*   ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ*   ಬೊಮ್ಮಾಯಿ ಅವರೇ ಜನವರಿಯ ಬಳಿಕವೂ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಾರೆ*   ಒತ್ತಾಯದ, ಆಮಿಷದ, ಬಲವಂತದ ಮತಾಂತರ ತಪ್ಪು 

ಬೆಂಗಳೂರು(ಡಿ.13): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೇ 2023ರ ಚುನಾವಣೆಯ(Election) ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿರುತ್ತಾರೆ ಕೇಂದ್ರ ಸಂಸದೀಯ ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ(Pralhad Joshi) ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ(Chief Minister) ಬದಲಾವಣೆ ಬಗ್ಗೆ ಯಾವುದೇ ಪ್ರಸ್ತಾಪ ಅಥವಾ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಬೊಮ್ಮಾಯಿ ಅವರೇ ಜನವರಿಯ ಬಳಿಕವೂ ರಾಜ್ಯದ(Karnataka) ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಅಧಿಕೃತವಾಗಿಯೇ ನಾನು ಹೇಳುತ್ತಿದ್ದೇನೆ ಎಂದರು.

ಇನ್ನು ಮತಾಂತರ ನಿಷೇಧ ಕಾಯ್ದೆಯನ್ನು(Conversion Prohibition Act) ಕಾಂಗ್ರೆಸ್‌(Congress) ಏಕೆ ವಿರೋಧಿಸುತ್ತಿದೆ ಎಂದು ನನಗೆ ಅರ್ಥ ಆಗುತ್ತಿಲ್ಲ. ಒತ್ತಾಯದ, ಆಮಿಷದ, ಬಲವಂತದ ಮತಾಂತರ ತಪ್ಪು ಎಂದು ಎಲ್ಲರೂ ಒಪ್ಪಿಕೊಳ್ಳಬೇಕು. ಕಾಲು ಇಲ್ಲದವರಿಗೆ ಕಾಲು ಕೊಡುತ್ತೇನೆ, ಕಣ್ಣಿಲ್ಲದವನಿಗೆ ಕಣ್ಣು ಕೊಡುತ್ತೇನೆ ಎಂಬ ಮೂಢ ನಂಬಿಕೆ ಸೃಷ್ಟಿಸಿ ಮತಾಂತರ ಮಾಡುವುದು ಸರಿಯಲ್ಲ. ಬಲವಂತ, ಆಮಿಷದ ಮತಾಂತರಕ್ಕೆ ಮತಾಂತರ ನಿಷೇಧ ಕಾಯ್ದೆ ಮೂಲಕ ತಡೆ ಬೀಳಬಹುದು ಎಂಬ ಚರ್ಚೆ ನಡೆಯುತ್ತಿದೆ. ಆದರೆ ಕಾಯ್ದೆ ಇನ್ನೂ ಅಂತಿಮವಾಗಿಲ್ಲ. ಕ್ರೈಸ್ತ, ಮುಸಲ್ಮಾನರು(Muslim), ಸಿಖ್ಖರ(Sikh) ಧಾರ್ಮಿಕ ನಂಬಿಕೆ, ಆಚರಣೆಗೆ ಪೂರ್ಣ ಸ್ವಾತಂತ್ರ್ಯವಿದೆ. ನಮ್ಮಲ್ಲೇ 33 ಸಾವಿರ ಕೋಟಿ ದೇವತೆಗಳಿದ್ದಾರೆ. ಇನ್ನೊಬ್ಬರು ಬಂದರೆ ನಮ್ಮ ಅಭ್ಯಂತರವಿಲ್ಲ. ಆದರೆ ಆಸೆ, ಆಮಿಷಗಳಿಂದ ಪೂಜಾ ಪದ್ಧತಿ, ನಿಷ್ಠೆಯನ್ನು ಬದಲಾಯಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

Karnataka Politics: ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ, ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ, ಮುಹೂರ್ತ ಫಿಕ್ಸ್

ನಾರಾಯಣಾಚಾರ್ಯರ ಗ್ರಂಥ ಪ್ರಸಾರಕ್ಕೆ ಕ್ರಮ

ಬೆಂಗಳೂರು: ಇತ್ತೀಚೆಗೆ ನಿಧನರಾದ ವಿದ್ವಾಂಸ ಡಾ. ಕೆ.ಎಸ್‌.ನಾರಾಯಣಾಚಾರ್ಯ(Dr KS Narayanacharya) ಅವರು ರಚಿಸಿರುವ 150ಕ್ಕೂ ಹೆಚ್ಚು ಗ್ರಂಥಗಳನ್ನು ಮರು ಮುದ್ರಿಸಿ ಜನ ಸಮುದಾಯಗಳಿಗೆ ತಲುಪಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು(Central Government) ಸೂಕ್ತ ಕ್ರಮಕೈಗೊಳ್ಳಲಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಭರವಸೆ ನೀಡಿದರು.

