Asianet Suvarna News Asianet Suvarna News

ಷರತ್ತು ಹೇರಿ ಗ್ಯಾರಂಟಿ ಸಿಗದಂತೆ ಕಾಂಗ್ರೆಸ್‌ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಸರ್ಕಾರ ಘೋಷಿಸಿದ ಎಲ್ಲ ಐದೂ ಗ್ಯಾರಂಟಿಗಳಿಗೆ ದಿನದಿಂದ ದಿನಕ್ಕೆದಿನದಿಂದ ದಿನಕ್ಕೆ ಹೊಸ ಹೊಸ ಷರತ್ತುಗಳನ್ನು ಹಾಕಲಾಗುತ್ತಿದೆ. ಇದೀಗ ಗೃಹಲಕ್ಷ್ಮೀಗೂ ಹೊಸ ಕಂಡಿಷನ್‌ ಹಾಕಿದೆ. ಈ ಮೂಲಕ ಯಾರಿಗೂ ಯೋಜನೆ ಸಿಗದಂತೆ ಹುನ್ನಾರ ಮಾಡಲಾಗುತ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

Union Minister Pralhad Joshi Slams Congress Government grg
Author
First Published Jun 10, 2023, 4:00 AM IST | Last Updated Jun 10, 2023, 4:00 AM IST

ಧಾರವಾಡ(ಜೂ.10):  ಗ್ಯಾರಂಟಿ ಯೋಜನೆಗಳು ಯಾರಿಗೂ ಸಿಗದಂತೆ ಕಾಂಗ್ರೆಸ್‌ ಸರ್ಕಾರ ಹೊಸ ಹೊಸ ಷರತ್ತುಗಳನ್ನು ಹಾಕುತ್ತಿದ್ದು, ಅವರ ಯೋಜನೆಗಳು ಗೊಂದಲಮಯವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಘೋಷಿಸಿದ ಎಲ್ಲ ಐದೂ ಗ್ಯಾರಂಟಿಗಳಿಗೆ ದಿನದಿಂದ ದಿನಕ್ಕೆದಿನದಿಂದ ದಿನಕ್ಕೆ ಹೊಸ ಹೊಸ ಷರತ್ತುಗಳನ್ನು ಹಾಕಲಾಗುತ್ತಿದೆ. ಇದೀಗ ಗೃಹಲಕ್ಷ್ಮೀಗೂ ಹೊಸ ಕಂಡಿಷನ್‌ ಹಾಕಿದೆ. ಈ ಮೂಲಕ ಯಾರಿಗೂ ಯೋಜನೆ ಸಿಗದಂತೆ ಹುನ್ನಾರ ಮಾಡಲಾಗುತ್ತಿದೆ. ಎಲ್ಲ ಗ್ಯಾರಂಟಿಗಳಲ್ಲಿ ಸುಳ್ಳು ಹೇಳಲಾಗುತ್ತಿದೆ, ಜನರ ದಾರಿ ತಪ್ಪಿಸಿ ಮತ ಗಿಟ್ಟಿಸಿಕೊಳ್ಳಲಾಗಿದೆ ಎಂದು ಟೀಕಿಸಿದರು.

ಸಿದ್ದರಾಮಯ್ಯನವರು ಹತ್ತು ಕೆಜಿ ಅಕ್ಕಿ ಕೊಡುತ್ತೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಹತ್ತು ಕೆಜಿಯಲ್ಲಿ ಐದನ್ನು ಕೇಂದ್ರ ಕೇಂದ್ರ ಸರ್ಕಾರವೇ ನೀಡುತ್ತಿದ್ದು, ಆಹಾರ ಭದ್ರತಾ ಕಾಯ್ದೆ ಅಡಿ ರಾಜ್ಯಕ್ಕೆ ಸಿಗುತ್ತಿದೆ. ಈ ವಿಷಯವನ್ನು ರಾಜ್ಯದ ಜನತೆಗೆ ಸ್ಪಷ್ಟವಾಗಿ ಸಿದ್ದರಾಮಯ್ಯ ಹೇಳಬೇಕು. ಇಲ್ಲವಾದರೆ ಕೇಂದ್ರದ ಅಕ್ಕಿ ಬೇಡ ಎಂದು ಹೇಳಿ. ಈ ರೀತಿ ಸುಳ್ಳು ಹೇಳಬೇಡಿ ಎಂದು ತಿಳಿಸಿದರು.

ಧಾರವಾಡದಲ್ಲಿ ಮತ್ತೆ ಆರಂಭವಾಯ್ತಾ ಲವ್ ಜಿಹಾದ್: ಮದುವೆ ತಡೆ ಹಿಡಿದ ಬಜರಂಗದಳ ಕಾರ್ಯಕರ್ತರು

ಚಕ್ರವರ್ತಿ ಸೂಲಿಬೆಲೆಗೆ ಎಂ.ಬಿ.ಪಾಟೀಲ್‌ ಎಚ್ಚರಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜೋಶಿ, ಅವರು ಮಾತನಾಡಿದ ಭಾಷೆ ಬಗ್ಗೆ ಕ್ಷಮೆ ಕೇಳಬೇಕು. ಮೋದಿಯವರಿಗೆ ಅಯೋಗ್ಯವಾದ ಭಾಷೆ ಬಳಸಿದ್ದರು. ಆಗಲೂ ಕೇಂದ್ರದಲ್ಲಿ ನಮ್ಮ ಸರ್ಕಾರವಿತ್ತು. ಆಗಲೂ ನಾವು ಸಂಯಮದಿಂದ ವರ್ತಿಸಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಟೀಕೆ-ಟಿಪ್ಪಣೆಗಳು ಸಹಜ. ಇವರು ಮಾಡುತ್ತಿರುವುದನ್ನು ನೋಡಿ ಹಿಟ್ಲರ್‌ ಸರ್ಕಾರ ಎಂದು ಚಕ್ರವರ್ತಿ ಹೇಳಿದ್ದಾರೆ. ಅಷ್ಟಕ್ಕೇ ಜೈಲಿಗೆ ಹಾಕುತ್ತೇವೆ ಅಂದರೆ ಹೇಗೆ? ಇದು ದಾಷ್ಟ್ರ್ಯ, ದುರಹಂಕಾರದ ಮಾತು. ಕಾಂಗ್ರೆಸ್ಸಿನವರಿಗೆ ಪಿತ್ತ ನೆತ್ತಿಗೆ ಏರಿದೆ. ಅದಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ. ಜನರು ಇದಕ್ಕೆ ಉತ್ತರ ಕೊಡುತ್ತಾರೆ. ಅಧಿ​ಕಾರದ ದುರಹಂಕಾರ ಬಂದಾಗ ಹೀಗಾಗುತ್ತದೆ ಎಂದರು.

Latest Videos
Follow Us:
Download App:
  • android
  • ios