ಹುಬ್ಬಳ್ಳಿ, (ಜ.10): ಕಾಂಗ್ರೆಸ್​​ನಲ್ಲಿ ಅದು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇಬ್ಬರು ಸೇರಿ ರೂ‌ಮಿನಲ್ಲಿ ಒಳಗಡೆ ಹೋದರೆ ಒಬ್ಬ ಲೀಡರ್ ಹುಟ್ಟುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ವ್ಯಂಗ್ಯವಾಡಿದರು.

ನೂತನ ಗ್ರಾಮ ಪಂಚಾಯತ್ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ಬಿಜೆಪಿ ಪಕ್ಷದಲ್ಲಿ ಗ್ರಾಮ ಪಂಚಾಯತಿಯಿಂದ ಪಾರ್ಲಿಮೆಂಟ್​​ವರೆಗೂ, ಪಾರ್ಲಿಮೆಂಟ್​ನಿಂದ ಪ್ರಧಾನ ಮಂತ್ರಿವರೆಗೂ ಕಾರ್ಯಕರ್ತ ಹೋಗಬಹುದು. ಆದ್ರೆ,  ಕಾಂಗ್ರೆಸ್ ಪಕ್ಷದಲ್ಲಿ ಇಬ್ಬರು ರೂ‌ಮಿನಲ್ಲಿ ಒಳಗಡೆ ಹೋದ್ರೆ ಒಬ್ಬ ಲೀಡರ್ ಹುಟ್ಟುತ್ತಾರೆ ಎಂದು ಹೇಳಿದರು.

ಜಮೀರ್ ಅಹ್ಮದ್‌ ಖಾನ್‌ಗೆ ಕೇಸರಿ ಶಾಲು ಹಾಕಿ ಸನ್ಮಾನಿಸಿದ ತೇಜಸ್ವಿ ಸೂರ್ಯ: ಕಾರಣ..?

ಬಿಜೆಪಿಯವರು ರಸ್ತೆಯಲ್ಲಿ ಹೊಡೆದಾಡಿ ಲೀಡರ್ ಆಗುತ್ತಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಇಬ್ಬರು ಸೇರಿ ರೂ‌ಮಿನಲ್ಲಿ ಒಳಗಡೆ ಹೋದರೆ ಒಬ್ಬ ಲೀಡರ್ ಹುಟ್ಟುತ್ತಾರೆ. ಈ ಹಿಂದೆ ಒಂದು ಬಾರಿ ಪ್ರಿಯಾಂಕಾ ಗಾಂಧಿಗೆ ಗಂಡು ಮಗು ಹುಟ್ಟಿದಾಗ ಲೀಡರ್ ಹುಟ್ಟಿದ್ದಾನೆಂದು ಹೇಳಿ ಕಾಂಗ್ರೆಸ್ ಅವರು ಸ್ವೀಟ್ ಹಂಚಿದ್ರು. ನಾನು ಏಕೆ ಎಂದು ಕೇಳಿದೆ. ಲೀಡರ್ ಯಾವುದೇ ಸಂದರ್ಭದಲ್ಲಿ ಹುಟ್ಟಲ್ಲ, ಲೀಡರ್ ಬೆಳೆಯುತ್ತೇನೆ ಎಂದಿದ್ದೆ. ಆಗ ಕಾಂಗ್ರೆಸ್​​ನವರು ನಮಲ್ಲಿ ಲೀಡರ್​​ಗಳು ಹುಟ್ಟುತ್ತಾರೆ ಎಂದಿದ್ದರು ಎಂದರು.

ರಾಹುಲ್ ಗಾಂಧಿಯ ಅವರ ಜೀವನಕ್ಕೆ ಒಂದು ಪ್ಲ್ಯಾನ್ ಇಲ್ಲಾ. ಅಂತಹವರು ಲಾಕ್‌ಡೌನ ಅನ್‌ ಪ್ಲ್ಯಾನ್ ಎಂದು ಟ್ವಿಟ್ ಮಾಡಿದ್ದರು. ಟ್ವೀಟ್​ ಮಾಡಿ ದೇಶ ಬಿಟ್ಟು ಹೊರದೇಶಕ್ಕೆ ಪೂರ್ವಜರನ್ನ ನೋಡಲಿಕ್ಕೆ ಓಡಿ ಹೋಗಿದ್ದರು ಎಂದು ಕಿಡಿಕಾರಿದರು.