ಭಾನುವಾರ ಸಂಜಯ ನಗರದಲ್ಲಿರುವ ನಾರಾಯಣಾಚಾರ್ಯ ಅವರ ಮನೆಗೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ಚತ್ಥನಾರಾಯಣ ಅವರೊಂದಿಗೆ ಭೇಟಿ ನೀಡಿ, ನಾರಾಯಣಾಚಾರ್ಯರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, ಈ ಭರವಸೆ ನೀಡಿದರು.

ನಾರಾಯಣಾಚಾರ್ಯರನ್ನು ಧಾರವಾಡದ(Dharwad) ವಿದ್ಯಾರ್ಥಿ ದಿನಗಳಿಂದಲೂ ನಾನು ಬಲ್ಲೆ. ಅವರು, ಭಾರತದ ಸಂಸ್ಕೃತಿ, ವೇದ, ಉಪನಿಷತ್ತು, ಮಹಾಭಾರತ, ರಾಮಾಯಣ, ಭಾಗವತ, ಭಗವದ್ಗೀತೆಗಳ ಬಗ್ಗೆ ತಲಸ್ಪರ್ಶಿ ಜ್ಞಾನವನ್ನು ಹೊಂದಿದ್ದ ಜ್ಞಾನದ ಪರ್ವತವಾಗಿದ್ದರು ಎಂದು ಸ್ಮರಿಸಿದರು.

ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು, ನಾರಾಯಣಾಚಾರ್ಯರ ಗ್ರಂಥಗಳನ್ನು ಮರುಮುದ್ರಿಸಿ ಪ್ರಸಾರ ಮಾಡುವ ಕುರಿತು ಮುಂದಿನ ಹೆಜ್ಜೆ ಇಡಲಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದಿಂದಲೂ ಅಗತ್ಯ ನೆರವು ಕೊಡಲಾಗುವುದು. ನಾರಾಯಣಾಚಾರ್ಯರ ಬಗ್ಗೆ ಪ್ರಧಾನಿ ಮೋದಿಯವರಿಗೂ(Narendra Modi) ಅಪಾರ ಗೌರವವಿತ್ತು. ಅವರ ನಿಧನದಿಂದ ಸಮಾಜ ಕಳೆಗುಂದಿದೆ ಎಂದರು. ಈ ಸಂದರ್ಭದಲ್ಲಿ ಪ್ರಹ್ಲಾದ್‌ ಜೋಶಿ ಮತ್ತು ಸಚಿವ ಅಶ್ವತ್ಥ ನಾರಾಯಣ ಅವರು ನಾರಾಯಣಾಚಾರ್ಯರ ಗ್ರಂಥಗಳನ್ನು ವೀಕ್ಷಿಸಿದರು.

Karnataka Politics: ಕಲಬುರಗಿ ಸಂಸದ ಜಾಧವ್‌ ವಿರುದ್ಧ ಶರಣಪ್ರಕಾಶ ವಾಗ್ದಾಳಿ

ಬೆಣ್ಣಿ ಹಳ್ಳದ ಪ್ರವಾಹಕ್ಕೆ ಶಾಶ್ವತ ಸಮಸ್ಯೆ ಕಲ್ಪಿಸಿ

ಹುಬ್ಬಳ್ಳಿ: ಪ್ರತಿವರ್ಷ ಉಂಟಾಗುವ ಬೆಣ್ಣಿ ಹಳ್ಳದ ಪ್ರವಾಹಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಹುಬ್ಬಳ್ಳಿ(Hubballi) ತಾಲೂಕಿನ ಹೆಬಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಮನವಿ ಸಲ್ಲಿಸಿದರು.

ಮಳೆಗಾಲ(Rain) ಹಾಗೂ ಪ್ರವಾಹದಿಂದಾಗಿ(Flood) ಪ್ರತಿವರ್ಷ ಬೆಣ್ಣಿಹಳ್ಳದ ನೀರು ತನ್ನ ವ್ಯಾಪ್ತಿಯ ಪ್ರದೇಶದಲ್ಲಿರುವ ಜಮೀನಿಗೆ ನುಗ್ಗಿ ಸಾವಿರಾರು ಎಕರೆ ಬೆಳಹಾನಿಗೆ(Corp Damage) ಕಾರಣವಾಗುತ್ತಿದೆ. ಬೆಣ್ಣಿ ಹಳ್ಳದಲ್ಲಿ ಅಪಾರ ಪ್ರಮಾಣದ ಹೂಳು ತುಂಬಿರುವುದರಿಂದ ಈ ಸಮಸ್ಯೆ ಎದುರಾಗುತ್ತಿದ್ದು, ಅದಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಬೆಣ್ಣಿ ಹಳ್ಳದ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವ ನಿಟ್ಟಿನಲ್ಲಿ ಹಾಗೂ ಅಕ್ಕ-ಪಕ್ಕದ ಜಮೀನಿನಲ್ಲಿ ಉಂಟಾಗುವ ಬೆಳೆಹಾನಿ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಕೇಂದ್ರ ಸಚಿವ ಜೋಶಿ, ಆದಷ್ಟುಬೇಗ ಯೋಜನೆ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.