ಏನಾದರೂ ಸಿಗಲಿ ಅಂತಾ ಹಾಗೆ ಹೇಳುತ್ತಾರೆ. ಸರ್ಕಸ್ ನಲ್ಲಿ ಜೋಕರ್ ಇದ್ದಾಗೆ,  ಅದನ್ನು ನಾವು ಎಂಜಾಯ್ ಮಾಡಬೇಕು ಎಂದು ಗೇಲಿ ಮಾಡಿದರು.

Follow Us:
Download App:
  • android
  • ios